ಬಡವರ ಫ್ರಿಜ್ಡ್ ಗೆ ಬಾರೀ ಬೇಡಿಕೆ.

236

ಬೆಂಗಳೂರು/ಕೃಷ್ಣರಾಜಪುರ: ಬೇಸಿಗೆ ಪ್ರಾರಂಭವಾಗುತ್ತಿದ್ದಂತೆ ಬಿಸಿಲಿನ ಬೇಗೆಗೆ ತಂಪು ಪಾನೀಯಗಳತ್ತ ಮುಖ ಮಾಡುವ ಸಾರ್ವಜನಿಕರು .ಆರೋಗ್ಯ ದೃಷ್ಟಿಯಿಂದ ನೈಸರ್ಗಿಕವಾಗಿ ತಣ್ಣನೆಯ ನೀರು ದೂರೆಯುವ 

ಬಡವರ ಫ್ರಿಜ್ಡ್ ಎಂದೇ ಖ್ಯಾತಿ ಹೋಂದಿರುವ ಮಡಿಕೆಗಳಿಗೆ ಮಾರು ಹೋಗಿದ್ದಾರೆ.
ಬಡವರು ದುಬಾರಿ ವೆಚ್ಚ ಕೊಟ್ಟು ಫ್ರಿಜ್ಡ್ಗಳನ್ನು ಕೊಂಡುಕೊಳ್ಳಲಾಗುವುದಿಲ್ಲ ಅದರ ಪಯರ್ಾಯವಾಗಿ ಮಡಿಕೆಗಳ ಮೊರೆ ಹೋಗುತ್ತಾರೆ ಅಲ್ಲದೆ ಆರೋಗ್ಯಕ್ಕೂ ಪೂರಕವಾಗಿರುವ ಹಿನ್ನೆಲೆಯಲ್ಲಿ ಶ್ರೀಮಂತರೂ ಸಹ ಮಡಿಕೆಗಳತ್ತ ಮುಖ ಮಾಡುತ್ತಿದ್ದಾರೆ.

ಕೆಆರ್ ಪುರದ ಐಟಿಐ ಕಾಲೋನಿ ಮತ್ತು ಕುಂಬಾರ ಬೀದಿಯಲ್ಲಿ ಮಡಿಕೆ ವ್ಯಾಪಾರ ಜೋರಾಗಿದ್ದು, ಗ್ರಾಹಕರು ಮಡಿಕೆಗಳತ್ತ ಮುಖ ಮಾಡಿ ಕೊಂಡುಕೊಳ್ಳುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಈಗಾಗಲೇ ಬಿಸಿಲಿನ ತಾಪ ಮಿತಿಮೀರುತ್ತಿದೆ ಇದರಿಂದ ಬಚಾವಾಗಲು ಹಣ್ಣೀನ ರಸಗಳಿಗೆ ಹಾಗೂ ತಂಪು ಪಾನೀಯಗಳಿಗೆ ಮಾರುಹೋಗುತ್ತಿರುವ ಜನತೆ ಮಡಿಕೆಯನ್ನು ಪಯಾರ್ಯವಾಗಿ ಮಾಡಿಕೊಂಡು ಆರೋಗ್ಯ ಸುಧಾರಣೆಗೆ ಮುಂದಾಗಿದ್ದಾರೆ.

ಬೆಂಗಳೂರು ಪೂರ್ವ ತಾಲ್ಲೂಕಿನ ಪ್ರದೇಶದಲ್ಲಿ ದಾಖಲೆ ಪ್ರಮಾಣದಲ್ಲಿ ಉಷ್ಣಾಂಶ ಹೆಚ್ಚಾಗಿದ್ದು, ಜನತೆ ಮನೆಯಿಂದ ಹೊರಗಡೆ ಬರಲು ಪರದಾಡುತ್ತಿದ್ದಾರೆ ಬಿಸಿಲಿನ ತಾಪದಿಂದ ತಪ್ಪಿಸಿಕೊಳ್ಳಲು ನಾನಾ ಮಾಗರ್ೋಪಾಯ ಹುಡುಕುತ್ತಿದ್ದಾರೆ. ರಾಜ್ಯದಲ್ಲಿ ನಿಯಮಿತವಾಗಿ ಮಳೆಯಾಗದ ಹಿನ್ನೆಲೆಯಲ್ಲಿ ತಾಪಮಾನ ಹೆಚ್ಚಾಗಿದೆ ಅಲ್ಲದೆ ಬೇಸಿಗೆ ಪ್ರಾರಂಭದಲ್ಲೇ ಬಿಸಿಲಿನ ದಗೆ ಮತ್ತೆ ಮಡಿಕೆಗಳತ್ತ ಮುಖ ಮಾಡಿಸಿದೆ,
ಹೊಸ ವಿನ್ಯಾಸದಲ್ಲಿ ಮಣ್ಣಿನ ಮಡಿಕೆಗಳು ಆಧುನಿಕತೆಗೆ ತಕ್ಕಂತೆ ಮಣ್ಣಿನ ಮಡಿಕೆಗಳೂ ಸಹ ಹೊಸ ಹೊಸ ವಿನ್ಯಾಸಗಳೊಂದಿಗೆ ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ, ಮಡಿಕೆಗಳು ವಿವಿಧ ಬಗೆಯ ವಿನ್ಯಾಸಕ್ಕೂ ಅದರದ್ದೇ ಆದ ಬೆಲೆಗಳಿದ್ದು, ವಿವಿಧ ಗಾತ್ರದ ಮಡಿಕೆಗಳಿಗೂ ದರ ನಿಗದಿಯಾಗಿದೆ. ಮಡಿಕೆಗಳಲ್ಲಿ ನೀರು ಕುಡಿಯಲು ಸುಲಭವಾಗಲು ನೆಲ್ಲಿಗಳನ್ನು ಹಾಕಲಾಗಿದೆ ಇದು ಗ್ರಾಹಕರನ್ನು ಸೆಳೆಯಯಲು ಹೆಚ್ಚು ಅನುಕೂಲವಾಗುತ್ತಿವೆ.

