ಅಂತೂ…ಕಾಲುವೆಗೆ ನೀರುಬಂತು.

324

ಬಳ್ಳಾರಿ/ಹೊಸಪೇಟೆ ತುಂಗಭದ್ರ ಎಡ ದಂಡೆ ಕಾಲುವೆಗೆ ಕುಡಿಯುವುದಕ್ಕೆ ನೀರು ಹರಿ ಬಿಡಲಾಗಿದ್ದು ನಿವಾಸಿಗರು ನಿಟ್ಟುಸಿರು ಬಿಟ್ಟಂತಾಗಿದೆ. ಹಲವು ದಿನಗಳಿಂದ ಕಾಲುವೆಯಲ್ಲಿ ನೀರು ಇಲ್ಲದೆ ಕುಡಿಯುವ ನೀರಿಗೆ ಅಹಾಕಾರ ಪಟ್ಟಿದ್ದರು ನಿನ್ನೆ ಮಧ್ಯರಾತ್ರಿ ನೀರು ಬಿಟ್ಟಿದ್ದರಿಂದ ಪಂಚಾಯತಿ ಮಾಜಿ ಅಧ್ಯಕ್ಷ ಸಿ. ಖಾಜ ಹುಸೇನ್ ಸಂತಸ ವ್ಯಕ್ತಪಡಿಸಿದ್ದಾರೆ. ಪಂಚಾಯತಿ ಹಾಲಿ ಅಧ್ಯಕ್ಷ ಬಿ.ಆರ್.ಮಳಲಿ ನೇತೃತ್ವದಲ್ಲಿ ಇಂಜಿನೀಯರಗಳು ಎಲ್ಲಾ ಸದಸ್ಯರು, ಸಂಘಸಂಸ್ಥೆಗಳ ಪದಾಧಿಕಾರಿಗಳು, ರಾತ್ರಿ ವೇಳೆಯಲ್ಲಿ ಕಾಲುವೆ ಮೆಲೆ ಗಸ್ತು ತಿರುಗುವಿಕೆಗೆ ಮುಕ್ತಿ ಸಿಕ್ಕಿದಂತಾಗಿದೆ.