ಎಸ್ಎಫ್ಐ ಕಾರ್ಯಕರ್ತರ ಪ್ರತಿಭಟನೆ

321

ಬಳ್ಳಾರಿ :– ಕಲುಬುರಗಿ ವಿವಿಯ ಪಿಎಚ್ಡಿ ವಿದ್ಯಾರ್ಥಿನಿ ಶ್ರೀದೇವಿ ಆತ್ಮಹತ್ಯೆ ಪ್ರಕರಣ- ಸಂಶೋಧನಾ ಮಾರ್ಗದರ್ಶಕ ಮತ್ತು ಆತ್ಮಹತ್ಯೆಗೆ ಪ್ರೇರಣೆ ಮಾಡಿದವರ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹಿಸಿ ಪ್ರತಿಭಟನೆ- ಹೊಸಪೇಟೆಯ ಎಸ್ಎಫ್ಐ ಕಾರ್ಯಕರ್ತರಿಂದ ಪ್ರತಿಭಟನೆ- ತಹಸೀಲ್ದಾರ್ ಕಛೇರಿ‌ ಎದುರು ಪ್ರತಿಭಟನೆ
ಕಲಬುರ್ಗಿ ವಿಶ್ವವಿದ್ಯಾಲಯದಲ್ಲಿ ಪಿ.ಹೆಚ್.ಡಿ ವಿದ್ಯಾರ್ಥಿನಿಯಾದ ಶ್ರೀದೇವಿ ಆತ್ಮಹತ್ಯಗೆ ಪ್ರೇರಣೆ ಮಾಡಿದ ತಿಪ್ಪಣ್ಣ ಕಲ್ಮಣಿ ಹಾಗೂ ಮಾರ್ಗದರ್ಶಕ ಸಿದ್ದಪ್ಪ ರವರ ವಿರುದ್ಧ ಕಾನೂನು ಕ್ರಮ ಜರುಗಿಸಲು ಒತ್ತಾಯಿಸಿ ಇಂದು ಹೊಸಪೇಟೆ ತಾಲ್ಲೂಕು ಸಮಿತಿಯಿಂದ ಹೋರಾಟ ಮಾಡಿ ತಹಶೀಲ್ದಾರರ ಮಾರ್ಗವಾಗಿ ರಾಜ್ಯಪಾಲರಿಗೆ ಮನವಿ ಪತ್ರವನ್ನು ಕಳುಹಿಸಿದೆವು.

ಕಲಬುರ್ಗಿ ವಿಶ್ವವಿದ್ಯಾಲಯದಲ್ಲಿ ಸಂಶೋಧನ ವಿದ್ಯಾರ್ಥಿನಿಯಾದ ಶ್ರೀದೇವಿರವರನ್ನು ತಿಪ್ಪಣ್ಣ ಕಲ್ಮಣಿ ಎಂಬ ವೆಕ್ತಿಯಿಂದ ಹಾಗೂ ಸಂಶೋಧನಾ ಮಾರ್ಗದರ್ಶಕರಾದ ಪ್ರೊಫೆಸರ್ ಸಿದ್ದಪ್ಪರವರ ಹಣದ ವ್ಯಾಮೋಹಕ್ಕೆ ಶ್ರೀದೇವಿಯವರು ಕಿನ್ನತೆಗೆ ಒಳಗಾಗಿ ಆತ್ಮಹತ್ಯೆಮಾಡಿಕೊಳ್ಳಲು ಪ್ರೇರೇಪಣೆ ನೀಡಲಾಗಿದೆ. ಇದನ್ನು SFI ತೀವ್ರವಾಗಿ ಖಂಡಿಸುತ್ತದೆ. ತಿಪ್ಪಣ್ಣ ಎಂಬ ವೆಕ್ತಿಯು ಮದುವೆಯಾಗುವುದಾಗಿ ಮೋಸ ಮಾಡಿದ್ದಾನೆ ಹಾಗೂ ನನ್ನ ಪಿ.ಹೆಚ್.ಡಿ. ಮಾರ್ಗದರ್ಶಕನಾದ ಪ್ರೋ||ಸಿದ್ದಪ್ಪರವರು ಹಣ ನೀಡಬೇಕೆಂದು ಹೆಚ್ಚಾಗಿ ಪೀಡಿಸುತ್ತಿದ್ದರು. ನಾನು ತುಂಬಾ ಮನನೊಂದಿದ್ದೇನೆ ಎಂದು ಪಿ.ಹೆಚ್.ಡಿ ವಿದ್ಯಾರ್ಥಿನಿಯಾದ ಶ್ರೀದೇವಿ ಅರ್ಥಶಾಸ್ತ್ರ ವಿಭಾಗ ಕಲಬುರ್ಗಿ ವಿಶ್ವವಿದ್ಯಾಲಯ ವಿದ್ಯಾರ್ತಿನಿಯು ತನ್ನ ಸಾವಿನ ಸಂದರ್ಭದಲ್ಲಿ ಈತರ ಹೇಳಿಕೆಯನ್ನು ಕೊಟ್ಟಿರುವುದು ಶಿಕ್ಷಣ ವಲಯದಲ್ಲಿ ದೊಡ್ಡ ರೀತಿ ಗೊಂದಲ ಸೃಷ್ಠಿ ಮಾಡಿದಂತಾಗಿದೆ.

