ಬತ್ತಿಹೋದ ಬೋರ್ವೆಲ್ ಗಳು, ಆಟದ ಮೈದಾನವಾದ ದೊಡ್ಡ ಕೆರೆ

268

ಕೋಲಾರ / ಬಂಗಾರಪೇಟೆ; ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದೆ.ಬೇಸಿಗೆ ಕಾಲ ಆರಂಭಗೊಳ್ಳುತ್ತಿದ್ದಂತೆಯೇ ಕುಡಿಯುವ ನೀರಿಗಾಗಿ ಪರದಾಡ ಬೇಕಾಗಿದೆ.ಇಲ್ಲಿ ಯಾವುದೇ ಜೀವ ನದಿಗಳು ಇಲ್ಲ, ಮಳೆ ನೀರಿನ ಮೇಲೆಯೇ ಜನತೆ ಅವಲಂಬಿತರಾಗಿದ್ದಾರೆ, ಮಳೆ ಬಂದು ಒಂದು ಸಾರಿ ಕೆರೆ ತುಂಬಿ ಕೋಡಿ ಹರಿದರೆ ಕನಿಷ್ಠ ಎಂದರೂ 3 ವರ್ಷ ನೀರಿನ ಸಮಸ್ಯೆ ಇರುವುದಿಲ್ಲ, ಜನತೆಗೆ ಕುಡಿಯುವ ನೀರಿನ ಏಕೈಕ ಆಸರೆ ಆಗಿರುವ ದೊಡ್ಡ ಕೆರೆಯಲ್ಲಿ ನೀರಿಲ್ಲದೆ ಆಟದ ಮೈಧಾನವಾಗಿದೆ, ಈ ಕೆರೆಯಲ್ಲಿ ನೀರು ತುಂಬಿ ಎಷ್ಟೋ ವರ್ಷಗಳಾಗಿದೆ, ಆಗೊಮ್ಮೆ ಈಗೊಮ್ಮೆ ಸುರಿಯುತ್ತಿರುವ ಮಳೆನೀರಾದರೂ ಕೆರೆಗೆ ಸೇರುತ್ತಾ ಎಂದರೇ ಅದೂ ಸಾಧ್ಯವಾಗುತ್ತಿಲ್ಲ ಕಾರಣ ಕೆರೆಗೆ ಸಂಪರ್ಕವಿರುವ ರಾಜಕಾಲುವೆಗಲು ಎಲ್ಲಾ ಪ್ರಭಾವಿಗಳ ಒತ್ತುವರಿ ಮಾಡಿ ಸ್ವಂತದ್ದು ಎಂಬಂತೆ ದಾಖಲೆಗಳನ್ನು ಸೃಷ್ಟಿಸಿಕೊಂಡಾಗಿದೆ. ಇನ್ನು ಮಾರ್ಗವೇ ಇಲ್ಲದೆ ಕೆರೆಗೆ ನೀರು ಎಲ್ಲಿಂದಾ ಬರಬೇಕು? ಹಾಗಾಗಿ ಅಂತರ್ಜಲ ಕುಸಿದು ಕೊಳವೆ ಬಾವಿಗಳಲ್ಲಿ ನೀರಿನ ಪ್ರಮಾಣ ಕಡಿಮೆ ಆಗಿದೆ, ಬಾವಿಗಳು ಬತ್ತಿ ಹೋಗಿವೆ, 1200 ಅಡಿಗಳಿಗೂ ಹೆಚ್ಚು ಆಳ ಕೊರೆದರೂ ನೀರು ಸಿಗುವ ಆಸೆ ಇಲ್ಲ, ಒಂದು ವೇಳೆ ಸಿಕ್ಕಿದರೂ ಕೆಲವೇ ದಿನಗಳಲ್ಲಿ ಮಾಯ, ಒಂದು ಟ್ಯಾಂಕರ್ ನೀರನ್ನು 500, 600 ರೂ.ಗಳನ್ನು ನೀಡಿ ಖರೀದಿ ಮಾಡಬೇಕಾದ ಪರಿಸ್ಥಿತಿ ಎದುರಾಗಿದೆ, ಇದಕ್ಕೆಲ್ಲಾ ಸೂಕ್ತ ಪರಿಹಾರ ಎಂದರೆ ಕೆರೆಯಗೆ ಸಂಪರ್ಕವಿರುವ ರಾಜಕಾಲುವೆಗಳ ಒತ್ತುವರಿ ತೆರೆವುಗೊಳಿಸಿ, ಕೆರೆಯ ಹೂಳೆತ್ತಿಸಿ ಸ್ವಚ್ಚತೆ ಕಾಪಾಡಾಬೇಕಾದ ಅಧಿಕಾರಿಗಳು ಇತ್ತ ಗಮನ ಹರಿಸಬೇಕಿದೆ ಎಂಬ ಒತ್ತಾಯ ಸ್ಥಳೀಯರದ್ದು.