ಗರ್ಭಿಣಿ ಸಾವು: ಸಂಬಂಧಿಕರ ಆಕ್ರೋಶ

233

ರಾಯಚೂರು:ಚುಚ್ಚು ಮದ್ದು ಹಾಕಿದ ಕೆಲ ಕ್ಷಣದಲ್ಲಿಯೇ ಗರ್ಭಿಣಿ ಅನುಮಾನಾಸ್ಪದವಾಗಿ ಮೃತಪಟ್ಟಿರುವ ಘಟನೆ ಇಲ್ಲಿನ ಬೆಳ್ಳಂಬೆಳಿಗ್ಗೆ ರಿಮ್ಸ್ ಆಸ್ಪತ್ರೆಯಲ್ಲಿ ನಡೆದಿದೆ.ಹೆರಿಗೆ ನೋವು ಕಾಣಿಸಿ ಕೊಂಡ ತಾಲೂಕಿನ ಮಟಮಾರಿ ಗ್ರಾಮದ ತುಂಬು ಗರ್ಭಿಣಿ ಉರುಕುಂದಮ್ಮ (22) ಎನ್ನುವವರನ್ನು ಹೆರಿಗೆಗಾಗಿ ಸ್ಥಳಿಯ ರಿಮ್ಸ್ ಆಸ್ಪತ್ರೆಗೆ ಧಾಖಲಿಸಲಾಗಿತ್ತು. ನರ್ಸ್ ಚುಚ್ಚುಮದ್ದು ಹಾಕಿದ ಕೆಲ ಕ್ಷಣದಲ್ಲಿಯೇ ಗರ್ಭಿಣಿ ಸಾವನ್ನಪ್ಪಿದ್ದು ತೀರ್ವ ಶಂಕೆಗೆ ಗ್ರಾಸವಾಗಿ ವೈದ್ಯಾಧಿಕಾರಿಗಳ ನಿರ್ಲಕ್ಷೆಯೇ ಉರುಕುಂದಮ್ಮ ಸಾವಿಗೆ ಕಾರಣವೆಂದು ಆಸ್ಪತ್ರೆ ಆವರಣದಲ್ಲೇ ತೀರ್ವ ಆಕ್ರೋಶ ವ್ಯಕ್ತಪಡಿಸಿದ ಸಂಬಂಧಿಕರು ಸಿಬ್ಬಂದಿ ವರ್ಗದೊಂದಿಗೆ ನೇರ ಮಾತಿನ ಚಕಮಕಿಗಿಳಿದಿರುವುದು ಕೆಲಕಾಲ ಆತಂಕಕ್ಕೆ ದಾರಿ ಮಾಡಿತು.⁠⁠⁠⁠