ಅಧಿಕಾರಿಗಳ ತಾರತಮ್ಯ ಧೋರಣೆ.

525

ಬಳ್ಳಾರಿ/ ಹೊಸಪೇಟೆ:  ವಿಶ್ವವಿಖ್ಯಾತ ಹಂಪಿಯ ವಿರುಪಾಕ್ಷೇಶ್ವರ ದೇವಸ್ಥಾನಕ್ಕೆವಾರ್ಷಿಕ ಆದಾಯಲಕ್ಷಗಟ್ಟಲೇ ಇದ್ದರೂ ಬಿರುಬೇಸಿಗೆಯಲ್ಲೂ ಭಕ್ತರಿಗೆ ದೇವಸ್ಥಾನದ ಪ್ರಾಂಗಣದಲ್ಲಿ  ನೆಲಹಾಸು ಹಾಕಲು ಕಾಳಜಿ ವಹಿಸದ ಅಧಿಕಾರಿಗಳು

ಹಂಪಿ ಪ್ರದೇಶ ಕಲ್ಲುಬಂಡೆಗಳಿಂದ ಕೂಡಿದ ಪ್ರದೇಶ ನೆತ್ತಿ ಸುಡುವ ಭಯಂಕರ ಬಿಸಿಲು ಪಾದರಕ್ಷೆಗಳು ಇಲ್ಲದೆ ಒಂದು ಹೆಜ್ಜೆ ಮುಂದೆ ಹೋಗಲು ಆಗುವುದಿಲ್ಲಾ  ಅಂತಹದರಲ್ಲಿ ವಿರುಪಾಕ್ಷೇಶ್ವರ ದೇವಸ್ಥಾನದ  ಹಾಸುಬಂಡೆಗಳು ಕಾದು ಕಾವಲಿಯಾಗಿವೆ ಇನ್ನು ದರ್ಶನಕ್ಕೆ ಬರುವ ಭಕ್ತರಿಗೆ ಹಾಸು ಬಂಡೇಯಲ್ಲೇ  ದೇವರು ಕಾಣುತ್ತಿದ್ದಾನೆ

ದೇವಸ್ಥಾನಕ್ಕೆ ವಾರ್ಷಿಕ ಲಕ್ಷಾಂತರ ರೂಪಾಯಿ  ಆದಾಯ ವಿದ್ದರೂ ದೇವಸ್ಥಾನದ ಪ್ರಾಂಗಣದಲ್ಲಿ  ಒಂದೇ ಬದಿಯಲ್ಲಿ ನೆಲಹಾಸು ಹಾಸಿದ್ದರಿಂದ ಬೆಂಕಿ ಬಿಸಿಲಿನಲ್ಲಿ ಭಕ್ತರು ದೇವರ ದರ್ಶನಕ್ಕೆ  ಮಕ್ಕಳಂತೆ ಓಡೋಡಿ ಬರುತ್ತಿದ್ದಾರೆ

ಇನ್ನು ದೇವಸ್ಥಾನಕ್ಕೆ ಯಾರಾದರು ಅಥಿತಿಗಳು ಬಂದರೆ ನೆರಳಿದ್ದರೂ ಎರಡು ಬದಿಯಲ್ಲಿ ನೆಲಹಾಸುಹಾಕಿ  ಬೆನ್ನುತಟ್ಟಿಸಿಕೊಳ್ಳುತ್ತಾರೆ ಆದರೆದೇವಸ್ಥಾನಕ್ಕೆ ಬರುವ ಸಾಮಾನ್ಯ ಭಕ್ತರು  ಪ್ರವೇಶ ಶುಲ್ಕಕಟ್ಟಿಯೂ  ಕಾದಬಂಡೆ ಕಲ್ಲುಗಳ ಮೇಲೆ ಓಡಬೇಕು ಈ ರೀತಿ
ತಾರತಮ್ಯ ಅನುಸರಿಸುವುದು ಸರಿಯಾದ  ಕ್ರಮ ಅಲ್ಲಾ ಎನ್ನುತ್ತಾರೆ ವಿಜಯನಗರ ಸ್ಮಾರಕ ಸಂಸ್ಕøತಿಸಂರಕ್ಷಣಾ ಸೇನೆ ಸಂಚಾಲಕ ಈರಣ್ಣ ಪೂಜಾರಿ

ಈ ಕುರಿತು ಹಂಪಿಯ ದೇವಸ್ಥಾನದ ಧಾರ್ಮಿಕ ಧತ್ತಿ ಇಲಾಖೆಯ ಅಧಿಕಾರಿಗಳನ್ನು ಕೇಳಿದರೆ  ಹೊಸದಾಗಿ  ನೆಲಹಾಸುಗಳನ್ನು ಖರೀದಿಸಲಾಗಿದೆ ಜಾತ್ರೆ  ಸಮಯದಲ್ಲಿ ಹಾಕುತ್ತೇವೆ ಎಂದು ಹೇಳಿ ನುಳಿಚಿ ಕೊಳ್ಳುವ ಇವರ ಈ ತಾರತಮ್ಯ ದೋರಣೆಯನ್ನು ಆ ವಿರೂಪಾಕ್ಷ ನೇ ಮೆಚ್ಚಬೇಕಿದೆ.