ಉತ್ಸವ ಮೂರ್ತಿಗೆ ತುಂಗಾ ಸ್ನಾನ

280

ಬಳ್ಳಾರಿ/ಹೊಸಪೇಟೆ: ಐತಿಹಾಸಿಕ  ಹಂಪಿಯ ಬ್ರಹ್ಮ ರಥೋತ್ಸವದಲ್ಲಿ ರಥ ದಲ್ಲಿನ ಉತ್ಸವ ಮೂರ್ತಿಗಳಿಗೆ ತುಂಗಭದ್ರ ನದಿಯಲ್ಲಿ ಚಕ್ರಸ್ನಾನ ಮಾಡಿಸಿದ ಕ್ಷೇತ್ರ ಪುರೋಹಿತರು

ಇಂದು ಬೆಳಗ್ಗೆ ದೇವಸ್ಥಾನದ ಆಡಳಿತ ಮಂಡಳಿ ದಿನಗೂಲಿ ನೌಕರರು ಹಾಗು ಪುರೋಹಿತರು ಸೇರಿ ದೇಸ್ಥಾನದನ ಆವರಣದಲ್ಲಿ ಪರಸ್ಪರ ಬಣ್ಣ ಎರಚಿಕೊಂಡು ನಂತರ ಮಂಗಲವಾದ್ಯಗಳೊಂದಿಗೆ ದೇವಸ್ಥಾನದ ಆನೆ ಲಕ್ಷ್ಮೀ ಜೊತೆ ಪಲ್ಲಕ್ಕಿಯಲ್ಲಿ ವಿರುಪಾಕ್ಷೇಶ್ವರ ಹಂಪಮ್ಮ ಹಾಗು ಚಂದ್ರಮೌಳೇಶ್ವರ ಸ್ವಾಮಿಯ ಉತ್ಸವ ಮೂರ್ತಿಗಳನ್ನಿಟ್ಟುಕೊಂಡು ತುಂಗಭದ್ರ ನದಿಯ ವರೆಗೆ ಮೆರವಣಿಗೆ ಮಾಡಲಾಯಿತು

ನದಿಯಲ್ಲಿ ಉತ್ಸವ ಮೂರ್ತಿಗಳಿಗೆ ಚಕ್ರಸ್ನಾನ ಮಾಡಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು ನಂತರ ಚಕ್ರತೀರ್ಥದಲ್ಲಿರುವ ಕೊದಂಡ ರಾಮಸ್ವಾಮಿ ದೇವಸ್ಥಾನದ ಆವರಣದಲ್ಲಿ ಸ್ವಾಮಿಯ ಕ್ಷೇತ್ರ ಪುರೋಹಿತರಿಂದ ಕಲ್ಯಾಣೋತ್ಸವ ನೆರವೇರಿಸಿ ಉತ್ಸವ ಮೂರ್ತಿಗಳನ್ನು ರಥದಲ್ಲಿ ಕುಳ್ಳಿರಿಸಿ ರಥೋತ್ಸವವನ್ನು ನೆರವೇರಿಸಿಲಾಯಿತು ರಥೋತ್ಸವಕ್ಕೆ ಸುತ್ತಮುತ್ತಲಿನ ನೂರಾರು ಭಕ್ತರು ಪಾಲ್ಗೊಂಡಿದ್ದರು

ಇದೇ ಸಂಧರ್ಭದಲ್ಲಿ ವಿಧ್ಯಾರಣ್ಯ ಮಠದಲ್ಲಿ ರಥೋತ್ಸವದಲ್ಲಿ ಭಾಗವಹಿಸಿದ ಭಕ್ತರಿಗೂ ಹಾಗು ದೇವಸ್ಥಾನದ ಕೆಲಸ ಮಾಡುತ್ತಿರುವ ಸಿಬ್ಬಂದಿಗಳಿಗೆ ವಿಶೇಷ ಭೋಜನ ವ್ಯವಸ್ಥೆ ಮಾಡಲಾಗಿತ್ತು ಈ ಕುರಿತು ಹಂಪಿಯ ಹಿಂದೂ ಧಾರ್ಮಿಕಧತ್ತಿ ಇಲಾಖೆಯ ಕಾರ್ಯ ನಿರ್ವಹಣಾಧಿಕಾರಿ ಎಂ.ಹೆಚ್ ಪ್ರಕಾಶ್ ರಾವ್ ಮಾತನಾಡಿದರು