ಗ್ರಾಮ್ ಸ್ವರಾಜ್ ಜಾಗೃತಿ ಅಭಿಯಾನ

384

ಚಿಕ್ಕಬಳ್ಳಾಪುರ/ಶಿಡ್ಲಘಟ್ಟ : ಅಧಿಕಾರಕ್ಕೆ ಬಂದು ಎರಡೂವರೆ ವರ್ಷ ಕಳೆದಿದ್ದರೂ ಸಹ ಯಾವುದೇ ಶಾಶ್ವತ ಯೋಜನೆಯನ್ನು ಜಾರಿಗೆ ತರುವಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಸಕಾ೯ರ ಸಂಪೂರ್ಣವಾಗಿ ಶೂನ್ಯ ಎಂದು ಎಂದು ಮಾಜಿ ಸಚಿವ ಕೆ.ಪಿ.ಸಿ.ಸಿ ಅಧ್ಯಕ್ಷ ವಿ.ಮುನಿಯಪ್ಪ ಹೇಳಿದರು

ತಾಲೂಕಿನ ಕೆ.ಮುತ್ತುಕದಹಳ್ಳಿ ಗ್ರಾಮದಲ್ಲಿ ಆಯೋಜಿಸಿದ್ದ ಗ್ರಾಮ್ ಸ್ವಾರಾಜ್ ಜಾಗೃತಿ ಅಭಿಯಾನ ಸಂವಾದ ಕಾಯ೯ಕ್ರಮ ಉದ್ದೇಶಿಸಿ
ಮಾತನಾಡಿದ ಅವರು ರಾಜ್ಯದಲ್ಲಿ ಕಾಂಗ್ರೇಸ್ ಪಕ್ಷವು ಅನೇಕ ಜನಪರ ಕಾಯ೯ಕ್ರಮಗಳನ್ನು ಮಾಡುತ್ತಿದ್ದು , ಪಕ್ಷವು ಅಧಿಕಾರಕ್ಕೆ ಬಂದಾಗ ಸಿದ್ದರಾಮಣ್ಣ ನವರು ಬಡತನ ರೇಖೆಗಿಂತ ಕೆಳಮಟ್ಟದಲ್ಲಿ ಇರುವ ಕುಟುಂಬಗಳಿಗೆ ಅನ್ನಭಾಗ್ಯ ಜಾರಿಗೆ ತಂದರು. ಮಳೆ ಬೀಳದೆ ಬರಗಾಲ ಬಂದಿರುವ ಈ ಕಾಲದಲ್ಲೂ ಒತ್ತಡದ ನಡುವೆಯೂ ಸಮವಾಗಿ ಬಡ ಜನರಿಗೆ ಅನ್ನಭಾಗ್ಯ ಯೋಜನೆಯನ್ನು ನೀಡಲಾಗುತ್ತಿದೆ.

ಕ್ಷಿೀರಾ ಭಾಗ್ಯ ಯೋಜನೆಯಡಿ ರೈತರಿಗೆ ಹಾಲಿನಲ್ಲಿ ಒಂದು ಲೀಟರ್ ಗೆ ಐದುರೂಪಾಯಿಯಂತೆ ರೈತರಿಗೆ ನೇರವಾಗಿ ಸಬ್ಸಿಡಿ ನೀಡಲಾಗುತ್ತಿದೆ. ಅಲ್ಲದೆ 3 ಲಕ್ಷದವರಿಗೂ ಬಡ್ಡಿ ರಹಿತ ಸಾಲವನ್ನು , ಕೇಂದ್ರ ಸಕಾ೯ರದ ನಿಯಮಾವಳಿಗಳ ಅನುಗುಣವಾಗಿ ರಾಜ್ಯಸಕಾ೯ರ ನೀಡುತ್ತಿದೆ. ಬರಗಾಲದ ಒತ್ತಡದ ನಡುವೆ ಕಾಂಗ್ರೇಸ್ ಪಕ್ಷವು ಚಿಕ್ಕಬಳ್ಳಾಪುರ ಮತ್ತು ಕೋಲಾರ ಜನತೆಗೆ ಶಾಶ್ವತ ನೀರಾವರಿ ನೀಡಲು ಪ್ರಯತ್ನ ಮಾಡುತ್ತಿದ್ದು ,ಈಗಾಗಲೇ ಸುಮಾರು 60 ಕಿಲೋಮೀಟರ್ ವರೆಗೂ ಪೈಪ್ ಲೈನ್ ಮಾಡುತ್ತಾ ಬರುತ್ತಿದ್ದು ಎಲ್ಲಾ ಸಿದ್ದತೆಗಳು ನಡೆಯುತ್ತಿವೆ ರಾಜ್ಯದ ಜನರ ಭಾವನೆಗಳಿಗೆ ಸ್ಪಂದಿಸಿ ಅಭಿವೃಧ್ಧಿಗೆ ಪೂರಕವಾಗಿರುವ ಯೋಜನೆಗಳನ್ನು ಸಿದ್ದಪಡಿಸಿ ರಾಜ್ಯ ಸರಕಾರ ಅನುಷ್ಠಾನಗೊಳಿಸುತ್ತಿದೆ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಜನರ ಆಶೀರ್ವಾದದಿಂದ ಕಾಂಗ್ರೇಸ್ ಪಕ್ಷ ಪುನಃ ಅಧಿಕಾರಕ್ಕೆ ಬರುವುದು ಖಚಿತ ಎಂದರು.