ಈ ರೀತಿ ಡೆತ್ ನೋಟ್ ಬರೆದಿಟ್ಟ ಪಿ.ಹೆಚ್.ಡಿ. ವಿದ್ಯಾರ್ಥಿನಿಯ ಶ್ರೀದೇವಿ ರೈಲು ಹಳಿಗೆ ತಲೆಕೊಟ್ಟಿದ್ದಾಳೆ. ತನ್ಮ ಮಾರ್ಗದರ್ಶಕ ಪ್ರೊ.ಸಿದ್ದಪ್ಪ ರವರು 4ಲಕ್ಷ ರುಪಾಯಿ ಹಣಕ್ಕೂ ಹೆಚ್ಚು ಬೇಡಿಕೆ ಇಟ್ಟಿದ್ದರು ಶ್ರೀದೇವಿ 2,90,000 ರೂಪಾಯಿ ಹಣವನ್ನು ನೀಡಿದ್ದರು ಇನ್ನೊಂದು ಲಕ್ಷ ರುಪಾಯಿ ಹಣವನ್ನು ಕೊಟ್ಟರೆ ಮಾತ್ರ ನಿನ್ನ ವೈವಾ ಅಂಕ ನೀಡುವುದಾಗಿ ಹೆದರಿಸಿದ್ದರು. ಇದರಿಂದಾಗಿ ಲಕ್ಷ ಹಣವನ್ನು ಕೊಟ್ಟರೆ ಮಾತ್ರ ನಿನ್ನ ವೈವಾ ಅಂಕ ನೀಡುವುದಾಗಿ ಹೆದರಿಸಿದ್ದರು. ಇದರಿಂದಾಗಿ ಶ್ರೀದೇವಿ ಮಾನಸಿಕವಾಗಿ ನೊಂದಿದ್ದಾರೆ ನಂತರ ತಿಪ್ಪಣ್ಣ ಕಲ್ಮನೆ ಮದುವೆಯನ್ನು ನಿರಾಕರಿಸಿದ್ದಾರೆ. ಭವಿಷ್ಯ ರೂಪಿಸಬೇಕಾದ ಮಾರ್ಗದರ್ಶಕರು, ಜೀವನ ನೀಡಬೇಕಾದ ಪ್ರಿಯಕರ ಇವರಿಬ್ಬರಮೋಸದಿಂದಾಗಿ ಲೈಂಗಿಕ ಆಸೆ, ಹಣದ ದಾಹಕ್ಕೆ ಪ್ರತಿಭಾವಂತ ವಿದ್ಯಾರ್ಥಿನಿ ಬಲಿಯಾಗಿದ್ದಾಳೆ.

