ಮಿಸ್ಡ್ ಕಾಲ್ ನೀಡಿದ್ದ ಮಹಿಳೆ ಮೇಲೆ ಮಾನಭಂಗಕ್ಕೆ ಯತ್ನ

425

ಬೆಂಗಳೂರು/ಕೃಷ್ಣರಾಜಪುರ: ಅಚಾತುರ್ಯವಾಗಿ ಮಿಸ್ಡ್ ಕಾಲ್ ನೀಡಿದ್ದ ಮಹಿಳೆಯ ಮನೆಗೆ ನುಗ್ಗಿದ ಕಾಮುಕ ಆಕೆಯ ಮೇಲೆ ಮಾನಭಂಗ ಮಾಡಲು ಯತ್ನಿಸಿ ಪೋಲಿಸರಿಗೆ ಸಿಕ್ಕಿ ಬಿದ್ದ ಘಟನೆ ಕೆಆರ್ ಪುರ ಪೊಲೀಸ್ ಠಾಣೆ ವ್ಯಾಪ್ತಿಯ ರಾಮಮೂರ್ತಿ ನಗರದಲ್ಲಿ ನಡೆದಿದೆ.

ರಾಜರಾಜೇಶ್ವರಿ ನಗರದ ನಿವಾಸಿ ರೋಹಿತ್ ಪೊಲೀಸರ ಕೈಗೆ ಸಿಕ್ಕಿಬಿದ್ದ ಕಾಮುಕ. ಕೆಲದಿನಗಳ ಹಿಂದೆ ರಾಮಮೂರ್ತಿ ನಗರದ ಗೃಹಿಣಿಯೋರ್ವರು ಬೇರೆಯವರಿಗೆ ಕರೆ ಮಾಡುವ ವೇಳೆ ಅಚಾತುರ್ಯವಾಗಿ ದೂರವಾಣಿ ಸಂಖ್ಯೆ ಬದಲಾಗಿದ್ದು, ರೋಹಿತ್ ಮೊಬೈಲ್ಗೆ ಮಿಸ್ಡ್ ಕಾಲ್ ಹೋಗಿದೆ, ರೋಹಿತ್ ಹಿಂದಿರುಗಿ ಮಹಿಳೆಗೆ ಕರೆ ಮಾಡಿದ್ದಾಗ ಮಹಿಳೆಯ ಧ್ವನಿಗೆ ಆಕರ್ಷಿತನಾಗಿ ಪ್ರತಿನಿತ್ಯ ಆಕೆಗೆ ಅಸಭ್ಯವಾದ ಸಂದೇಶವನ್ನು ಕಳುಹಿಸುತ್ತಿದ್ದ, ಇತ್ತಿಚೆಗೆ ಆಕೆಯ ವಿಳಾಸವನ್ನು ಪತ್ತೆಹಚ್ಚಿ ಯಾರು ಇಲ್ಲದ ವೇಳೆ ಮನೆಗೆ ನುಗ್ಗಿ ಏಕಾಏಕಿ ಮಾನಭಂಗಕ್ಕೆ ಯತ್ನಿಸಿದ್ದಾನೆ. ಈ ವೇಳೆ ಸ್ಥಳೀಯರು ಆರೋಪಿಯನ್ನು ಹಿಡಿಯಲು ಯತ್ನಿಸಿದಾಗ ಪರಾರಿಯಾಗಿದ್ದಾನೆ.
ನಂತರ ಕೆಆರ್ ಪುರ ಪೊಲೀಸರು ತಮ್ಮ ಚಾಲಾಕಿ ತನದಿಂದ ಮಂಗಳವಾರ ಆರೋಪಿಯನ್ನು ಪತ್ತೆಹಚ್ಚಿ ನ್ಯಾಯಾಂಗ ಬಂದನಕ್ಕೆ ಒಪ್ಪಿಸಿದ್ದಾರೆ.