ಪುತ್ಥಳಿಯ ಪ್ರತಿಷ್ಟಾಪನೆಗೆ ಶಂಖುಸ್ಥಾಪನೆ

238

ಬೆಂಗಳೂರು/ಕೆ.ಆರ್ ಪುರ– ಸಂವಿದಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ರವರ ಪುತ್ಥಳಿಯನ್ನು ಪ್ರತಿಷ್ಟಾಪಿಸಲು ತಾಲ್ಲೂಕು ಕಚೇರಿಯ ಮುಂದೆ ಶಾಸಕ ಬೈರತಿ ಬಸವರಾಜ್ ಗುದ್ದಲಿ ಪೂಜೆ ನೆರವೇರಿಸಿದರು.
ಕ್ಷೇತ್ರದ ತಾಲ್ಲೂಕು ಕಚೇರಿಯ ಮುಂದೆ ಡಾ.ಬಿ.ಆರ್.ಅಂಬೇಡ್ಕಕರ್ ಪ್ರತಿಮೆಯ ಶಂಖು ಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ಶತಮಾನಗಳಿಂದ ತುಳಿತಕ್ಕೊಳಗಾಗಿದ್ದ ದಲಿತ ಸಮಾಜದಲ್ಲಿ ಜನಿಸಿದ ಅಂಬೇಡ್ಕರರು ಮೇಲ್ವರ್ಗದ ದಬ್ಬಾಳಿಕೆಗೆ ಗುರಿಯಾಗಿ ಹಲವು ಅವಮಾನಗಳು ಮತ್ತು ಕಷ್ಟಯುತ ಜೀವನವನ್ನು ಅನುಭವಿಸಿದವರಾಗಿದ್ದು, ಶಿಕ್ಷಣದ ಕುರಿತು ಅಪಾರ ಆಸಕ್ತಿ ಹೊಂದಿದವರಾಗಿದ್ದರು, ಪ್ರಪಂಚದಲ್ಲೇ ಅತ್ಯಂತ ಹೆಚ್ಚು ಶಿಕ್ಷಿತನಾದ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾದವರು ಆಗಿದ್ದು, ದಲಿತ ಸಮುದಾಯ ಅನುಭವಿಸಿದ ದೌರ್ಜನ್ಯ ದಬ್ಬಾಳಿಕೆಯನ್ನು ಹೋಗಲಾಡಿಸಲು ದಲಿತರಿಗೆ ಶಿಕ್ಷಣ ಪ್ರಾಪ್ಥಿಯಾಗಲು ಹಲವು ಹೋರಾಟಗಳನ್ನು ಕೈಗೊಂಡವರ ಆಗಿದ್ದು, ತಮ್ಮ ಸಮುದಾಯದ ಏಳಿಗೆಗೆ ನಿರಂತರವಾಗಿ ಶ್ರಮಿಸಿದ್ದಾರೆ. ರಾಜಕೀಯದಲ್ಲಿ ಅವರ ಭಾಗವಹಿಸಿ ದಲಿತ ವರ್ಗ ಸಮಾಜದ ಮುಖ್ಯ ವಾಹಿನಿಗೆ ಬರಲೆಂದು ಹಲವು ಸಿದ್ದಾಂತಗಳನ್ನು ಪ್ರತಿಪಾದಿಸಿದರು, ಸಂವಿದಾನ ರಚನಾ ಸಮಿತಿಯ ಅಧ್ಯಕ್ಷರಾಗಿ ದಲಿತ ವರ್ಗಗಳ ಪ್ರಗತಿಗೆ ಹಲವು ರೀತಿಯ ಕೊಡುಗೆ ನೀಡಿದ್ದಾರೆ. ಮಾನವ ಶತಮಾನಗಳಿಂದ ರೂಡಿಸಿಕೊಂಡು ಬಂದಿದ್ದು, ಜಾತಿ ವ್ಯವಸ್ಥೆ ದಲಿತರನ್ನು ಹಲವು ಸೌಲಭ್ಯಗಳಿಂದ ವಂಚಿತವಾಗುವಂತೆ ಮಾಡಿದ್ದು ಸಮಾಜದ ಕಟ್ಟ ಕಡೇಯ ವ್ಯಕ್ತಿ ದಲಿತನೆಂಬ ಭಾವ ಮೂಡುವಂತಾಗಿತ್ತು, ಜಾತಿ ವ್ಯವಸ್ಥೆಯನ್ನು ಸಮಾಜದಿಂದ ಕಿತ್ತೊಗೆಯಲು ತಮ್ಮದೇ ಆದ ಸಿದ್ದಾಂತಗಳಿಂದ ದಲಿತ ವರ್ಗಕ್ಕೆ ಮಾತ್ರವಲ್ಲದೆ ಎಲ್ಲ ವರ್ಗಗಳಿಗೂ ಮಹಾನ್ ಮಾನವತಾವಾದಿಯಾಗಿ ಉಳಿದುಕೊಂಡಿದ್ದಾರೆಂದು ತಿಳಿಸಿದರು.

