ಬಾಲಕಿ ಮೇಲೆ ಹಂದಿ ದಾಳಿ

212

ಬಳ್ಳಾರಿ/ಹೊಸಪೇಟೆ : ತಾಲೂಕಿನ ಕಮಲಾಪುರ ಪಟ್ಟಣದ ಹಿರಿಕೇರಿ ಚೌವಡಿ ಸಮೀಪ ಹಂದಿ ದಾಳಿಯಿಂದ ಮೂರು ವರ್ಷದ ಭಾಗ್ಯ ಎನ್ನುವ ಬಾಲಕಿ ತೀವ್ರವಾಗಿ ಗಾಯಗೊಂಡಿರುವ ಘಟನೆ ಸೋಮವಾರ ನಡೆದಿದೆ. 

ಪಟ್ಟಣದ ಸಿದ್ದೇಶ್ವರ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಬಳಿಯಲ್ಲಿ ಮರಿಹಾಕಿರುವ ಹಂದಿಯೊಂದು ಬಾಲಕಿಯ ಮೇಲೆ ಏಕಾ ಏಕಿ ದಾಳಿ ಮಾಡಿದೆ.
ಕೂಡ್ಲಿಗಿ ತಾಲೂಕಿನ ಹರಕಬಾವಿ ಗ್ರಾಮದ ಶಿವಮ್ಮ ಮತ್ತು ರವಿ ಇವರ ಪುತ್ರಿ ಯುಗಾದಿ ಹಬ್ಬಕ್ಕೆ ಎಂದು ಕಮಲಾಪುರದಲ್ಲಿನ ಅಜ್ಜಿಯ ಮನೆಗೆ ಬಂದಿದ್ದಳು.
ಬಹಿರ್ದೆ ಸೆಗೆಂದು ಶಾಲೆ ಪಕ್ಕದಲ್ಲಿರುವ ತಿಪ್ಪೆಯ ಹತ್ತಿರ ಹೋದಾಗ ಘಟನೆ ನಡೆದಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಘಟನೆ ನಡೆಯುತ್ತಿದ್ದಂತೆ ಹತ್ತಿರದಲ್ಲಿದ್ದ ಸ್ಥಳೀಯರು ಹೋಗಿ ಬಾಲಕಿಯನ್ನು ದಾಳಿಯಿಂದ ರಕ್ಷಿಸಿದ್ದಾರೆ. ನಂತರ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಲಾಗಿದೆ.