ಕಾಣಿಕೆಹುಂಡಿಯ ಹಣ ಎಣಿಕೆ

303

ಬಳ್ಳಾರಿ / ಹೊಸಪೇಟೆ:ಐತಿಹಾಸಿಕ ಹಂಪಿ ವಿರೂಪಾಕ್ಷೇಶ್ವರ ಸ್ವಾಮಿ ಕಾಣಿಕೆ ಹುಂಡಿಯಲ್ಲಿ 9.66 134 ಲಕ್ಷ ಆಧಿಕ ಹಣ ಸಂಗ್ರಹಗೊಂಡಿದೆ 

ಹಂಪಿ ವಿದ್ಯಾರಣ್ಯ ಪೀಠಾಧಿಪತಿ ವಿದ್ಯಾರಣ್ಯ ಭಾರತಿ ಸ್ವಾಮಿಜಿ ನೇತೃತ್ವದಲ್ಲಿ ಹಿಂದೂ ಧಾರ್ಮಿಕ ದತ್ತಿ ಇಲಾಖೆ, ವಿರೂಪಾಕ್ಷೇಶ್ವರ ಸ್ವಾಮಿ ದೇವಸ್ಥಾನ ಸಮಿತಿ, ಪೊಲೀಸ್ ಇಲಾಖೆ, ಪ್ರಗತಿ ಕೃಷ್ಣ ಗ್ರಾಮೀಣ ಹಾಗೂ ಭಕ್ತರ ಸಮ್ಮುಖದಲ್ಲಿ ಕಾಣಿಕೆ ಹುಂಡಿಯನ್ನು ಗುರುವಾರ ತೆರೆಯಲಾಯಿತು. ತೀವ್ರ ಬರಗಾಲ ಹಾಗೂ ನೋಟ್‌ಬ್ಯಾನ್ ಎಫೆಕ್ಟ್ ನಡುವೆಯೂ ಹುಂಡಿಗೆ ಸಾಕಷ್ಟು ಕಾಣಿಕೆ ಹಣ ಹರಿದು ಬಂದಿದೆ.

ವಿರೂಪಾಕ್ಷೇಶ್ವರ ಸ್ವಾಮಿ ದೇವಸ್ಥಾನ ಸಮಿತಿ ಕಾರ್ಯನಿರ್ವಾಹಕ ಅಧಿಕಾರಿ ಪ್ರಕಾಶ ರಾವ್, ಹಿಂದೂ ಧಾರ್ಮಿಕ ದತ್ತಿ ಇಲಾಖೆ ಅಧೀಕ್ಷಕ ಮಲ್ಲಪ್ಪ, ಎಎಸ್‌ಐ ಇಂದ್ರಮ್ಮ, ಪ್ರಗತಿ ಕೃಷ್ಣ ಗ್ರಾಮೀಣ ಬ್ಯಾಂಕ್ ವ್ಯವಸ್ಥಾಪಕ ಶ್ರೀನಿವಾಸ ರಾವ್ ಸೇರಿ ಇತರರು ಇದ್ದರು.