ಸಹಪಂಕ್ತಿ ಬೋಜನ ಆಯೋಜಿಸಿ ಅಂಬೇಡ್ಕರ್ ಜಯಂತಿ ಆಚರಣೆ

645

ಬೆಂಗಳೂರು/ ಕೆ.ಆರ್.ಪುರ:- ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಡಾ. ಬಿ.ಆರ್. ಅಂಬೇಡ್ಕರ್ ರವರ 126 ನೇ ಜಯಂತೋತ್ಸವವನ್ನು ಬೆಂಗಳೂರು ಪೂರ್ವ ತಾಲೂಕಿನ ಕೆ.ಆರ್.ಪುರದಲ್ಲಿ ಸಾರ್ವಜನಿಕರಿಗೆ ಸಹಪಂಕ್ತಿ ಭೋಜನ ಆಯೋಜಿಸುವ ಮೂಲಕ ವಿಬಿನ್ನವಾಗಿ ಆಚರಿಸಲಾಯಿತು.

ನಾಡಿನೆಲ್ಲೆಡೆ ಇಂದು ಬಾಬಾಸಾಹೇಬ್ ಡಾ. ಬಿ.ಆರ್. ಅಂಬೇಡ್ಕರ್ 126 ನೇ ಜಯಂತೋತ್ಸವವನ್ನು ಅದ್ದೂರಿಯಾಗಿ ಆಚರಿಸಲಾಯಿತು. ಇನ್ನು ಕೆ.ಆರ್.ಪುರ ಕ್ಷೇತ್ರದಲ್ಲು ಸಹ ಮಾಜಿ ಶಾಸಕ ನಂದೀಶ್ ರೆಡ್ಡಿ ನೇತೃತ್ವದಲ್ಲಿ ರಾಮಮೂರ್ತಿನಗರದ ವಿಬ್ಗಯಾರ್ ಶಾಲಾ ಆವರಣದಲ್ಲಿ ಅಂಬೇಡ್ಕರ್ ಜಯಂತೋತ್ಸವ ಅಂಗವಾಗಿ ಸಹಪಂಕ್ತಿ ಬೋಜನ ಕಾರ್ಯಕ್ರಮ ಹಮ್ಮಿಕೊಂಡಿದ್ದು ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ ಬೋಜನ ಕೂಟದಲ್ಲಿ ಭಾಗವಹಿಸಿ ಸಾರ್ವಜನಿಕರ ಜೋತೆ ಕುಳಿತು ಬೋಜನ ಮಾಡಿ ಸಂಭ್ರಮಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಡಿ.ವಿ. ಸದಾನಂದಗೌಡ ಬೇರೆಲ್ಲು ಆಚರಣೆ ಮಾಡದ ರೀತಿಯಲ್ಲಿ ಸಹಪಂಕ್ತಿ ಬೋಜನ ಕೂಟ ಏರ್ಪಡಿಸಿರುವುದು ಸಂತಸ ತಂದಿದ್ದು, ತಾನು ಜನರ ಜೋತೆ ಕುಳಿತು ಬೋಜನ ಮಾಡಿದ ಬಗ್ಗೆ ಹರ್ಷ ವ್ಯಕ್ತಪಡಿಸಿದ್ದಾರೆ.

ಸಮಾಜದ ಅಸ್ಪೃಶ್ಯತೆ ವಿರುದ್ದ ಹೋರಾಡಿದ್ದ ವಿಶ್ವಮಾನವನಿಗೆ ಭಾರತರತ್ನ ಪುರಸ್ಕಾರ ನೀಡಲು ಕಾಂಗ್ರೆಸ್ ಸಕರ್ಾರ ಮೀನಾಮೇಷ ಎಣಿಸಿತ್ತು ಅದರೆ  ಇಂದು ವಿಶ್ವವೆ ಅವರ ಹುಟ್ಟುಹಬ್ಬದ ದಿನವನ್ನು  ವಿಶ್ವಜ್ಞಾನ ದಿನವಾಗಿ ಆಚರಿಸುತ್ತಿದ್ದಾರೆ ಇದು ಸ್ವಾಗತಾರ್ಹ.ಡಾ.ಬಿರ್ ಅಂಬೇಡ್ಕರ್ ದೂರದೃಷ್ಟಿಯಿಂದ ರಚಿಸಿದ  ಸಂವಿಧಾನದಿಂದ ದಲಿತ ಮತ್ತು ಬಡವರ ಇಂದು ಮೂಲಭೂತ ಹಕ್ಕುಗಳನ್ನು ಪಡೆಯಲು ಸಾಧ್ಯವಾಗಿದೆ ಸಮಾಜದಲ್ಲಿ ಅಸಮಾಸತೆಯನ್ನು ತೋಲಗಿಸುವ ನಿಟ್ಟಿನಲ್ಲಿ ಸಂಪಕ್ತಿ ಬೋಜನ ಕಾರ್ಯಕ್ರಮನ್ನು ಅಯೋಜಿಸಲಾಗಿದೆ.