ಹಂಪಿಗೆ ಹರಿದುಬಂದ ಭಕ್ತವೃಂದ

276

ಬಳ್ಳಾರಿ/ಹೊಸಪೇಟೆಐತಿಹಾಸಿಕ ಹಂಪಿಯ ವಿರುಪಾಕ್ಷೇಶ್ವರಹಂಪಮ್ಮ ಚಂದ್ರಮೌಳೇಶ್ವರ ನೆಡೆಯುವ ಬ್ರಹ್ಮರಥೋತ್ಸಕ್ಕೆ  ಹರಿದುಬಂದ ಭಕ್ತವೃಂದ

ಹಂಪಿಯಲ್ಲಿ ಮೂರು ದಿನಗಳಕಾಲ ನೆಡೆಯುವ
ವಿಶೇಷ ಜಾತ್ರೆ ಸಂಭ್ರಮದಲ್ಲಿ ಪಾಲ್ಗೊಳ್ಳಲು
ಭಕ್ತವೃಂದವು ಆಟೋ, ಕಾರು, ಟ್ರಾಕ್ಟರ್,  ಬೈಕ್‍ಗಳಲ್ಲಿ ಕುಟುಂಬಸದಸ್ಯರೊಂದಿಗೆ ಆಗಮಿಸಿ ಕಡಲೆಕಾಳು, ಗಣೇಶ,ಎರಡಸ್ತಿನ ಮಂಟಪ, ಸಾಸುವೆಕಾಳು ಗಣೇಶ,ಮೂಲವಿರೂಪಾಕ್ಷ, ಸ್ಮಾರಕಬಳಿ ಹಾಗು ಗಿಡದ ನೆರಳಿನಲ್ಲಿವಾಸ್ತವ್ಯ ಹೂಡಿದ್ದಾರೆ

ಹೊಸಪೇಟೆ ಹಾಗು ಸುತ್ತಮುತ್ತಲ ಹಳ್ಳಿಗಳ ರೈತಾಪಿವರ್ಗದವರು ತಮ್ಮ ಎತ್ತುಗಳ ಮೈತೊಳೆದು ರಿಬ್ಬನ್ನುಕಟ್ಟಿ ಕೊರಳಿಗೆ ಗೆಜ್ಜೆಗಳನ್ನು ಕಟ್ಟಿ ಮೈಯಿಗೆ ಬಣ್ಣದ ಮುದ್ರೆ ಹಾಕಿ ಅಲಂಕಾರ ಮಾಡಿಕೊಂಡು ಎತ್ತಿನ ಬಂಡಿಯಲ್ಲಿ ತಂಡೋಪತಂಡವಾಗಿ  ಬರುತ್ತಿದ್ದಾರೆ

ರಾಯಚೂರು, ಸಿಂದನೂರು, ಗಂಗಾವತಿ, ಕಂಪ್ಲಿ ಯಿಂದಬರುವ ಭಕ್ತರು ಕಮಲಾಪುರದಲ್ಲಿ ಇಳಿದು ಹಂಪಿಯಕಡೆಗೆ ಹೆಜ್ಜೆಹಾಕುತ್ತಿದ್ದಾರೆ ಜಾತ್ರೆಗೆ ಸಾವಿರಾರು ಭಕ್ತರುಆಗಮಿಸುತ್ತಿರುವುದರಿಂದ ಹಂಪಿ ಉಪ ವಿಭಾಗದ ಪೊಲೀಸರು ಸೂಕ್ತ ಬಂದೋಬಸ್ತ್  ಕೈಗೊಂಡಿದ್ದಾರೆ