ಮನವಿಗೆ ಸ್ಪಂದಿಸಿದ ಪುರಾತತ್ವ ಇಲಾಖೆ

280

ಬಳ್ಳಾರಿ/ಹೊಸಪೇಟೆ: ವಿಶ್ವ ವಿಖ್ಯಾತ ಹಂಪಿಯ ವಿರುಪಾಕ್ಷೇಶ್ವರ ದೇವಸ್ಥಾನದಲ್ಲಿ ಹಾಕಲಾಗಿದ್ದ ಕಬ್ಬಿಣದ ಸ್ಕೆಪೋರ್ಡಿಂಗ್(ಸಾರುವೆ) ಸ್ಥಳೀಯರ ಹಾಗು ದೇವಸ್ಥಾನದ ಅರ್ಚಕರ ಮನವಿಗೆ ಸ್ಪಂದಿಸಿ ತೆರವುಗೊಳಿಸಿದ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ

ಶ್ರೀ ವಿರುಪಾಕ್ಷೇಶ್ವರ ದೇವಸ್ಥಾನದ ಎಡಭಾಗದಲ್ಲಿನ ಉಬ್ಬು ಶಿಲ್ಪಗಳ ಸಂರಕ್ಷಣಾ ಕಾರ್ಯಕ್ಕೆ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ವರ್ಷಗಳ ಹಿಂದೆ ಕಬ್ಬಿಣದ ಸ್ಕೆಪೋರ್ಡಿಂಗ್(ಸಾರುವೆ) ಕಳೆದ ಕೆಲವು ದಿನಗಳಿಂದ ಉಬ್ಬುಶಿಲ್ಪಗಳ ಸಂರಕ್ಷಣಾ ಕಾರ್ಯಗಳನ್ನು ಸ್ಥಗಿತಗೊಳಿಸಲಾಗಿತ್ತು
ಶ್ರೀ ವಿರುಪಾಕ್ಷೇಶ್ವರ ದೇವಸ್ಥಾನದಲ್ಲಿ ಪ್ರತಿ ಅಮವಾಸ್ಯೆ ಹಾಗು ಹುಣ್ಣಿಮೆಯಂದು ಉತ್ಸವ ಮೂರ್ತಿಗಳನ್ನು ಪಲ್ಲಕ್ಕಿಯಲ್ಲಿಟ್ಟು ದೇವಸ್ಥಾನ ಪ್ರದಕ್ಷಿಣೆ ಹಾಕಲಾಗುತ್ತಿತ್ತು ಆದರೆ ಕಬ್ಬಿಣದ ಸ್ಕೆಪೋರ್ಡಿಂಗ್(ಸಾರುವೆ) ಹಾಕಿದಾಗಿನಿಂದ ಪಲ್ಲಕ್ಕಿ ಉತ್ಸವವನ್ನು ಪ್ರದಕ್ಷಿಣೆ ಹಾಕಲು ತೊಂದರೆ ಆಗುತ್ತಿದ್ದರಿಂದ ಕೈಬಿಡಲಾಗಿತ್ತು
ಕಳೆದ ತಿಂಗಳು ಹೊಸಪೇಟೆಯ ಸಹಾಯಕ ಆಯುಕ್ತರ ಸಮ್ಮುಖದಲ್ಲಿ ನೆಡೆದ ಜಾತ್ರಾ ಮಹೋತ್ಸವದ ಪೂರ್ವಭಾವಿ ಸಭೆಯಲ್ಲಿ ಹಿಂದೂ ಧಾರ್ಮಿಕ ಧತ್ತಿಇಲಾಖೆ ಸಹಾಯಕ ಆಯುಕ್ತರು, ದೇವಸ್ಥಾನದ ಕಾರ್ಯನಿರ್ವಹಣಾಅಧಿಕಾರಿ, ಸ್ಥಳೀಯರು ಹಾಗು ಅರ್ಚಕರು ಹಿರಿಯ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ ಸಮಸ್ಯೆಯನ್ನು ಗಮನಿಸಿದ ಅಧಿಕಾರಿಗಳು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿದ ನಂತರ ಸ್ಕೆಪೋರ್ಡಿಂಗ್(ಸಾರುವೆ)ಯನ್ನು ತೆರವುಗೊಳಿಸಿ ದೇವಸ್ಥಾನದಲ್ಲಿ ಜಾತ್ರಾಮಹೋತ್ಸವ ಹಾಗು ಅಮವಾಸ್ಯೆ ಹಾಗು ಹುಣ್ಣಿಮೆಯಂದು ನೆಡೆಯುವ ಧಾರ್ಮಿಕ ಕಾರ್ಯಕ್ರಮಗಳಿಗೆ ಅನುವುಮಾಡಿಕೊಟ್ಟಿದ್ದಾರೆ