ಖಾಲಿಕೊಡ ಪ್ರದರ್ಶನೆ ಪ್ರತಿಭಟನೆ

304

ಮಂಡ್ಯ/ಮಳವಳ್ಳಿ:ಮಳೆ ಬೆಳೆ ಇಲ್ಲದೆ ಆಹಾರ ಸಮಸ್ಯೆ ಒಂದು ಕಡೆಯಾದರೆ ಮತ್ತೊಂದುಕಡೆ ಕುಡಿಯುವ ನೀರಿನ ಸಮಸ್ಯೆ ಕುಡಿಯುವ ನೀರು ನೀಡುವಂತೆ ಮಳವಳ್ಳಿ ತಾಲ್ಲೂಕಿನ ನೆಲಮಾಕನಹಳ್ಳಿ ಗ್ರಾಮ ಪಂಚಾಯತಿ ಮುಂದೆ ಗುಳಗಟ್ಟ ಗ್ರಾಮದ ಮಹಿಳೆಯರು ಹಾಗೂ ಗ್ರಾಮಸ್ಥರು ಖಾಲಿಕೊಡ ಪ್ರದರ್ಶನ ಮಾಡಿ ಪ್ರತಿಭಟನೆ ನಡೆಸಿದರು. ಗುಳಗಟ್ಟ ಗ್ರಾಮದಲ್ಲಿ ಕಳೆದ 2 ತಿಂಗಳಿಂದ ಕುಡಿಯುವ ನೀರಿನ ಸಮಸ್ಯೆವಿರುವ ಬಗ್ಗೆ ಸಾಕಷ್ಟು ಬಾರಿ ಪಂಚಾಯಿತಿಗೆ ಮನವಿ ಸಲ್ಲಿಸಿದ್ದರೂ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ಇದಲ್ಲದೆ ಇತ್ತೀಚಿಗೆ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಿಂದ ಬೋರ್ ವೆಲ್ ನ್ನು ಅಂರ್ತಜಲ ಚೆಕ್ ಮಾಡದೆ ಹಾಕಿಸಿದ್ದು ಒಂದು ಇಂಚು ನೀರು ಬರುತ್ತಿದೆ ಆದರೂ ಅದಕ್ಕೆ ಮೋಟರ್ ಆಳವಡಿಸಿ ಸಕಾ೯ರ ದ ಹಣ ದುರುಪಯೋಗಪಡಿಸಿದ್ದಾರೆ. ಇದಲ್ಲದೆ 2008–09 ರಲ್ಲಿ ಬ್ಯಾಲಿಂಗ್ ಹತ್ತಿರ ಬೋರ್ ವೆಲ್ ಗೆ ಹಳೆ ಮೋಟಾರ್ ಗೆ ಬಣ್ಣ ಹೊಡೆದು 2.75 ಲಕ್ಷ ರೂ ಬಿಲ್ ಮಾಡಿಕೊಂಡಿದ್ದಾರೆ ಇದು ತನಿಖೆ ಯಾಗಬೇಕು ಎಂದು ಒತ್ತಾಯಿಸಿದರು. 

ಪ್ರತಿಭಟನೆ ಯಲ್ಲಿ ಗುಳಗಟ್ಟ ಕೃಷಿ ಪತ್ತಿನ ಸಹಕಾರ ಸಂಘದ ಮಾಜಿ ಅಧ್ಯಕ್ಷ ಜವರೇಗೌಡರು, ನಾಗೇಶ್. ಸ್ವಾಮಿ, ಶಿವರುದ್ರ ಸೇರಿದಂತೆ ಮತ್ತಿತ್ತರರು ಇದ್ದರು