ಎನಿಟೈಮ್ ನೋ…ಕ್ಯಾಶ್

412

ಬೆಂಗಳೂರು/ಕೆ.ಆರ್. ಪುರ:-ಏಟಿಎಮ್ ನಲ್ಲಿ ಹಣ ಸಿಗದೆ ಜನರ ಪರದಾಟ. ನೋಟು ಅಮಾನ್ಯವಾಗಿ ಅರ್ಧ ವರ್ಷವೇ ಆದರೂ ಇಂದಿಗೂ ನಗರದ ಹಲವು ಏಟಿಎಮ್ಗಳಲ್ಲಿ ನೋ ಕ್ಯಾಶ್ ನಾಮಪಲಕಗಳು ರಾರಾಜಿಸುತ್ತಿದ್ದು, ಸಾರ್ವಜನಿಕರು ಹಣ ಸಿಗದೆ ಪರದಾಡುವಂತಾಗಿದೆ.

ಕೆಆರ್ಪುರ ಭಾಗದ ಬಹುತೇಕ ಏಟಿಎಮ್ಗಳಲ್ಲಿ ಹಣವಿಲ್ಲದೆ, ನೋ ಕ್ಯಾಶ್ ಬೋಡರ್್ಗಳು ಸಾಮಾನ್ಯವಾಗಿದೆ, ಕೇಂದ್ರ ಸಕರ್ಾರ ನೋಟು ಅಮಾನ್ಯ ಮಾಡಿ ಇಂದಿಗೆ ಅರ್ಧ ವರ್ಷವೇ ಕಳೆದಿದ್ದರೂ ನೋಟು ಅಲಭ್ಯತೆಯ ಸಮಸ್ಯೆ ನಿರಂತರವಾಗಿ ಸಾರ್ವಜನಿಕರ ಬೆನ್ನುಬಿದ್ದಿದ್ದು, ಜನತೆ ಹಣವಿಲ್ಲದೆ ಪರದಾಡುವಂತಾಗಿದೆ.

ಹಲವು ಸಣ್ಣ ವ್ಯಾಪಾರಸ್ತರು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುವರು, ಇನ್ನಿತರೆ ಅಗತ್ಯ ವಸ್ತುಗಳ ಖರೀದಿ ಮಾಡಲು ಬರುವ ಜನರೆಲ್ಲಾ ನಗರಗಳಲ್ಲಿ ಏಟಿಎಮ್ಗಳಲ್ಲಿ ಅಳವಡಿಸಿರುವ ನೋ ಕ್ಯಾಶ್ ಬೋರ್ಡ್ ನಾಮಪಕಲಕ ನೋಡಿ ಬೆಸ್ತು ಬೀದ್ದಿದ್ದಾರೆ. ತಮ್ಮ ಅವಶ್ಯಕತೆ ಪೂರೈಸಿಕೊಳ್ಳಲು ಹಣವಿಲ್ಲದೆ, ಪರದಾಡುತ್ತಿರುವ ಜನರು ಕೇಂದ್ರ ಮತ್ತು ಆರ್ಬಿಐಗೆ ಹಿಡಿ ಶಾಪ ಹಾಕುತ್ತಿದ್ದಾರೆ. ಸಮಸ್ಯೆಯ ಹೊಣೆ ಹೋರುವವರು ಯಾರು ಎಂಬ ಪ್ರಶ್ನೆ ಸಾಮಾನ್ಯರದ್ದಾಗಿದೆ.

ಸಮಸ್ಯೆಯ ಕುರತು ಬ್ಯಾಂಕ್ ಮೇನೆಜರ್ಗಳನ್ನು ಪ್ರಶ್ನಿಸಿದರೆ ಆರ್ಬಿಐ ನೋಟು ಪೂರೈಕೆಯಲ್ಲಿ ವ್ಯತ್ಯಯ ಮಾಡಿರುವ ಹಿನ್ನೆಲೆ ಸಮಸ್ಯೆ ಎಲ್ಲೆಡೆಯೂ ಸಾಮಾನ್ಯವಾಗಿದೆ, ಅಲ್ಲದೆ ಜನರೂ ಸಹ ನೋಟುಗಳ ಚಲಾವಣೆ ಮಾಡದಿರುವುದು ಸಮಸ್ಯೆಗೆ ಮತ್ತಷ್ಟು ಪುಷ್ಟಿ ನೀಡಿದೆ, ನೋಟು ವಿನಿಮಯದ ಪ್ರಮಾಣದಲ್ಲಿ ಇಳಿಕೆ ಕಂಡಿರುವುದು ಸಮಸ್ಯೆ ಉಲ್ಭಣಕ್ಕೆ ಕಾರಣವಾಗಿದ್ದು, ಆರ್ಬಿಐ ನೋಟು ಮುದ್ರಣಕ್ಕೆ ಹೆಚ್ಚು ಕಾಲಾವಕಾಶದ ಅಗತ್ಯತೆ ಇದೆ ಎಂಬ ಉತ್ತರ ನೀಡುತ್ತಿದ್ದಾರೆ.
ಬಡವರು, ಮಧ್ಯಮ ವರ್ಗದವರೂ ಸೇರಿದಂತೆ ಶ್ರೀಮಂತರೂ ಸಹ ಸಮಸ್ಯೆಯಿಂದ ಪೇಚಿಗೆ ಸಿಲುಕುವಂತಾಗಿದ್ದು, ಸಣ್ಣ ಮತ್ತು ದೊಡ್ಡ ವ್ಯವಹಾರಗಳು, ಅಗತ್ಯ ವಸ್ತುಗಳ ಖರೀದಿ, ಮಾರುಕಟ್ಟೆಯಲ್ಲಿನ ವ್ಯಾಪಾರ ಸೇರಿದಂತೆ ಎಲ್ಲಾ ರೀತಿಯ ಅಗತ್ಯತೆಗೂ ಕಡಿವಾಣ ಬಿದ್ದಂತಾಗಿದೆ, ಎಂಬುದು ಸಾರ್ವಜನಿಕರ ಅಳಲಾಗಿದೆ.

ಒಟ್ಟಾರೆ ಜನತೆ ಕಷ್ಟ ಪಟ್ಟು ಸಂಪಾದಿಸಿದ ತಮ್ಮ ಹಣವನ್ನು ಬಳಸಿಕೊಳ್ಳಲು ಬೇರೊಬ್ಬರ ಅಪ್ಪಣೆಗೆ ಕಾಯಬೇಕೆ ಎಂಬ ಪ್ರಶ್ನೆ ಕೇಳುತ್ತಿದ್ದು, ಹಲವು ವ್ಯವಹಾರಗಳು ಮತ್ತು ಅಗತ್ಯ ವಸ್ತುಗಳ ಖರೀದಿ ನಿಂತಿರುವುದು ಜೀವನ ಚಕ್ರಕ್ಕೆ ಅಡ್ಡಗಾಲಾಗಿ ಕಾಣ ತೋರುತ್ತಿದೆ, ಶೀಘ್ರವೇ ಆರ್ಬಿಐ ಮತ್ತು ಕೇಂದ್ರ ಸಮಸ್ಯೆಗೆ ಸೂಕ್ತ ಪರಿಹಾರ ಒದಗಿಸಿ ಸಮಸ್ಯೆಗೆ ಇತಿಶ್ರೀ ಹಾಡಬೇಕಿದೆ.