ಇಲ್ಲಿ ಎಲ್ಲರೂ ಸತ್ಯ ಹರಿಶ್ಚಂದ್ರರೇ..! ಆದರೇ..

530

ಬೆಂ,ಗ್ರಾಂ/ದೊಡ್ಡಬಳ್ಳಾಪುರ: ಇತ್ತೀಗೆ ನಗರಸಭೆ ಅಧ್ಯಕ್ಷ ಕೆ ಬಿ.ಮುದ್ದಪ್ಪರವರ ಆಡಳಿತ ಸಂಪೂರ್ಣ ಅಕ್ರಮಗಳಿಂದ ಕೂಡಿದೆ ಆಡಳಿತ ದಿಕ್ಕು ತಪ್ಪಿದೆ ಎಂದು ಆರೋಪಿಸಿ ಕನ್ನಡಪಕ್ಷ ಮತ್ತು ಜೆಡಿಎಸ್ ಪಕ್ಷದ ನಗರಸಭೆ ಸದಸ್ಯರು ನಡೆಸಿದ್ದ ಆರೋಪ ಸತ್ಯಕ್ಕೆ ದೂರವಾದ್ದು ಎಂದು ತಳ್ಳಿಹಾಕಿ ಒಂದು ವೇಳೆ ಅಂತಹ ಅಕ್ರಮಗಳ ದಾಖಲೆಗಳು ಅವರಲ್ಲಿದ್ದಲ್ಲಿ ನಾವು ಬಹಿರಂಗ ಚರ್ಚೆಗೆ ಸಿದ್ದರಿದ್ದೇವೆ ಎಂದು ಸವಾಲೆಸೆದಿದ್ದ ಹಿನ್ನಲೆಯಲ್ಲಿ ಪ್ರತಿಭಟನಾಗಾರರು ಇಂದು ಬೆಳಗ್ಗೆ ನಗರಸಭೆ ಮುಂದೆ ಜಮಾಯಿಸಿ ಚರ್ಚೆಗೆ ಒತ್ತಾಯಿಸಿದರು.

ಬಹಿರಂಗ ಚರ್ಚೆಯಲ್ಲಿ ಆರೋಪ ಪ್ರತ್ಯಾರೋಪಗಳ ನಡುವ ಪ್ರತಿಭಟನೆಯ ರೂಪ ಪಡೆದುಕೊಂಡು ಪ್ರತಿಭಟನಾಗಾರರ ಮತ್ತು ಆಡಳಿತ ಬಿಜೆಪಿ ಪಕ್ಷದ ಕಾರ್ಯಕರ್ತರು ನಮ್ಮ ಪಕ್ಷದ ಅಧ್ಯಕ್ಷ ಕೆಬಿ.ಮುದ್ದಪ್ಪರ ಆಡಳಿತ ಮತ್ತು ಅಭಿವೃದ್ದಿಯನ್ನು ಸಹಿಸದೇ ಇಲ್ಲಸಲ್ಲದ ಆರೋಪ ಹೊರೆಸಿ ತೇಜೋವಧಗೆ ಮುಂದಾಗಿದ್ದೀರ ಎಂದಾಗ ಕೆರಳಿದ ಪ್ರತಿಭಟನಾಗಾರರು ಕೂಗಾಟ,ಕಿರುಚಾಟದಿಂದ ಪರಿಸ್ಥಿತಿ ಕೈಮೀರಿವ ಹಂತ ತಲುಪುತ್ತಿದಂತೆ ಸಮಯ ಪ್ರಜ್ಞೆ ಮೆರೆದ ಪೊಲೀಸ್ ಸಿಬ್ಬಂದಿ ಮಧ್ಯ ಪ್ರವೇಶ ದಿಂದ ಕೈಕೈ ಮಿಲಾಯಿಸುವ ಅನಾಹುತ ತಪ್ಪಿದಂತಾಯಿತು.

ಇಷ್ಟೇ ರಾದ್ದಾಂಥ ನಡೆಯುತ್ತಿದ್ದರೂ ನೆಪಮಾತ್ರಕ್ಕೆ ಪ್ರತಿಭಟನೆಯಲ್ಲಿ ಒಬ್ಬ ಜವಾಬ್ದಾರಿಯುತ ನಗರಸಭಾ ಸದಸ್ಯ ಮೊಬೈಲ್ ನಲ್ಲಿ ಕ್ಯಾಂಡಿಕ್ರಷ್ ಗೇಮ್ ಆಡಿಕೊಂಡು ಕೂತಿದ್ದರು ಎಂದರೆ ನಾಚಿಕೆಯಾಗಬೇಕು. ನಗರಸಭೆ ಆಡಳಿತ ಅಡ್ಡದಾರಿ ಹಿಡಿದಿದೆ ಎಂದು ಪ್ರತೀ ಸಭೆಯಲ್ಲಿ ಕೂಗಾಡೊ ಈತ ಇತ್ತೀಚೆಗೆ ಬಯಲಿಗೆಳೆದ ಪೌರಕಾರ್ಮಿಕರಿಗೆ ನೀಡುವ ಚಪ್ಪಲಿ ,ಶೂ ಖರೀದಿಯಲ್ಲಿ ಗೋಲ್ ಮಾಲ್ ಆಗಿದೆ ಎಂದು ಕಿರುಚಾಡಿ ಇಡೀ ನಗರಸಭೆ ಆಡಳಿತದ ಮೇಲೆ ನನ್ನ ಹದ್ದಿನ ಕಣ್ಣಿದೆ ಎಂದು ಕೂಗಾಡೋ ಇವರು ಎಲ್ಲರೂ ಕೂಗಾಡೋ ಸಮಯದಲ್ಲಿ ಸುಮ್ಮನಿರುವ, ಎಲ್ಲರೂ ಸುಮ್ಮನಿರುವ ಸಮಯದಲ್ಲಿ ಕೂಗಾಡುವ ಇವರ ತಂತ್ರಗಾರಿಕೆಯ ಅರ್ಥ ಅವರಿಂದಲೇ ‌ತಿಳಿಯ ಬೇಕಿದೆ.

ಇಲ್ಲಿ ಎಲ್ಲರೂ ಸತ್ಯ ಹರಿಶ್ಚಂದ್ರರೇ ಆದರೇ..ಇಲ್ಲಿ ನಡೆಯುವುದೆಲ್ಲಾ ಅಕ್ರಮ ಅನಾಚಾರಗಳೇ ನಾನು ನಿಷ್ಟಾವಂತ ನಾನು ನಿಷ್ಟಾವಂತ ಎಂದು ಹೆಗಲುತಟ್ಟಿಕೊಳ್ಳವ ಮತ್ತು ನಗರಸಭೆ ಮರ್ಯದೆ ಕಳೆಯುವ ಕೆಸರೆರಚಿ ಎರಚಿಸಿಕೊಳ್ಳುವ ಮಹಾನ್ ಕಾರ್ಯಕ್ಕೆ ದೊಡ್ಡಬಳ್ಳಾಪುರದ ನಾಗರೀಕರು ಮಾತ್ರ ಇಂತಹ ಸದಸ್ಯರಿಗಾ ನಾವು ಮತಹಾಕಿ ಗೆಲ್ಲಿಸಿದ್ದು? ಥೂ.ಚೀ. ಅಂತಿದ್ದಾರೆ. ಆದರೇನು ಒರಸಿಕೊಳ್ಳುವುದು ಕಲಿತಿದ್ದಾರಲ್ಲಾ…

  • ‌‌