ಲಕ್ಷಾಂತರ ರೂಪಾಯಿ ಮೌಲ್ಯದ ನಗನಾಣ್ಯ ದೋಚಿ ಪರಾರಿ

281

ಬೆಂಗಳೂರು/ಕೃಷ್ಣರಾಜಪುರ: ಒಂಟಿಯಾಗಿರುವ ಐಷಾರಾಮಿ ಮನೆಯನ್ನು ಗುರಿಯಾಗಿಸಿಕೊಂಡ ದರೋಡೆಕೋರರ ತಂಡವೊಂದು ಮಾರಕಾಸ್ತ್ರಗಳೊಂದಿಗೆ ಮನೆಗೆ ನುಗ್ಗಿ ಲಕ್ಷಾಂತರ ರೂಪಾಯಿ ಮೌಲ್ಯದ ನಗನಾಣ್ಯ ದೋಚಿ ಪರಾರಿಯಾಗಿರುವ ಘಟನೆ ಕೆಆರ್ ಪುರ ಪೊಲೀಸ್ ಠಾಣೆ ವ್ಯಾಪ್ತಿಯ ವೈಟ್ ಸಿಟಿ ಬಡಾವಣೆ ನಡೆದಿದ್ದು, ಘಟನೆಯಿಂದ ಸಾರ್ವಜನಿಕರು ಬೆಚ್ಚಿಬಿದಿದ್ದಾರೆ.

ಕೆಆರ್ ಪುರ ಪೊಲೀಸ್ ಠಾಣೆ ವ್ಯಾಪ್ತಿಯ ಶಿಗೇಹಳ್ಳಿ ಬಳಿಯ ವೈಟ್ಸಿಟಿ ಬಡಾವಣೆಯಲ್ಲಿ ವಾಸವಾಗಿರುವ ನೋಕಿಯ ಕಂಪನಿಯಲ್ಲಿ ಲೆಕ್ಕಪರಿಶೋಧಕನಾಗಿ ಕಾರ್ಯ ನಿರ್ವಹಿಸುತ್ತಿದ್ದ ಪಾಥರ್ಿಬನ್ ಎಂಬುವವರ ಮನೆಗೆ ತಡರಾತ್ರಿ ಸುಮಾರು 2.30 ಸಮಯದಲ್ಲಿ ಏಕಾಏಕಿ ನುಗ್ಗಿದ 7 ಜನ ಡಕಾಯಿತರ ತಂಡ ಕಿಟಿಕಿ ಬಾಗಿಲನ್ನು ಮುರಿದು ಒಳನುಗ್ಗಿ ಮನೆ ಮಾಲಿಕ ಪಾಥರ್ಿಬನ್ ಹಾಗೂ ಆತನ ಪತ್ನಿ ಪ್ರಭಾವತಿ ಮಲಗಿದ್ದ ಕೋಣೆಗೆ ತೆರಳಿ ಮಾಲೀಕ ಪಾಥರ್ಿಬನ್ ಮುಖಕ್ಕೆ ಬೂಟ್ ಕಾಲಿನಿಂದ ಒದ್ದು ಹಲ್ಲೆ ನಡೆಸಿದಲ್ಲದೆ ಬಾಯಿಗೆ ಪಿಸ್ತೂಲ್ ಇಟ್ಟು ಕಿರುಚದಂತೆ ಬೆದರಿಕೆಯೊಡ್ಡಿ,ಕೈ ಕಾಲುಗಳನ್ನು ಹಗ್ಗದಿಂದ ಕಟ್ಟಿ ರಾಡಿನಿಂದ ಎಡಗಾಲಿಗೆ ಹೊಡೆದು ತೀವ್ರವಾಗಿ ಹಲ್ಲೆ ನಡೆಸಿದ್ದಾರೆ. ನಂತರ ಮಗಳು ಪವಿತ್ರ ಹಾಗೂ ತಾಯಿ ವಲ್ಲಿಯಮ್ಮಾಳ್  ಮಲಗಿದ್ದ ಕೋಣೆಗಳಿಗೆ ತೆರಳಿ ಅವರನ್ನು ಥಳಿಸಿ ಮನೆಯಲ್ಲಿದ್ದ 2.60 ಲಕ್ಷ ರೂ ನಗದು, ಹೆಣ್ಣು ಮಕ್ಕಳ ಮದುವೆಗಾಗಿ ಮಾಡಿಸಿದ್ದ ಲಕ್ಷಾಂತರ ರೂ ಮೌಲ್ಯದ ಚಿನ್ನಾಭರಣ ಸೇರಿದಂತೆ ತಾಯಿ ವಲ್ಲಿಯಮ್ಮನ ಬೇಸಿಕ್ ಮೊಬೈಲ್ ಬಿಟ್ಟು ಉಳಿದ ಮೂವರ ಬೆಲೆಬಾಳುವ ಮೊಬೈಲ್ ಪೋನ್ಗಳನ್ನು ದೊಚಿ ಪರಾರಿಯಾಗಿದ್ದಾರೆ ಎಂದು ಮನೆ ಮಾಲೀಕ ಪಾಥರ್ಿಬನ್ ತಿಳಿಸಿದ್ದಾರೆ.

ಬೆಳಗಿನ ಜಾವ 4.30 ರಿಂದ 5 ಗಂಟೆ ಸುಮಾರಿನ ತನಕ ದರೋಡೆಕೋರರು ಮನಯಿಂದ ತೆರಳಿದ ನಂತರ ಪಾಥರ್ಿಬನ್ ಹೆಂಡತಿ ಮಕ್ಕಳು ಅಕ್ಕಪಕ್ಕದ ಮನೆಯವರಿಗೆ ವಿಷಯ ತಿಳಿಸಿ, ಜೊತೆಗೆ ದರೋಡೆಕೋರರು ಬಿಟ್ಟುಹೋಗಿದ ವಲ್ಲಿಯಮ್ಮನ ಮೊಬೈಲ್ನಿಂದ ಸಂಬಂದಿಕರಿಗೆ ವಿಷಯ ಮುಟ್ಟಿಸಿ ನಂತರ ಕೆ.ಆರ್.ಪುರ ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾರೆ. ವಿಷಯ ತಿಳಿದ ಕೂಡಲೆ ಕೆ.ಆರ್.ಪುರ ಪೊಲೀಸರು ಬೆರಳಚ್ಚು, ಶ್ವಾನದಳ ತಂಡವನ್ನು ಘಟನಾ ಸ್ಥಳಕ್ಕೆ ಕರೆಸಿ ಪರಿಶೀಲನೆ ನಡೆಸಿದ್ದಾರೆ,

ಬೆಂಗಳೂರು ನಗರ ಪೊಲೀಸ್ ಆಯುಕ್ತ ಪ್ರವೀಣ್ ಸೂದ್, ಸ್ಥಳೀಯ ಶಾಸಕ ಬೈರತಿ ಬಸವರಾಜ್ ಸ್ಥಳಕ್ಕೆ ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.