ಜಿಲ್ಲಾ ಪಂಚಾಯಿತ್ ಮಾಜಿ ಸದಸ್ಯ ಆರ್.ಶ್ರೀನಿವಾಸ್ ಮಾತಾನಾಡಿ ಮಹಾತ್ಮ ಗಾಂಧಿಯವರು ಕಂಡಿದ್ದ ಸಾಮಾಜಿಕ ನ್ಯಾಯ, ಶೋಷಿತರ, ಧಮನಿತರ ಏಳಿಗೆ, ಮಹಿಳಾ ಸಬಲೀಕರಣ, ಸ್ವಚ್ಚತೆಯ ಕನಸನ್ನು ನನಸು ಮಾಡುವಲ್ಲಿ ಕಾಂಗ್ರೆಸ್ ಪಕ್ಷದ ಪಾಲು ಹೆಚ್ಚಾಗಿದೆ ಎಂದ ಅವರು ಸ್ವಾತಂತ್ರ್ಯ ಪೂರ್ವ ಹಾಗೂ ಸ್ವಾತಂತ್ರ್ಯಾನಂತರದಲ್ಲಿ ದೇಶವನ್ನು ಕಟ್ಟಿ ಬೆಳೆಸುವಲ್ಲಿ ಕಾಂಗ್ರೆಸ್ ಪಕ್ಷದ ಪಾಲು ಬಹಳಷ್ಟಿದ್ದು ಈ ಪರಂಪರೆ ಮುಂದಿನ ದಿನಗಳಲ್ಲೂ ಮುಂದುವರೆಯಲಿದೆ ಈ ದೇಶದ ಬೆನ್ನೆಲುಬಾದ ರೈತರು, ಕೃಷಿವಲಯ ಸೇರಿದಂತೆ ವಿದ್ಯಾರ್ಥಿ, ಯುವಜನರು, ಮಹಿಳೆಯರು, ದೀನ ದಲಿತರು ಹಾಗೂ ಅಲ್ಪಸಂಖ್ಯಾತರ ಅಭಿವೃದ್ದಿಗೆ ಕಾಂಗ್ರೇಸ್ ಪಕ್ಷ ಅಪಾರ ಕೊಡುಗೆ ನೀಡಿದೆ ಯುವಕರಾದವರು ಪಕ್ಷವನ್ನು ಬೆಳೆಸಲು ಪ್ರೇರಣೆ ನೀಡಬೇಕು ಎಂದರು

ಕಾಯ೯ಕ್ರಮದಲ್ಲಿ ಮಾಜಿ ಅಧ್ಯಕ್ಷ ಕೆ.ಗುಡಿಯಪ್ಪ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮುನಿಕೃಷ್ಣಪ್ಪ,ಜಿಲ್ಲಾ ಸಂಯೋಜಕ ನಿರಂಜನ್, ಹುಜಗೂರು ದೇವರಾಜ್. ಕನ್ನಮಂಗಲ ಶ್ರೀ ರಾಮಣ್ಣ.ಬೆಳ್ಳೂಟಿ ಸಂತೋಷ ಮತ್ತಿತರರು ಉಪಸ್ಥಿತರಿದ್ದರು.