ಕೊಲೆ ಬೆದರಿಕೆ ಅಧಿಕಾರಿ ಅಂದರ್

283

ರಾಯಚೂರು: ಉಪ ಅರಣ್ಯಸಂರಕ್ಷಣಾಧಿಕಾರಿ ಪ್ರಭಾರಿ ಹುದ್ದೆಯಲ್ಲಿದ್ದು ಗನ್ ನಿಂದ ಶೂಟ್ ಮಾಡಿ ಸಾಯಿಸ್ತೀನಿ ಅಂತ ಹಿರಿಯ ಅಧಿಕಾರಿಗೆ ಕೊಲೆ ಬೆದರಿಕೆ ಹಾಕಿದ ಘಟನೆ ಬೆಳಕಿಗೆ ಬಂದಿದೆ. ಉಪ ಅರಣ್ಯ ಸಂರಕ್ಷಣಾ ಅಧಿಕಾರಿ ಸಾಯೀಂದ್ರ ಕುಮಾರ್ ಹಿರಿಯ ಅಧಿಕಾರಿ ಗಂಗಪ್ಪಾವರ ತಲೆಗೆ ಗನ್ ಇಟ್ಟು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ.

ಘಟನೆಗೆ ಕಾರಣ:– ಡೆಪ್ಯೂಟಿ ರೇಂಜ್ ಫಾರೆಸ್ಟ್ ಆಫೀಸರ್ ಆಗಿ ಅಧಿಕಾರ ವಹಿಸಿಕೊಂಡರೆ ಶೂಟ್ ಮಾಡ್ತಿನಿ ಅಂತ ಹೆದರಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.  ಸಾಯೀಂದ್ರ ಕುಮಾರ್ ಕರ್ತವ್ಯದ ಲೋಪದ ಮೇಲೆ ಇದೀಗ ಅವರನ್ನು ಅಮಾನತ್ತು ಮಾಡಲಾಗಿದೆ. ಈ ಹುದ್ದೆಗೆ  ಹಿರಿಯ ಅಧಿಕಾರಿಗಳು ಗಂಗಪ್ಪನಿಗೆ ವಹಿಸಿ ಕೊಡಲಾಗಿದೆ.

ಆದರೆ ಅಧಿಕಾರಿಗಳ ಆದೇಶದಂತೆ ವಲಯ ಅರಣ್ಯಾಧಿಕಾರಿಗಳ ಅಧಿಕಾರ ವಹಿಸಿಕೊಂಡು ಕುರ್ಚಿಯಲ್ಲಿ ಕುಳಿತ ಗಂಗಪ್ಪನಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ ಮತ್ತು ಇವರಿಬ್ಬರೂ ತಮ್ಮ ಕಛೇರಿಯಲ್ಲಿ ಜಗಳವಾಡಿದ್ದಾರೆ.ಅವರನ್ನು ಥಳಿಸಿ ಪಿಸ್ತೂಲ್ ಹಿಡಿದು ಹೆದರಿಸಿದ್ದಾನೆ ಎಂದು ಬಲ್ಲ ಮೂಲಗಳಿಂದ ತಿಳಿದುಬಂದಿದೆ.
ಸಾಯೀಂದ್ರ ಕುಮಾರ್ ವಿರುದ್ದ ಜಾತಿ ನಿಂದನೆ ಮತ್ತು ಶಸ್ತ್ರಾಸ್ತ್ರ ಬಳಕೆ ಮಾಡಿದ್ದರ ಕುರಿತು ಈ ನೇತಾಜಿ ಪೋಲಿಸ್ ಠಾಣೆಯಲ್ಲಿ  ಪ್ರಕರಣ ದಾಖಲಾಗಿದ್ದು, ಪೊಲೀಸರು ಇವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.