ಪ್ರತಿಭಟನೆ ತಯಾರಿ ಪತ್ರಿಕಾ ಗೊಷ್ಠಿ

282

ಬಳ್ಳಾರಿ ಹೊಸಪೇಟೆ:ರೈತರ ಸಂಪೂರ್ಣ ಸಾಲ ಮನ್ನಾ ಮಾಡುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ, ಅಂತರಾಷ್ಟ್ರೀಯ ಹುತಾತ್ಮ ರೈತ ದಿನಾಚರಣೆ ನಿಮಿತ್ತ ಏ.17 ರಂದು ಬಳ್ಳಾರಿ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾಧ್ಯಕ್ಷ ಜೆ.ಕಾರ್ತಿಕ್ ಹೇಳಿದರು.

ನಗರದ ಅಮರಾವತಿ ಪ್ರವಾಸಿ ಮಂದಿರದಲ್ಲಿ ಬುಧವಾರ ಪತ್ರಿಕಾ ಗೊಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಭೀಕರ ಬರಗಾಲ ಹಿನ್ನಲೆಯಲ್ಲಿ ರೈತರ ಸಂಪೂರ್ಣ ಸಾಲ ಮನ್ನಾ ಮಾಡಬೇಕು. ಹಾಗೂ ಹೊಸ ಸಾಲವನ್ನು ನೀಡಬೇಕು. ಒಂದು ಎಕರೆಗೆ ಕನಿಷ್ಠ 20 ಸಾವಿರ ರೂ. ಪರಿಗಾರ ನೀಡಬೇಕು. ಕಬ್ಬು, ಭತ್ತ, ಬಾಳೆ, ಮೆಣಿಸಿನಕಾಯಿ, ತೊಗರಿ ಸೇರಿದಂತೆ ನಾನಾ ಬೆಳೆಗಳಿಗೆ ನ್ಯಾಯಯುತ ಬೆಂಬಲ ಬೇಲೆ ನೀಡಬೇಕು. ನೀರಾವರಿ ಯೋಜನೆಗಳನ್ನು ಕಾಲಮಿತಿಯಲ್ಲಿ ಪೂರ್ಣಗೋಳಿಸಬೇಕು. ಕಾರ್ಖಾನೆಗಳಿಂದ ರೈತರ ಕಬ್ಬಿನ ಬಾಕಿಯನ್ನು ಸರಕಾರ ಕೂಡಲೇ ಕೊಡಿಸಬೇಕು. ರೈತರಿಗೆ 18 ಗಂಟೆಗಳ ಕಾಲ ವಿದ್ಯುತ್ ನೀಡಬೇಕು. ಜಿಲ್ಲೆಯಲ್ಲಿರುವ ಕೆರೆಗಳಿಗೆ ಹೂಳು ತಗೆಸಬೇಕು. ಅರಣ್ಯ ಉಳುಮೆ ಮಾಡುವ ರೈತರಿಗೆ ಪಟ್ಟ ನೀಡಬೇಕು ಎಂದು ಒತ್ತಾಯಿಸಿ ಜಿಲ್ಲಾ ಕೇಂದ್ರದಲ್ಲಿ ಏ.17ರಂದು ದುರುಗಮ್ಮ ದೇವಸ್ಥಾನ ದಿಂದ ಬೃಹತ್ ಪ್ರತಿಭಟನಾ ಮೆರವಣಿಗೆ ಮೂಲಕ ಜಿಲ್ಲಾ ಕಚೇರಿಗೆ ಆಗಮಿಸಿ ಪ್ರತಿಭಟನೆ ನಡೆಸಲಾಗುತ್ತದೆ ಎಂದರು.

ಪತ್ರಿಕಾ ಗೊಷ್ಠಿಯಲ್ಲಿ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಖಾಜಾ ಹುಸೇನ್ ನಿಯಾಜಿ,ಜಿಲ್ಲಾ ಮಾಜಿ ಅಧ್ಯಕ್ಷ ಜಹಿರುದ್ದೀನ್, ನಗರ ಘಟಕ ಅಧ್ಯಕ್ಷ ಟಿ.ವೆಂಕಟೇಶ್ ಮತ್ತಿತರರಿದ್ದರು.