ನಗರಸಭೆ ಭ್ರಷ್ಟಾಚಾರದ ವಿರುದ್ಧ ಪ್ರತಿಭಟನೆ.

350

ಬೆಂ,ಗ್ರಾಮಾಂತರ/ದೊಡ್ಡಬಳ್ಳಾಪುರ: ನಗರಸಭೆ ಆಡಳಿತ ಮತ್ತು ಅಧ್ಯಕ್ಷ ಮುದ್ದಪ್ಪನ ಅಧಿಕಾರದಲ್ಲಿ ನಗರಸಭೆ ಭ್ರಷ್ಟಕೂಟವಾಗಿ ಪರಿವರ್ತನೆ ಗೊಂಡಿದೆ ಎಂದು ಆರೋಪಿಸಿದ ಕನ್ನಡಪಕ್ಷದ ನಗರಸಭಾ ಸದಸ್ಯೆ .ಮಂಜುಳಾ

ನಗರಸಭೆಯ ದುರಾಡಳಿತ ವಿರುದ್ದ ಕನ್ನಡ ಪಕ್ಷ, ಮತ್ತು ಜಾತ್ಯಾತೀತ ಜನತಾದಳದ ಕಾರ್ಯಕರ್ತರು ನಗರಸಭೆ ಮುಂದೆ ನಡೆಸಿದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು ಮಾನ್ಯ ಅಧ್ಯಕ್ಷ ಕೆಬಿ ಮುದ್ದಪ್ಪನ ಆಡಳಿತ ಕೇವಲ ಐದಾರು ತಿಂಗಳಾದರೂ ಲೆಕ್ಕವಿಲ್ಲದಷ್ಟು ಅಕ್ರಮ ಎಸಗಿದ್ದಾರೆ, ಅಕ್ರಮಗಳಿಗೆ ಪೌರಾಯುಕ್ತ ಬಿಳಿಕೆಂಚಪ್ಪ ಸಾಥ್ ನೀಡುತ್ತಿದ್ದು ಅಧ್ಯಕ್ಷರ ಸುತ್ತ ಭ್ರಷ್ಟ ಅಧಿಕಾರಿಗಳ ಮತ್ತು ಸದಸ್ಯರ ಒಂದು ತಂಡವೇ ರಚನೆ ಯಾಗಿದೆ ಎಂದು ಆರೋಪಿಸಿದರು. ಶುದ್ದವಿಲ್ಲದ ಮುದ್ದಪ್ಪ ನ ಅಧಿಕಾರದ ವಿರುದ್ದ ತೀವ್ರ ಆಕ್ಷೇಪಣೆ ವ್ಯಕ್ತಪಡಿಸುತ್ತಾ, ನಗರದ ಅಭಿವೃದ್ದಿಯನ್ನೇ ಮರೆತ ಇವರು ಪ್ರತಿ ಯೊಂದರಲ್ಲೂ ಕಮೀಷನ್ ಬಾಚುತ್ತಿದ್ದಾರೆ ಎಂದು ಆರೋಪಿಸಿದರು. ನಿದರ್ಶನ ಎಂಬಂತೆ ಇತ್ತೀಚೆಗೆ ಬೆಳಕಿಗೆ ಬಂದ ಕಸಬಾಚುವ ಪೌರಕಾರ್ಮಿಕರಿಗೆ ನೀಡುವ ಚಪ್ಪಲಿ,ಷೂ ಮತ್ತು ಟವಲ್ ಗಳ ಖರೀದಿಯಲ್ಲೇ ಲಕ್ಷಾಂತರ ರೂಗಳ ಭ್ರಷ್ಟಾಚಾರ ಎಸಗಿದ್ದಾರೆ ಎಂದರೇ ಇವರಿಗಿಂತ ಗತಿಗೆಟ್ಟವರು ಯಾರಾದರೂ ಇರ್ತಾರಾ? ಎಂದು ತಮ್ಮ ಆಕ್ರೋಶ ವ್ಯಕ್ತಪಡಿಸುತ್ತಾ ಮುದ್ದಪ್ಪ ಕೂಡಲೇ ಅಧ್ಯಕ್ಷಸ್ಥಾನಕ್ಕೆ ರಾಜಿನಾಮೆ ನೀಡಬೇಕು ಎಂದು ಒತ್ತಾಯಿಸಿದರು.

