ಅಕ್ರಮ ಸಂಬಂಧದ ಹಿನ್ನಲೆ ಕೊಲೆ.

242

ಬೆಂಗಳೂರು/ಮಹದೇವಪುರ :-ತನ್ನ ಹೆಂಡತಿ ಜೊತೆ ಅಕ್ರಮ ಸಂಬಂಧ ಇರಿಸಿಕೊಂಡಿದ್ದಕ್ಕೆ ಹ್ಯಾಮರ್ ನಿಂದ ತಲೆಗೆ ಹೊಡದು ನಂತ್ರ ಚಾಕುವಿನಿಂದ ಕುತ್ತಿಗೆ ಕೊಯ್ದು ಕೊಲೆ ಮಾಡಿರುವ ಘಟನೆ ಬೆಂಗಳೂರಿನ ಕಾಡುಗೋಡಿ ಪೊಲೀಸ್ ಠಾಣ ವ್ಯಾಪ್ತಿಯಲ್ಲಿ ನಡೆದಿದೆ. 

ಪಶ್ಚಿಮಬಂಗಾಳ ಮೂಲದ ಕಾಶಿ(25)ಕೊಲೆಯಾದ ವ್ಯಕ್ತಿ. ಕಾಡಗೋಡಿ ಪೊಲೀಸ್ ಠಾಣಾವ್ಯಾಪ್ತಿಯ ಚಿಕ್ಕಬನಹಳ್ಳಿ ಬಳಿಯ ಶೆಡ್ ಗಳಲ್ಲಿ ವಾಸವಾಗಿದ್ದು, ಅರೋಪಿ ಬಚ್ಚು ಅಲಿಯಾಸ್ ಪ್ರೆಮಂಕರ್ ಸಮಂತ್ ಹೆಂಡತಿ ಜತೆ ಅಕ್ರಮ ಸಂಬಂಧ ಹಿನ್ನೆಲೆಯಲ್ಲಿ ಕೊಲೆ ಮಾಡಿದ್ದಾನೆ ಎನ್ನಲಾಗಿದೆ.
ಈ ಸಂಬಂದ ಹಲವು ಬಾರಿ ಕಾಶಿಗೆ ಪ್ರಥಮ್ ವಾರ್ನ್ ಮಾಡಿದ್ದ.ನಿನ್ನೆ ರಾತ್ರಿ ಪ್ರಥಮ್ ಹಾಗೂ ಕಾಶಿ ನಡುವೆ ಜಗಳವಾಗಿತ್ತು. ಈ ವೇಳೆ ಪ್ರಥಮ್ ಕಾಶಿಗೆ ಹ್ಯಾಮರ್ ನಿಂದ ಹೊಡೆದು ಕೊಲೆ ಮಾಡಿದ್ದಾನೆ ಎನ್ನಲಾಗಿದೆ. ಆರೋಪಿ ಬಚ್ಚುನ ಪೋಲೀಸರ ಬಂದಿಸಿದ್ದಾರೆ.
ಈ ಸಂಬಂಧ ಕಾಡುಗೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.