ಆಸ್ಪತ್ರೆಯ ಉದ್ಘಾಟನಾ ಕಾರ್ಯಕ್ರಮ

528

ಬೆಂಗಳೂರು/ಕೃಷ್ಣರಾಜಪುರ: ರಾಜ್ಯ ಸರ್ಕಾರದ ಜನ ಪರ ಯೋಜನೆಗಳ ಶ್ರೀರಕ್ಷೆಯಿಂದ ಉಪಚುನಾವಣೆಯಲ್ಲಿ ಕಾಂಗ್ರೇಸ್ನ ಅಭ್ಯರ್ಥಿಗಳು ಜಯಭೇರಿ ಬಾರಿಸಲಿದ್ದಾರೆಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ಯ ಇಲಾಖೆಯ ಸಚಿವ ಹೆಚ್.ಕೆ.ಪಾಟೀಲ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಹೂರ ವರ್ತುಲ ರಸ್ತೆಯ ಚೆಳೆಕೆರೆ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಲ್ಪಟ್ಟಿರುವ ನಾರ್ಥ್ ಬೆಂಗಳೂರು ಆಸ್ಪತ್ರೆಯ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಬಿಜೆಪಿಯವರು ಚುನಾವಣೆ ಯಲ್ಲಿ ಪರಾಭವವಾಗುವ ಹೆದರಿಕೆ ಯಿಂದ ಕಾಂಗ್ರೇಸ್ ಪಕ್ಷದ ಮುಖಂಡರ ವಿರುದ್ಧ ಏರು ಧ್ವನಿಯಲ್ಲಿ ಮಾತನಾಡುತ್ತಿದ್ದು, ರಾಜಕೀಯ ಸಂಸ್ಕೃತಿಯ ಅರಿವಿಲ್ಲದಂತೆ ನಡೆದುಕೊಳ್ಳುತ್ತಾರೆ, ರಾಜ್ಯ ಸರ್ಕಾರ ಜನತೆಯ ಹಿತದೃಷ್ಟಿಯಿಂದ ಜಾರಿಗೆ ತಂದಿರುವ ಯೋಜನೆಗಳು ಜನರ ಮೆಚ್ಚುಗೆ ಗಳಿಸಿದ್ದು, ಗುಂಡ್ಲುಪೇಟೆ ಮತ್ತು ನಂಜನಗೂಡು ಉಪಚುನಾವಣೆಯಲ್ಲಿ ಕಾಂಗ್ರೇಸ್ ಅಭ್ಯರ್ಥಿಗಳನ್ನು ಜಯಶೀಲರನ್ನಾಗಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಇಂದಿನ ಒತ್ತಡದ ಜೀವನದಲ್ಲಿ ಆರೋಗ್ಯ ಸಮತೋಲನ ಕಾಪಾಡಿಕೊಳ್ಳುವುದು ಕಷ್ಟಸಾಧ್ಯ ವಾಗಿದೆ, ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಜನರು ಆಸ್ಪತ್ರೆಗಳೆಡೆಗೆ ಮುಖ ಮಾಡಿದ್ದಾರೆ, ನೂತನವಾಗಿ ಸ್ಥಾಪಿಸಿಲ್ಪಟ್ಟಿರುವ ನಾರ್ಥ್ ಬೆಂಗಳೂರು ಆಸ್ಪತ್ರೆ ನುರಿತ ವೈದ್ಯರನ್ನು ಹೊಂದಿದ್ದು, ಆಧುನಿಕ ಯಂತ್ರೋಪಕರಣ ಮತ್ತು ಚಿಕಿತ್ಸಾ ವಿಧಾನವನ್ನು ನೀಡಲು ಉದ್ದೇಶಿಸಿದೆ, ಆರೋಗ್ಯದಲ್ಲಿ ಸ್ಥಿರತೆ ಕಾಪಾಡಿಕೊಳ್ಳಲು ಜನರು ಇಂತಹ ಆಸ್ಪತ್ರೆಗಳ ಮೊರೆ ಹೋಗುವುದು ಸೂಕ್ತವೆಂದರು. ಆಸ್ಪತ್ರೆಯಲ್ಲಿ ತುರ್ತು ಚಿಕಿತ್ಸಾ ಘಟಕ, ಮಕ್ಕಳ ವ್ಯದ್ಯಕೀಯ ಘಟಕ, ಗರ್ಭಿಣಿಯರ ವೈದ್ಯಕೀಯ ಘಟಕ, ಸಾಮಾನ್ಯ ರೋಗದ ಘಟಕಗಳು, ಡಯಾಲಿಸಿಸ್ ಸೇರಿದಂತೆ ಇನ್ನಿತರೇ ತಜ್ಞ ವೈದ್ಯಕೀಯ ಚಿಕಿತ್ಸೆಯನ್ನು ಹೊಂದಿದ್ದು, ಸ್ಥಳೀಯ ನಾಗರಿಕರಿಗೆ ಇಂತಹ ವ್ಯದ್ಯಕೀಯ  ಅನುಕೂಲವಾಗಲಿದೆ ಎಂದರು.

ಈ ಸಂದರ್ಭದಲ್ಲಿ ರಾಜ್ಯಸಭಾ ಸದಸ್ಯರಾದ ರಾಮಮೂರ್ತಿ , ಕುಪೇಂದ್ರ ರೆಡ್ಡಿ, ಮಾಜಿ ಶಾಸಕ ನಂದೀಶ್ ರೆಡ್ಡಿ, ಕ್ಷೇತ್ರಾಧ್ಯಕ್ಷ ಚಿದಾನಂದ, ಪಾಲಿಕೆ ಸದಸ್ಯ ಕೋದಂಡ ರೆಡ್ಡಿ, ಆಸ್ಪತ್ರೆಯ ವ್ಯವಸ್ಥಾಪಕ ನಿರ್ಧೇಶಕ ನಾಗರಾಜ್ ಸೇರಿದಂತೆ ಮತ್ತಿತರರಿದ್ದರು.