ರೈತರಿಗೆ ಸಚಿವರಿಂದ ಸಲಹೆ

243

ಬಳ್ಳಾರಿ/ಹೊಸಪೇಟೆ:ರೈತರ ಯಾವುದೇ ಸಮಸ್ಯೆಗಳ ವಿಷಯದಲ್ಲಿ ರಾಜಕೀಯ ಮಾಡದೇ, ಪಕ್ಷಭೇದ ಮರೆತು, ಜನಪ್ರತಿನಿಧಿಗಳು ಸ್ಪಂದಿಸಿ, ನೆರವು ನೀಡಬೇಕು ಎಂದು ಕಾರ್ಮಿಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಹೇಳಿದರು.

ಹೊಸಪೇಟೆ ರೈತ ಸಂಘದವತಿಯಿಂದ ಭಾನುವಾರ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಸತತ ಮೂರು ವರ್ಷಗಳಿಂದ ರಾಜ್ಯದಲ್ಲಿ ಭೀಕರ ಬರಗಾಲ ತಲೆದೋರಿದ್ದು, ತುಂಗಭದ್ರಾ ಜಲಾಶಯದಲ್ಲಿ ನೀರಿನ ಸಂಗ್ರಹ ಅತಂತ್ಯ ಕಡಿಮೆ ಸಂಗ್ರಹವಿದ್ದು, ಈ ಭಾಗದ ರೈತರು ಕೇವಲ ಬತ್ತ ಹಾಗೂ ಬಾಳೆ ಬೆಳಗಳನ್ನೆ ನೆಚ್ಚಿಕೊಳ್ಳದೇ ಮಿತ ನೀರು ಬಳಕೆ ಬೆಳೆಗಳನ್ನು ಬೆಳೆಯ ಬೇಕು ಎಂದು ಸಲಹೆ ನೀಡಿದರು. ಜಲ್ಲಾ ಪಂಚಾಯ್ತಿ ಸದಸ್ಯ ಪ್ರವೀಣ ಸಿಂಗ್, ಕಾಂಗ್ರೇಸ್ ಮುಖಂಡ ಗು ವಜ್ಜಲ ನಾಗರಾಜ, ರೈತ ಮುಖಂಡರಾದ ಗೋಸಲ ಭರ‌್ಮಪ್ಪ, ಬೆಳಗೋಡ್ ರುದ್ರಪ್ಪ, ಜಿ.ಕೆ.ಹನುಮಂತಪ್ಪ, ಬಿಸಾಟಿ ಸತ್ಯನಾರಾಯಣ ಸೇರಿ ಇತರರು ಇದ್ದರು.