ಕೆಆರ್ ಪುರ ಭಾಗದಲ್ಲಿ ಬಹು ದಿನಗಳ ಬೇಡಿಕೆಯಾಗಿದ್ದ ಅಂಬೇಡ್ಕರರ ಪ್ರತಿಮೆಯ ಅನಾವರಣ ಇಂದು ತಾಲ್ಲೂಕು ಕಚೇರಿಯ ಆವರಣದಲ್ಲಿ ಸಾದರಗೊಳ್ಳುತ್ತಿರುವುದು ಸಂತಸದ ಸಂಗತಿ, ನನ್ನ ಶಾಸಕನ ವೃತ್ತಿಯಿಂದ ಬರುವ ವೇತನವನ್ನು ಪುತ್ಥಳಿಯ ನಿಮರ್ಾಣ ಕಾರ್ಯಕ್ಕೆ ಮೀಸಲಿಡುತ್ತೇನೆ, ಅಲ್ಲದೆ ಸ್ಥಳೀಯ ದಲಿತ ಸಂಘಟನೆಯ ಒಕ್ಕೂಟದ ಮುಖಂಡರು ಪುತ್ಥಳಿಯ ನಿರ್ಮಾಣಕ್ಕೆ ಆರ್ಥಿಕ ನೆರೆವು ನೀಡಲು ಮುಂದೆ ಬಂದಿದ್ದಾರೆ. 15 ಅಡಿ ಎತ್ತರದ ಬೃಹತ್ ಪ್ರತಿಮೆ ನಿರ್ಮಾಣ ಮಾಡಿಸಲಾಗುತ್ತಿದ್ದು, ವಿಧಾನ ಸೌಧದ ಬಳಿಯಿರುವ ಅಂಬೇಡ್ಕರರ ಪ್ರತಿಮೆಗಿಂತ ದೊಡ್ಡ ಗಾತ್ರದ್ದಾಗಲಿದೆ, 126ನೇ ಅಂಬೇಡ್ಕರ್ ಜನ್ಮದಿನದಂದು ಮಾನ್ಯ ಮುಖ್ಯಮಂತ್ರಿಗಳಿಂದ ಉದ್ಘಾಟನೆ ಮಾಡಿಸಲಾಗವುದೆಂದು ತಿಳಿಸಿದ್ದಾರೆ. ಕಾರ್ಯಕ್ರಮದಲ್ಲಿ ದಲಿತ ಸಂಘಟನೆಗಳ ಮುಖಂಡರು ಹಾಜರಿದ್ದರು.
ಈ ಸಂದರ್ಭದಲ್ಲಿ ತಹಶೀಲ್ದಾರ್ ತೇಜಸ್ ಕುಮಾರ್, ಪಾಲಿಕೆ ಸದಸ್ಯರುಗಳಾದ ಜಯಪ್ರಕಶ್, ಸುರೇಶ್, ರಾಧಮ್ಮ ವೆಂಕೇಶ್, ಶ್ರೀಕಾಂತ್, ಎಸ್.ಜಿ.ನಾಗರಾಜ್, ಮುಖಂಡರಾದ ಎಲ್.ಮುನಿಸ್ವಾಮಿ, ಎಮ್.ಆರ್.ವೆಂಕಟೇಶ್ ಸೇರಿದಂತೆ ಮತ್ತಿತರರಿದ್ದರು.