ಜೆಡಿಎಸ್ ಪಕ್ಷದ ನಗರಸಭಾ ಸದಸ್ಯ ಆರ್. ಗೋವಿಂದರಾಜು ಮಾತನಾಡುತ್ತಾ ದೊಡ್ಡಬಳ್ಳಾಪುರದ ನಗರಸಭೆ ಎಂದರೆ ಒಂದು ನರಕ ಸಭೆ ಎಂಬಂತೆ ಅಕ್ರಮತಾಣವನ್ನಾಗಿಸುತ್ತಿರುವ ಕೀರ್ತಿ ಈಗಿನ ಭ್ರಷ್ಟಾಡಳಿತದ , ಅಧ್ಯಕ್ಷ ಮುದ್ದಪ್ಪನಿಗೆ ಸಲ್ಲುತ್ತೆ ಎಂದರು. ಅಧ್ಯಕ್ಷಸ್ಥಾನದ ದಾಹಕ್ಕೆ ಸದಸ್ಯರನ್ನು ದುಡ್ಡಿನಿಂದ ಖರೀದಿಸಿ ಅದೇ ದುಡ್ಡನ್ನು ಹಿಂಪಡೆದುಕೊಳ್ಳುವ ಸಲುವಾಗಿ ಮಾಡಬಾರದ ಕೆಲಗಳನ್ನೆಲ್ಲಾ ಮಾಡಿ ದುಡ್ಡು ಮಾಡುತ್ತಿದ್ದಾರೆ. ನಗರಾಡಳಿತದ ಬಗ್ಗೆ ಜನಸಾಮಾನ್ಯರಿಗೆ ನಂಬಿಕೆಯೇ ಇಲ್ಲದಂಥಾ ಪರಿಸ್ಥಿತಿಗೆ ತಂದಿಟ್ಟ ಘನತೆ ಅವರಿಗೆ ಸಲ್ಲುತ್ತೆ ಎಂದರು. ಕನಿಷ್ಟ ಅಧ್ಯಕ್ಷ ಸ್ಥಾನಕ್ಕಿರುವ ಗೌರವವನ್ನು ಮರೆತು ಅಕ್ರಮ ಖಾತೆಗಳಿಂದ ಅಡ್ಢದಾರಿ ವಸೂಲಿಗಿಳಿದ ಏಕೈಕ ಅಧ್ಯಕ್ಷ ಎಂದರೇ ಮುದ್ದಪ್ಪ ಎಂದು ಆರೋಪಿಸಿದರು. ಇವರು ಮಾಡುತ್ತಿರುವ ಕಚಡಾ ರಾಜಕೀಯ ದಿಂದ ಇವರನ್ನು ಗೆಲ್ಲಿಸಿದ ಪಕ್ಷಕ್ಕೂ ಇವರಿಂದ ಗೌರವ ವಿಲ್ಲ ಎಂದರು. .ಜನಸಾಮಾನ್ಯರ ದೂರು ದುಮ್ಮಾನಗಳಿಗೆ ಸ್ಪಂಧಿಸದೆ ಸದಸ್ಯರಲ್ಲಿ ಮಲತಾಯಿ ದೋರಣೆಗೆ ಮುಂದಾಗಿರುವ ಈತನಿಗೆ ಅಡ್ಡದಾರಿಯಲ್ಲಿ ಅಧ್ಯಕ್ಷ ಸ್ಥಾನ ಕಲ್ಪಿಸಿದ ಅದೂ ನಗರಸಭೆಗೆ ಐದನೇ ಬಾರಿ ಆಯ್ಕೆಯಾದ ಸದಸ್ಯರೊಬ್ಬರು ಚಪ್ಪಲಿ ಖರೀದಿಯಲ್ಲಿ ನಡೆದ ಭ್ರಷ್ಟಾಚಾರ ಸಮರ್ಥಿಸಿಕೊಳ್ಳುವ ಹೀನಸ್ಥಿತಿಗೆ ತಲುಪಿದ್ದಾರೆ ಎಂದರೆ ನಾಚಿಕೆಯಾಗಬೇಕು ಎಂದು ಪರೋಕ್ಷವಾಗಿ ಇವರದ್ದೇ ಪಕ್ಷದ ಇನ್ನೊಂದು ಬಣದ ಸದಸ್ಯರಿಗೆ ಚೀಮಾರಿ ಹಾಕಿದರು.
ಇಂಥಹ ಭ್ರಷ್ಟರ ಆಡಳಿತದಲ್ಲಿ ನಗರ ಅದ್ಯಾವ ರೀತಿ ಅಭಿವೃದ್ಧಿ ಕಾಣಬಹುದು ಎಂದು ಜನಸಾಮಾನ್ಯರೆ ಊಹಿಸಲಿ ಎಂದರು. ಅಡ್ಡದಾರಿ ಹಿಡಿದ ಅಧ್ಯಕ್ಷರ ಜೊತೆಸೇರಿ ಅಕ್ರಮಗಳಲ್ಲಿ ತೊಡಗಿಸಿಕೊಂಡಿರುವ ಅಧಿಕಾರಿಗಳ ವಿರುದ್ಧ ಸೂಕ್ತಕ್ರಮ ಜರುಗಿಸುವಂತೆ ಒತ್ತಾಯಿಸಿದರು.