ಬೋರು ಕೊರಿಸಿ..ನೀರು ಬಿಡಿಸಿ ಸ್ವಾಮಿ…

222

ತುಮಕೂರು/ಪಾವಗಡ: ಗಡಿ ಭಾಗದ ಕೆಂಕೆರೆ ಗ್ರಾಮದ ಜನರಿಗೆ ಗ್ರಾಮದಲ್ಲಿ ನೀರು ಬಳಸದಂತೆ ತಡೆದು ಸಮಸ್ಯೆ ಮಾಡುತ್ತಿದ್ದಾರೆ ಎಂದು ಮಹಿಳೆಯರು ಕೊಡಹಿಡಿದು ಹೋರಾಟಕ್ಕೆ ಮುಂದಾಗಿ ಪ್ರತಿಭಟನೆ ಮಾಡಿದರು. ಗ್ರಾಮದ ಹಿರಿಯ ನಿವೃತ್ತ ಲೆಕ್ಕಪತ್ರ ನಿರ್ವಹಣೆ ಅಧಿಕಾರಿ ಗ್ರಾಮದಲ್ಲಿ ನೀರಿನ ಸಮಸ್ಯೆ ಕಂಡು ಸ್ವಂತ ಖರ್ಚಿನಿಂದ ಕೂಳವೆ ಬೋರ್ ಕೊರಸಿ ಸುಮಾರು ಎರೆಡು ಲಕ್ಷವೆಚ್ಚದಲ್ಲಿ ಕಾಮಗಾರಿ ಮಾಡಿಸುವ ಸಂದರ್ಭದಲ್ಲಿ ಕೆಲ ಗ್ರಾಮದವರು ತೂಂದರೆ ಮಾಡುತ್ತಿದ್ದಾರೆ ಇದಕ್ಕೆ ಗ್ರಾಮದ ಮಹಿಳೆಯರು ಗ್ರಾಮದಲ್ಲಿ ನೀರಿನ ಸಮಸ್ಯ ತಾಂಡವಾಡುತ್ತಿದೆ ಅತಂಹ ಸಮಯದಲ್ಲಿ ಈ ರೀತಿಯಲ್ಲಿ ತೂಂದರೆ ಮಾಡುತ್ತಿರುವವರನ್ನು ಮನ ಒಲಸಿ ಗ್ರಾಮಸ್ಥರಿಗೆ ನೀರಿನ ಅನುಕೂಲ ಮಾಡಿಕೂಡಬೇಕೆಂದು ಮಹಿಳೆಯರು ಒತ್ತಾಯಿಸಿದ್ದಾರೆ. ಈವೇಳೆ ಭವ್ಯಭಾರತ ಯುವಕದ ಸಂಘ ಯುವಕರು ನೀರಿನ ವಿಷಯಕ್ಕೆ ತೂಂದರೆ ಕೂಡುವಂತವರ ವಿರುದ್ದಕೂಡಲೇ ಕ್ರಮ ಕೈ ಗೂಳ್ಳಬೇಕು ಎಂದು ಒತ್ತಾಯಿಸಿದ್ದಾರೆ.