ಕೆಟ್ಟುಕೂತ ಬೋರ್‍ವೆಲ್ ದುರಸ್ಥಿ ಕಾರ್ಯ ….

334

ಬಳ್ಳಾರಿ  ಹೊಸಪೇಟೆ : ತಾಲೂಕಿನ ಕಮಲಾಪುರ ಪಟ್ಟಣದ ಎಲ್‍ಎಲ್‍ಸಿ ಕಾಲುವೇಯಲ್ಲಿ ಸಂಪೂರ್ಣ ನೀರು ಸ್ಥಗಿತಗೊಂಡ ಹಿನ್ನಲೆಯಲ್ಲಿ ಕುಡಿಯುವ ನೀರಿಗಾಗಿ ಬೋರ್‍ವೆಲ್ ದುರಸ್ಥಿ ಕಾರ್ಯ ಭರದಿಂದ ಸಾಗಿದೆ. ಕ.ವಿ.ವಿ ರಸ್ತೆಯಲ್ಲಿನ ಗಾರಿಬಾವಿ ಆಂಜನೇಯ ಕ್ಯಾಂಪ್ ಹಾಗೂ ಕುಂಟೇ ಏರಿಯಾದಲ್ಲಿ ಕೊಳವೆ ಬಾವಿಯಲ್ಲಿನ 5 ಎಚ್‍ಪಿ ಯಂತ್ರಗಳನ್ನು ತೆರವುಗೊಳಿಸಿ ನೂತನ ಯಂತ್ರಗಳನ್ನು ಅಳವಡಿಸಲಾಗುತ್ತಿದೆ. ಸುಮಾರು 15 ಕ್ಕೂ ಹೆಚ್ಚು ಪೌರ ಕಾರ್ಮಿಕರು ಸೇರಿದಂತೆ ಇಬ್ಬರು ಪಂಚಾಯತಿ ಅಧಿಕಾರಿಗಳು ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದಾರೆ. 4 ಕೊಳವೆ ಬಾವಿಗಳ ಪೈಕೆ ಮೂರಕ್ಕೆ ನೂತನ ಯಂತ್ರವನ್ನು ತಂದಿದ್ದು ಶೀಘ್ರದಲ್ಲೆ ನೀರು ಪೂರೈಕೆ ಮಾಡುವುದಾಗಿ ನೋಡಲ್ ಎಂಜಿನೀಯರ್ ಹನುಮಂತಪ್ಪ ತಿಳಿಸಿದ್ದಾರೆ. ಈಗಾಗಲೆ ಕಾಲುವೆಯಲ್ಲಿ ನೀರು ಇಲ್ಲದ ಪರಿಣಾಮ ವಿವಿಧ ವಾರ್ಡ್‍ನಲ್ಲಿ ನೀರು ಪೂರೈಕೆಯಲ್ಲಿ ವ್ಯತ್ಯಾಸ ಕಂಡು ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ನೈರ್ಮಲ್ಯ ನಿರೀಕ್ಷಕ ಗೋವಿಂದ ಬಾಬು, ಪೌರ ಕಾರ್ಮಿಕರಾದ ಧರ್ಮಣ್ಣ, ತಾಯಪ್ಪ, ಹಳ್ಳಿ ರಾಘವೇಂದ್ರ, ವೀರೇಶ್, ಮಹಮದ್ ಇತರರು ಬೋರ್‍ವೆಲ್ ದುರಸ್ಥಿ ಕಾರ್ಯದಲ್ಲಿ ಭಾಗಿಯಾಗಿದ್ದಾರೆ.