ಇಂತಹದೇ ಪ್ರಕರಣಗಳು ಹಲವು ವಿಶ್ವವಿದ್ಯಾಲಯದಲ್ಲಿ ನಿರಂತರವಾಗ ನಡೆಯುತ್ತಿವೆ.ಆಂತರಿಕ ಅಂಕ ವೈವಾ ಹೆಸರಿನಲ್ಲಿ ಹಣ ವಸೂಲಿ ಮಾಡುವುದು, ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸುವುದು ಮತ್ತು ಮನೆ ಆಳುಗಳಾಗಿ ಕಾಣುವುದು ಹೆಚ್ಚಾಗುತ್ತಿದೆ. ಶಿಕ್ಷಣ ನೀಡಿ ಬದುಕು ರೂಪಿಸಬೇಕಾದ ವಿಶ್ವವಿದ್ಯಾಲಯಗಳಲ್ಲಿ ಈ ರೀತಿಯಾದ ಪ್ರಕರಣಗಳು ನಡೆಯುವುದು ವಿಪರ್ಯಾಸವಾಗಿದೆ. ಇವು ಶೈಕ್ಷಣಿಕ ಹತ್ಯೆಗೆ ಕಾರಣವಾಗುತ್ತಿವೆ.
ಈ ರೀತಿಯ ಘಟನೆಗಳು ಹೆಚ್ಚಾಗಿದ್ದು ಸಂಶೋಧನಾ ಶಿಕ್ಷಣದಲ್ಲಿ ಮಹಿಳೆಯರ ಸಂಖ್ಯೆ ಕುಸಿಯುತ್ತಿದೆ. ಈ ಮೇಲಿನ ಎಲ್ಲಾ ಬೆಳವಣಿಗೆಗಳಿಂದ ಪಿ.ಹೆಚ್.ಡಿ. ಮುಗಿಸಿದಂತವರನ್ನು ಅನುಮಾನದ ದೃಷ್ಠಿಕೋನದಿಂದ ನೋಡುವುದನ್ನು ವಿಶ್ವವಿದ್ಯಾಲಯಗಳು ಸೃಷ್ಠಿ ಮಾಡುತ್ತಿವೆ.
ಇಂತಹ ಕಿರುಕುಳವನ್ನು ತಪ್ಪಿಸುವುದಕ್ಕೆ ಸರ್ಕಾರ ಸೂಕ್ತ ಕ್ರಮ ಮತ್ತು ರೋಹಿತ್ ಕಾಯ್ದೆ ಜಾರಿ ಮಾಡಬೇಕು ಹಾಗೂ ಈ ಕೂಡಲೇ ತಪ್ಪಿತಸ್ತರ ವಿರುದ್ಧ ಕಾನೂನು ಕ್ರಮ ಜರುಗಿಸಿ ಕಠಿಣ ಶಿಕ್ಷೆಗೆ ವಿಧಿಸಲು SFI ಒತ್ತಾಯಿಸುತ್ತದೆ.
ರೋಹಿತ್ ಕಾಯ್ದೆ ಜಾರಿ ಮಾಡಬೇಕು, ಪಿ.ಹೆಚ್.ಡಿ ವಿದ್ಯಾರ್ಥಿನಿ ಶ್ರೀದೇವಿಯವರ ಕುಟುಂಬಕ್ಕೆ ಸರ್ಕಾರವೇ ಪರಿಹಾರ ನೀಡಬೇಕು, ವಿಶ್ವವಿದ್ಯಾಲಯಗಳಲ್ಲಿ ಪ್ರತ್ಯೇಕ ವಿದ್ಯಾರ್ಥಿನಿಯರ ರಕ್ಷಣಾ ಘಟಕವನ್ನು ತೆರೆಯಬೇಕು, ಹಾಗೂ ತಿಪ್ಪಣ್ಣ ಕಲ್ಮಣಿ ಮತ್ತು ಪ್ರೊ||ಸಿದ್ದಪ್ಪರವರ ವಿರುದ್ದ ತನಿಖೆಗೆ ಒಳಪಡಿಸಿ ಕಾನೂನು ಕ್ರಮ ಜರುಗಿಸಿ ಕಠಿಣ ಶಿಕ್ಷೆಗೆ ಒಳಪಡಿಸಬೇಕು ಎಂದು SFI ತಾಲೂಕು ಸಮಿತಿಯು ಹೋರಾಟ ಮಾಡಿದೆವು..
ಜಿಲ್ಲಾದ್ಯಕ್ಷರಾದ ದೊಡ್ಡ ಬಸವರಾಜ , ಜಿಲ್ಲಾ ಕಾರ್ಯದರ್ಶಿ ವಸಂತ ಕಲಾಲ್ , ಉಪಾದ್ಯಕ್ಷರಾದ ಭೀಮನಗೌಡ , ರಾಜ್ಯ ಸಮಿತಿ ಸದಸ್ಯರಾದ ಮಂಜುನಾಥ , ಶಿವಣ್ಣ , ಜಿ.ಸಮಿತಿ ಸದಸ್ಯರಾದ ಮಂಜುನಾಥ ಶಿವಕುಮಾರ ಬಾಲಕೃಷ್ಣ ಸಂದ್ಯಾ ಶಾಂತ , ಹಾಗೂ ಸದಸ್ಯರಾದ ಶರಣು ತೇಜಸ್ ದೊಡ್ಡ ಬಸವರಾಜ್ , ಬೋಗಣ್ಣ ಕಣ್ಣೋಲಿ, ಮಾಳಿಂಗರಾಯ , ಹನುಮಂತ , ದೊಡ್ಡ ಬಸವರಾಜ ಸಂತೋಷ್ ಇತರರು ಭಾಗವಹಿಸಿದ್ದರು.