ಕೈ ಬಣಗಳ ಕಿತ್ತಾಟ. ಬೈ ಕುಗಳಿಗೆ ಬೆಂಕಿ?

293

ಬಳ್ಳಾರಿ: ಗಣಿನಾಡಲ್ಲಿ ಮತ್ತೆ ಸೇಡು, ದ್ವೇಷದ ರಾಜಕಾರಣ ಆರಂಭವಾಗಿದೆ. ಬಳ್ಳಾರಿ ಮಹಾನಗರ ಪಾಲಿಕೆ ಮೇಯರ್ ಉಪಮೇಯರ್ ಚುನಾವಣೆಗೂ ಮುನ್ನವೇ ಆಡಳಿತಾರೂಢ ಕಾಂಗ್ರೆಸ್‌ನ ಎರಡು ಗುಂಪುಗಳ ಮಧ್ಯೆಯೇ ಘರ್ಷಣೆ ಶುರುವಾಗಿದೆ.

ದಿವಾಕರ ಬಾಬು ಬೆಂಬಲದಿಂದ ಗೆದ್ದು ಇದೀಗ ನಿಷ್ಠೆ ಬದಲಿಸಿದರು ಅನ್ನೋ ಆರೋಪ ಎದುರಿಸುತ್ತಿರುವ ಬಳ್ಳಾರಿಯ ವಾರ್ಡ್‌ ನಂಬರ 27 ರ ಸದಸ್ಯೆ ದಿವ್ಯಕುಮಾರಿಯವರ ಮನೆ ಮುಂದಿನ ಎರಡು ಬೈಕ್‌ಗಳಿಗೆ ವಿರೋಧಿ ಬಣದ ಬೆಂಬಲಿಗರು ಬೆಂಕಿ ಹಚ್ಚಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಬಳ್ಳಾರಿಯ ಕೌಲಬಜಾರ ಪ್ರದೇಶದಲ್ಲಿರುವ ದಿವ್ಯಕುಮಾರಿಯವರ ಮನೆ ಮುಂದೆ ನಿಲ್ಲಿಸಿದ್ದ 2 ಬೈಕ್‌ಗಳಿಗೆ ದಿವಾಕರ ಬಾಬು ಬೆಂಬಲ ಹೊಂದಿರುವ ಗಾಜಲು ಶೀನು ಬಣದ ಬೆಂಬಲಿಗರು ಬೆಂಕಿ ಹಚ್ಚಿ ಹೋಗಿದ್ದಾರೆ ಎನ್ನಲಾಗಿದೆ. ಬೈಕ್‌ಗಳಿಗೆ ಬೆಂಕಿ ಹಚ್ಚಿದ ವೇಳೆಯಲ್ಲಿ ಪಾಲಿಕೆ ಸದಸ್ಯೆ ದಿವ್ಯಕುಮಾರಿ ಮನೆಯಲ್ಲಿ ಇರಲಿಲ್ಲ . ಘಟನಾ ಸ್ಥಳಕ್ಕೆ ಆಗಮಿಸಿರುವ ಪೊಲೀಸರು ಇದೀಗ ಆರೋಪಿಗಳಿಗಾಗಿ ಶೋಧ ನಡೆಸುತ್ತಿದ್ದಾರೆ.

ಮೇಯರ್ ಉಪಮೇಯರ್‌ ಚುನಾವಣೆಯಲ್ಲಿ ಅಧಿಕಾರದ ಗದ್ದುಗೆ ಹಿಡಿಯಲು ಮಾಜಿ ಸಚಿವ ದಿವಾಕರ ಬಾಬು ಹಾಗೂ ಹಾಲಿ ಸಚಿವ ಸಂತೋಷ ಲಾಡ್ ಬಣದ ಸದಸ್ಯರ ಮಧ್ಯೆಯೇ ಕಿತ್ತಾಟ ಘರ್ಷಣೆ ಆರಂಭವಾಗುವ ಮೂಲಕ ಕಾಂಗ್ರೆಸ್‌ ನಲ್ಲಿಯೂ ಎಲ್ಲವೂ ಸರಿಯಿಲ್ಲ ಅನ್ನೋದು ಮತ್ತೊಮ್ಮೆ ದೃಢಪಟ್ಟಿದೆ.