ಸಾಲಭಾದೆ ತಾಳಲಾರದೆ ರೈತನೊಬ್ಬ ನೇಣಿಗೆ ಶರಣಾಗಿರುವ ಘಟನೆ

477

ಮಂಡ್ಯ/ಮಳವಳ್ಳಿ: ಸಾಲಭಾದೆ ತಾಳಲಾರದೆ ರೈತನೊಬ್ಬ ನೇಣಿಗೆ ಶರಣಾಗಿರುವ  ಘಟನೆ ಮಳವಳ್ಳಿ ತಾಲ್ಲೂಕಿನ ದೇವಿಪುರ ಗ್ರಾಮದಲ್ಲಿ  ಮಂಗಳವಾರ ರಾತ್ರಿ ನಡೆದಿದೆ. ಗ್ರಾಮದ ಡಿ.ಕೆ ಚೌಡಯ್ಯ ಮಗ   ಶೈಲೇಂದ್ರ (40) ನೇಣಿಗೆ ಶರಣಾನಾದ ರೈತ.  ಈತ ತಾಯಿ ನಿಂಗಮ್ಮ  ನ ಹೆಸರಿನಲ್ಲಿದ್ದ 35  ಗುಂಟೆ ಜಮೀನಿನ ಮೇಲೆ ಸಾಲ ಮಾಡಿದ್ದನು ಎನ್ನಲಾಗಿದೆ.  ಜಮೀನಿನದಲ್ಲಿ ಕಳೆದ ವಷ೯ದ ಭತ್ತ ಹಾಗೂ ರಾಗಿ ಬೆಳೆದಿದ್ದು. ಈ ಬಾರಿ ಬರಗಾಲದಿಂದ  ನೀರು ಇಲ್ಲದೆ   ಬೆಳೆ ಬೆಳೆಯದೆ ಕಂಗಾಲಾಗಿದ್ದನ್ನು ಎನ್ನಲಾಗಿದೆ.   ತಗಳವಾದಿ ಕೆನರಾಬ್ಯಾಂಕ್ ನಲ್ಲಿ ಒಡವೆ ಅಡವಿಟ್ಟು 90 ಸಾವಿರ ರೂ. ತಳಗವಾದಿ ಗ್ರಾಮದ  ಟಿಎಪಿಸಿಎಂಎಸ್ ನಲ್ಲಿ  50 ಸಾವಿರ ರೂ. ಕೈಸಾಲ ಒಂದೂವರೆ ಲಕ್ಷ ರೂ ಹಾಗೂ ಸಂಘ- ಸಂಸ್ಥೆಗಳಲ್ಲಿ 1 ಲಕ್ಷ ರೂ ಸೇರಿದಂತೆ  3ಲಕ್ಷದ 90 ಸಾವಿರ ರೂ ಸಾಲ ಮಾಡಿದ್ದ ಎನ್ನಲಾಗಿದೆ.       ಕಳೆದ ರಾತ್ರಿ 8 ಗಂಟೆ ಸಮಯ ಮನೆಯಲ್ಲಿ ಯಾರು ಇಲ್ಲದ  ಸಮಯದಲ್ಲಿ ನೇಣಿಗೆ ಶರಣಾನಾಗಿದ್ದಾನೆ,   ಈತ ಕಳೆದ 8 ವಷ೯ಗಳ ಹಿಂದೆ ಪವಿತ್ರ ಎಂಬುವವಳ ಮದುವೆಯಾಗಿದ್ದು, 6 ವಷ೯ದ ಕುಶಾಲ್  ಹಾಗೂ 4 ವರ್ಷದ ತನುಶ್ರೀ ಮಕ್ಕಳಿದ್ದಾರೆ.     ಈ ಸಂಬಂದ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ. ಮೃತರೈತ ಶೈಲೇಂದ್ರ ರವರ ಕುಟುಂಬ ಹಾಗೂ ಗ್ರಾಮಸ್ಥರಿಂದ   ಕೃಷಿ ಅಧಿಕಾರಿ ರಮೇಶ ಮಾಹಿತಿ ಸಂಗ್ರಹಿಸಿದರು.