ಲಾಭದಾಯಕವಾಗದ ಕಾಯಕ:
ವಂಶಪಾರಂಪರೆಯಾಗಿ ಬಂದ ಕಸುಬನ್ನು ಲಾಭ ಇಲ್ಲದಿದ್ದರೂ ಇಂದಿಗೂ ನಾವು ಕುಂಬಾರ ಕಾಯಕವನ್ನು ಮುಂದುವರೆಸಿಕೊಂಡು ಬಂದಿದ್ದೇವೆ, ಬೆಸಿಗೆಯಾದ ಕಾರಣಕ್ಕೆ ಮಡಿಕೆಗಳಿಗೆ ಬೇಡಿಕೆ ಹೆಚ್ಚಾಗಿದೆ, ಉದ್ದಿಮೆಯಿಂದ ಒಂದು ಕಾಲಕ್ಕೆ ಮಾತ್ರ ಲಾಭವಿದೆ, ಮಡಿಕೆ ಮತ್ತು ಮಣ್ಣಿನ ತಯಾರಿಕಾ ವಸ್ತುಗಳನ್ನು ಜನ ಅಪರೂಪಕ್ಕೆ ಖರೀದಿ ಮಾಡುತ್ತಾರೆ, ಉದ್ದಿಮೆ ಲಾಭದಾಯಕವಾಗಿಲ್ಲ, ಸಮಾದಾನಕರ ಆದಾಯ ಬರುತ್ತಿದೆ ಎಂದು ಮಡಿಕೆ ವ್ಯಾಪಾರಿ ತಿಳಿಸಿದ್ದಾರೆ.

ಮಡಿಕೆ ಬಳಸಿ ತಯಾರು ಮಾಡಿದ ಆಹಾರ ಮತ್ತು ನೀರು ಆರೋಗ್ಯಕ್ಕೆ ಹೆಚ್ಚು ಪೂರಕವಾಗಿದೆ ಮಧುಮೇಹ ರಕ್ತದೊತ್ತಡ ಸೇರಿದಂತೆ ಇನ್ನಿತರೇ ರೋಗಗಳಿಗೆ ರಾಮಬಾಣವಾಗಿದ್ದು, ಆರೋಗ್ಯಕ್ಕೆ ರಕ್ಷಾಕವಚವಾಗಿದೆ, ಬಿಸಿಲಿನ ತಾಪಕ್ಕೆ ಉಂಟಾಗುವ ಬಾಯಾರಿಕೆಗೆ ಮಡಿಕೆಯಲ್ಲಿ ಶೇಖರಿಸಿದ ನೀರು ನೈಸಗರ್ಿಕ ಹಾಗು ಅಡ್ಡಪರಿಣಾಮಗಳು ಬೀರುವುದಿಲ್ಲ ಇಂತಹ ಮಡಿಕೆಗಳು ಪ್ರಸ್ತುತ ಒತ್ತಡದ ಜೀವನ ಶೈಲಿಗೆ ಹೆಚ್ಚು ಪೂರಕವಾಗಿರುತ್ತದೆ ಎಂದು ಗ್ರಾಹಕ ಪ್ರಭು ತಮ್ಮ ಅನಿಸಿಕೆ ವ್ಯಕ್ತಪಡಿಸಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಮಡಿಕೆ ವ್ಯಾಪಾರ ಜೋರಾಗಿದ್ದು, ಕುಂಬಾರರು ಉತ್ಪಾದನೆಗೆ ಹೆಚ್ಚು ಒತ್ತು ನೀಡಿದ್ದಾರೆ ಆದರೆ ಮಧ್ಯವರ್ತಿಗಳ ಹಾವಳಿ ಯಿಂದಾಗಿ ಲಾಭ ದೊರೆಯುತ್ತಿಲ್ಲ, ಕುಂಬಾರರ ಬಳಿ ಕಡಿಮೆ ಬೆಲೆಗೆ ಮಡಿಕೆ ಖರೀದಿಸುವ ಮಧ್ಯವರ್ತಿಗಳು ಹೆಚ್ಚು ಬೆಲೆಗೆ ಮಾರುಕಟ್ಟೆಯಲ್ಲಿ ವ್ಯಾಪಾರ ಮಾಡುವ ಮೂಲಕ ಹೆಚ್ಚು ಲಾಭ ಗಳಿಸುತ್ತಿದ್ದಾರೆ.