ಅತಿಕ್ರಮ ಸರ್ಕಾರಿ ಜಮೀನು ಸರ್ಕಾರದ ಸ್ವಾದೀನಕ್ಕೆ

398

ಬೆಂಗಳೂರು/ಕೃಷ್ಣರಾಜಪುರ: ಪ್ರತಿಷ್ಟಿತ ವಾಣಿಜ್ಯ ಕಟ್ಟಡ (ವಿಆರ್ ಬೆಂಗಳೂರ್ ಮಾಲ್) ಅತಿಕ್ರಮಿಸಿ ಸುಮಾರು 50ಕೋಟಿ ಮೌಲ್ಯದ ಸರ್ಕಾರಿ ಜಮೀನನ್ನು ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ  ತಹಸಿಲ್ದಾರ್ ಹಾಗೂ ಜಂಟಿ ಅಯುಕ್ತ ನೇತೃತ್ವದಲ್ಲಿ ಸರ್ಕಾರದ ಸ್ವಾಧೀನಕ್ಕೆ ಪಡೆಯಲಾಯಿತು.  ಕೆಆರ್ ಪುರ ಹೋಬಳಿಯ ದೇವಸಂದ್ರ ಗ್ರಾಮದ ಸರ್ವೇ ನಂ.40/9ರಲ್ಲಿ 1ಎಕರೆ ಸರ್ಕಾರಿ ಕಟ್ಟೆ ಖರಾಬು ಜಮೀನನ್ನು ವಿ.ಆರ್ ಬೆಂಗಳೂರು ಮಾಲ್ ಆಡಳಿತ ಮಂಡಳಿ ಒತ್ತುವರಿ ಜಮೀನನ್ನು ಬಿಬಿಎಂಪಿ ಜಂಟಿ ಆಯುಕ್ತರು ಮತ್ತು ತಹಶೀಲ್ದಾರ್ ನೇತೃತ್ವದಲ್ಲಿ 29.5 ಗುಂಟೆಯಲ್ಲಿ ವಾಣಿಜ್ಯ ಕಟ್ಟಡ, 10 ಗುಂಟೆ ಪದಚಾರಿ ಮಾರ್ಗವನ್ನು ನಿರ್ಮಿಸಿದ್ದ ಸ್ಥಳವನ್ನು ಗುರುತು ಮಾಡಿ ಶನಿವಾರ ಸ್ವಾದೀನ ಪಡಿಸಿ ಕೊಳ್ಳಲಾಯಿತು. ಸರ್ಕಾರಿ ಕಟ್ಟೆ ಖರಾಬು ಜಮೀನಿನಲ್ಲಿ ನೀರು ಹರಿವು ಕಾಲುವೆಗಳು ಮತ್ತು ಗ್ರಾಮದ ಧನ ಕರುಗಳಿಗೆ ನೀರು ಕುಡಿಯಲು ಮೀಸಲಿಟ್ಟಿದ್ದ ಜಮೀನನ್ನು ಕರ್ನಾಟಕ ಕೈಗಾರಿಕೆ ಅಭಿವೃದ್ಧಿ ಮಂಡಳಿ ವತಿಯಿಂದ , ಮೆ.ಸುಗಮ್ ವಾಣಿಜ್ಯ ಪ್ರವೈಟ್ ಲಿಮಿಟೆಡ್ನ ಸಂಸ್ಥೆಗೆ 1.21 ಗುಂಟೆ ಕ್ರಯ ಮಾಡಿಕೊಂಡಿದ್ದು, ಇದನ್ನು ಹೊರತು ಪಡಿಸಿ ವಿಆರ್ ಬೆಂಗಳೂರ್ ಮಾಲ್ ಸಂಸ್ಥೆಯು 1 ಎಕರೆ ಪ್ರದೇಶವನ್ನು ಒತ್ತುವರಿ ಮಾಡಿಕೊಂಡು ವಾಣಿಜ್ಯ ಕಟ್ಟಡ ನಿರ್ಮಾಣ ಮಾಡಿದೆ. ಉಪ ತಹಶೀಲ್ದಾರ್ ವರದಿಯಂತೆ ಸರ್ಕಾರಿ ಕಟ್ಟೆ ಖರಾಬು ಜಮೀನಿನಲ್ಲಿ ನಿರ್ಮಿಸುತ್ತಿದ್ದ ವಾಣಿಜ್ಯ ಕಟ್ಟಡವನ್ನು ತಡೆಯಲು ಮುಂದಾದಾಗ 2014ರಲ್ಲಿ ವಿಆರ್ ಮಾಲ್ ಉಚ್ಚ ನ್ಯಾಯಲಯದಲ್ಲಿ ದಾವೆ ಹೂಡಿ ತೆರವುಗೊಳಿಸದಂತೆ ತಡೆಯಾಜ್ಞೆ ತಂದಿತ್ತು, ಉತ್ತರ ಉಪ ವಿಭಾಗಧಿಕಾರಿಗಳ ನ್ಯಾಯಲಯದಲ್ಲಿ ಇಲ್ಲಿನ ಸರ್ಕಾರಿ ಭೂಮಿ ಗುರುತಿಸುವಂತೆ  ಭೂ ಮಾಪಕ ಇಲಾಖೆಗೆ ಸೂಚಿಸಲಾಗಿತ್ತು, ಸೂಚನೆಯ ಮೇರೆಗೆ  ಗ್ರಾಮ ನಕಾಶೆಯಂತೆ ಖರಾಬು ಕಟ್ಟೆ ಗುರುತಿಸಿ ವಶಕ್ಕೆ ಪಡೆಯುವಂತೆ ಅದೇಶಿಸಿದೆ, ಈ ನಿಟ್ಟಿನಲ್ಲಿ ಇಂದು ಅಧಿಕಾರಿಗಳೊಂದಿಗೆ ವಾಣಿಜ್ಯ ಕಟ್ಟಡ ಅತಿಕ್ರಮಿಸಿದ್ದ ಸರ್ಕಾರಿ ಜಮೀನು ಸ್ವಾದೀನಪಡಿಸಿಕೊಳ್ಳಲಾಗಿದ್ದು ಇಂದು ಸರ್ಕಾರಿ ಭೂಮಿ ಎಂದು ನಾಮಫಲಕ ಅಲವಡಿಸಲಾಗಿದೆ ಎಂದು ಬೆಂಗಳೂರು ಪೂರ್ವ ತಾಲ್ಲೂಕಿನ ತಹಶೀಲ್ದಾರ್ ತೇಜಸ್ ಕುಮಾರ್ ತಿಳಿಸಿದ್ದಾರೆ,