ಮುಖ್ಯಮಂತ್ರಿಗಳಿಂದ ದ್ವಿಮತ ದೇವಾಲಯಗಳ ಲೋಕಾರ್ಪಣೆ

430

ಬೆಂಗಳೂರು/ ಕೆ.ಆರ್.ಪುರ:ಬೆಂಗಳೂರಿನಲ್ಲೇ ಪ್ರಥಮ ಎನ್ನಲಾದ ಶ್ರೀ ವೆಂಕಟೇಶ್ವರ ಸ್ವಾಮಿ, ಕಾಶಿವಿಶ್ವೇಶ್ವರ ಸ್ವಾಮಿ, ಆಂಜನೇಯ ದೇವಾಲಯಗಳು ಒಂದೇ ಅವರಣದಲ್ಲಿ ನಿರ್ಮಾಣ, ಇದೇ ಭಾನುವಾರದಂದು ದೇವಾಲಯವನ್ನು ಲೋಕಾರ್ಪಣೆಗೊಳಿಸಲಿರುವ ಸಿಎಂ.ಸಿದ್ದರಾಮಯ್ಯ.

ಶೈವ ಮತ್ತು ವೈಷ್ಣವ ಮತದ ದೇವಾಲಯಗಳು ಒಂದೇ ಆವರಣದಲ್ಲಿ ನಿರ್ಮಿಸಿರುವ ಇತಿಹಾಸ ಬೆಂಗಳೂರಿನಲ್ಲಿ ಎಲ್ಲಿಯು ಇಲ್ಲದೆ, ಇದೇ ಮೊದಲ ಭಾರಿಗೆ ಶ್ರೀ ವೆಂಕಟೇಶ್ವರ ಸ್ವಾಮಿ, ಶಾಶಿವಿಶ್ವೇಶ್ವರ ಸ್ವಾಮಿ ಹಾಗೂ ಆಂಜನೇಯ ದೇವಾಲಯಗಳನ್ನು ಒಂದೇ ಆವರಣದಲ್ಲಿ ನಿರ್ಮಿಸಿದ್ದು ಇದು ಬೆಂಗಳೂರಿನಲ್ಲೆ ಪ್ರಥಮ ಎನ್ನಲಾಗಿದೆ. ಹಾಗಿದ್ದರೆ ಬನ್ನಿ ಈ ದೇವಾಲಯ ಲೋಕಾರ್ಪಣೆ ಯಾಗುತ್ತಿರುವುದು ಎಲ್ಲಿ ಎಂಬುದನ್ನು ಒಮ್ಮೆ ನೋಡಿ ಬರೋಣ.
ಹೀಗೆ ಪ್ರತಿಷ್ಠಾಪನೆ ಗೊಳ್ಳಲು ಸಿದ್ದವಿರುವ ಶ್ರೀ ಕೋಟೆ ವೆಂಕಟೇಶ್ವರ, ಶ್ರೀ ಕಾಶಿ ವಿಶ್ವೇಶ್ವರ ಸ್ವಾಮಿ ಹಾಗೂ ಶ್ರೀ ಕೋಟೆ ಆಂಜನೇಯ ಸ್ವಾಮಿ ದೇವಾಲಯ ಗಳನ್ನು ನಿರ್ಮಿಸಿರುವುದು ಬೆಂಗಳೂರಿನ ಕೆ.ಆರ್.ಪುರದಲ್ಲಿ. ಐದು ದಶಕಗಳ ಇತಿಹಾಸವುಳ್ಳ ಈ ದೇವಾಲಯವು ಶಿಥಿಲಗೊಂಡಿತ್ತು. ನಂತರ ದೇವಾಲಯದ ಟ್ರಸ್ಟ್ ನ ಪದಾಧಿಕಾರಿಗಳು ಮತ್ತು ಗ್ರಾಮಸ್ಥರು ದೇವಾಲಯದ ಜೀರ್ಣೋದ್ಧಾರಕ್ಕೆಂದು ಶ್ರಮಿಸಿ ಇಂದು ಉದ್ಘಾಟನೆಗೆ ಸನ್ನದ್ಧವಾಗಿಸಿದ್ದಾರೆ. ದೇವಾಲಯವು ಹದಿನೆಂಟು ಸಾವಿರ ಚದರ ಅಡಿ ವಿಸ್ತೀರ್ಣವಿದ್ದು 4.5 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದೆ, ಇದೇ ಭಾನುವಾರ ದಿನಾಂಕ 9 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ದೇವಾಲಯವನ್ನು ಲೋಕಾರ್ಪಣೆ
ಗೊಳಿಸಲಿದ್ದಾರೆ.

ಚೋಳರ ಶೈಲಿಯಲ್ಲಿ ಕಲಾಕೃತಿಗಳು ಹಾಗೂ ದೇವಾಲಯದ ಕಟ್ಟಡವನ್ನು ವಿನ್ಯಾಸಗೊಳಿಸಿದ್ದು, ದೇವಾಲಯದ ಜೀರ್ಣೋದ್ದಾರಕ್ಕೆ ಮುಜರಾಯಿ ಇಲಾಖೆ, ಮುಖ್ಯಮಂತ್ರಿಗಳ ವಿಶೇಷ ಅನುದಾನ ಸೇರಿದಂತೆ ದಾನಿಗಳ ಸಹಾಯದಿಂದ ನಿರ್ಮಿಸಲಾಗಿದ್ದು, ವಿಗ್ರಹಳ ಪ್ರತಿಷ್ಟಾಪನೆ, ವಿಮಾನ ಗೋಪುರ, ರಾಜಗೋಪುರ ಕಳಸ ಪ್ರತಿಷ್ಟಾಪನೆ ಹಾಗು ಮಹಾಕುಂಬಾಭಿಷೇಕ ಪೂಜಾ ಮಹೋತ್ಸವ ಕಾರ್ಯಕ್ರಮಗಳು ನಡೆಯಲಿವೆ.
ಒಟ್ಟಾರೆ ಬೆಂಗಳೂರಿನಲ್ಲಿ ಎಲ್ಲಿಯೂ ಇಲ್ಲದಂತಹ ರೀತಿಯಲ್ಲಿ ಶ್ರೀನಿವಾಸ ಹಾಗೂ ಕಾಶಿ ವಿಶ್ವೇಶ್ವರ ದೇವಾಲಯಗಳನ್ನು ಒಂದೇ ಆವರಣದಲ್ಲಿ ನಿರ್ಮಿಸಿದ್ದು, ಇಷ್ಟು ದಿನ ಪ್ರತ್ಯೇಕ ದೇವಾಲಯಗಳಲ್ಲಿ ಈ ಎರಡು ದೇವರುಗಳನ್ನು ದರ್ಶನ ಮಾಡಿ ಕೊಳ್ಳುತ್ತಿದ್ದ ಭಕ್ತರಿಗೆ ಇದೀಗ ಎರಡು ದೇವರುಗಳ ಜೊತೆಗೆ ಆಂಜನೇಯ ಸೇರಿದಂತೆ ಮೂರು ದೇವರುಗಳನ್ನು ಒಂದೇ ಆವರಣದಲ್ಲಿ ಪೂಜಿಸುವ ಸೌಭಾಗ್ಯ ದೊರೆತಂತಾಗಿದೆ.