ಬಿಜೆಪಿ ಕಾರ್ಯಕರ್ತರಿಂದ ವಿಜಯೋತ್ಸವ

267

ಮಂಡ್ಯ/ಮಳವಳ್ಳಿ : ಪಂಚರಾಜ್ಯಗಳ ಚುನಾವಣೆಯ ನಾಲ್ಕು ರಾಜ್ಯದಲ್ಲಿ ಅಧಿಕಾರ ಬಂದ ಹಿನ್ನಲೆಯಲ್ಲಿ ಮಳವಳ್ಳಿ ಪಟ್ಟಣದಲ್ಲಿ ತಾಲ್ಲೂಕು ಬಿಜೆಪಿ ಘಟಕದ ವತಿಯಿಂದ ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಲಾಯಿತು. ಇದೇ ಸಂದರ್ಭದಲ್ಲಿ ಜಿಲ್ಲಾ ಕಾಯ೯ದಶಿ೯ ಎಂ.ಎನ್ ಕೃಷ್ಣ ಮಾತನಾಡಿ, ಪಂಚರಾಜ್ಯದಲ್ಲಿ ನಾಲ್ಕು ರಾಜ್ಯಗಳಲ್ಲಿ ಬಿಜೆಪಿ ಪಕ್ಷ ಅಧಿಕಾರದ ಚುಕ್ಕಾಣಿ ಹಿಡಿಯಲು ಪ್ರದಾನಿ ಮೋದಿರವರ ಪಾತ್ರವಿದೆ. ಮೋದಿಯವರ ಆಡಳಿತ ವಿಶ್ವವೇ ಮೆಚ್ಚುಗೆ ವ್ಯಕ್ತಪಡಿಸಿ ವಿಶ್ವನಾಯಕ ಎಂದು ಒಪ್ಪಿಕೊಂಡಿದೆ. ಮುಂದಿನ ದಿನಗಳಲ್ಲಿ ಕನಾ೯ಟಕ ಸೇರಿದಂತೆ ಎಲ್ಲಾ ಕಡೆ ಬಿಜೆಪಿ ಆಡಳಿತಕ್ಕೆ ಬಂದು ಕಾಂಗ್ರೆಸ್ ಮುಕ್ತ ಭಾರತ ದೇಶವಾಗಲಿದೆ ಎಂದರು. ವಿಜಯೋತ್ಸವ ಅಚರಿಸುವ ಸಂದರ್ಭದಲ್ಲಿ ಪೊಲೀಸರು ಬಿಜೆಪಿ ಕಾಯ೯ಕತ೯ರಲ್ಲಿ ಮಾತಿನ ಚಕಮುಕಿ ನಡೆಯಿತು. ಸಾವ೯ಜನಿಕರಿಗೆ ಸಿಹಿ ಹಂಚಿ ಸಂಭ್ರಮಿಸಿದರು. ಈ ಸಂದರ್ಭದಲ್ಲಿ ಬಿಜೆಪಿ ನಗರಾಧ್ಯಕ್ಷ ರಾಜೀವ್, ಸ್ಲಂ ಮೊಚಾ೯ ಅಧ್ಯಕ್ಷ ಸಿದ್ದರಾಜು, ವೇಣು, ಮುದ್ದಮಲ್ಲು, ರಾಜು, ಸಂದೇಶ, ಸೇರಿದಂತೆ ಮತ್ತಿತ್ತರರು ಇದ್ದರು