ತಾಲ್ಲೂಕು ಆಡಳಿತದ ವಿರುದ್ದ ಹೋರಾಟ

291

ಬಂಗಾರಪೇಟೆ: ಕಳೆದ ಹಲವು ವರ್ಷಗಳಿಂದ ಕಡತಗಳ ವಿಲೇವಾರಿ ಮಾಡದೆ ತೊಂದರೆ ನೀಡುತ್ತಿರುವ ತಾಲ್ಲೂಕು ಆಡಳಿತದ ವಿರುದ್ದ ಹೋರಾಟ. ಕರ್ನಾಟಕ ದಲಿತ ಸಂಘರ್ಷ ಸಮಿತಿ(ಡಾ.ಅಂಬೇಡ್ಕರ್ ವಾದ) ವತಿಯಿಂದ ಪ್ರತಿಭಟನೆ. ಬಂಗಾರಪೇಟೆ ತಹಸೀಲ್ದರ್ ಕಚೇರಿ ಎದುರು ಧರಣಿ. ತೋಟಿ ಇನಾಂತಿ, ನೀರಗಂಟಿ, ಸೇರಿದಂತೆ ಬಗುರ್ ಹುಕುಂ ಅರ್ಜಿಗಳ ವಿಲೇವಾರಿಗೆ ಒತ್ತಾಯ. ದಲಿತರಿಗೆ ಸೇರಿದ ಹಲವು ಜಮೀನುಗಳ ಅವರ ಗಣಿತ ವಶದಲ್ಲಿದ್ದು

ಅವುಗಳನ್ನು ತೆರವುಗೊಳಿಸುವಂತೆ ಒತ್ತಾಯ. ಅರ್ ಅರ್ ಟಿ ಶಾಖೆಯ ಸತ್ಯಮೂರ್ತಿ, ಭೂಮಿ ಶಾಖೆಯ ಗಣೇಶ್, ಎಲ್ ಎನ್ ಡಿ ಶಾಖೆಯ ಪವನ್ , ಈ ಮೂವರು ಸಿಬ್ಬಂದಿಯನ್ನ ವರ್ಗಾವಣೆ ಮಾಡುವಂತೆ ಒತ್ತಾಯ.

ರಾಜ್ಯ ಸಂಘಟನೆ ಸಂಚಾಲಕ ಟಿ.ವಿಜಯ್ ಕುಮಾರ್ ‘ ನಮ್ಮೂರು ಟಿವಿ’ ಜೊತೆ ಮಾತನಾಡಿ, ತಾಲ್ಲೂಕು ಆಡಳಿತ ಸಂಪೂರ್ಣ ವಿಫಲವಾಗಿದೆ, ಲಂಚ ಇಲ್ಲದೆ ಕೆಲಸ ಮಾಡುತ್ತಿಲ್ಲ, ಸಂಬಂಧಿಸಿದ ಅಧಿಕಾರಿಗಳ ವಿರುದ್ದ ಕೂಡಲೆ ಕ್ರಮ ಜರುಗಿಸಬೇಕೆಂದು ಶಾಸಕರನ್ನ ಒತ್ತಾಯಿಸಿದರು. ಜಿಲ್ಲಾ ಗೌರವ ಅಧ್ಯಕ್ಷ ಹುಣಸಿನಹಳ್ಳಿ ಪಿ.ವೆಂಕಟೇಶಯ್ಯ, ಮೇಡಿಹಾಳ ಮುನಿಆಂಜಪ್ಪ, ಕದಿರೇನಹಳ್ಳಿ ಕುಮಾರ್ ಇತರರು ಪ್ರತಿಭಟನೆಯಲ್ಲಿ ಭಾಗಿ.