ಕೃಷಿಹೊಂಡ ಹಾಳುಮಾಡಿದ ದುಷ್ಕರ್ಮಿಗಳು

277

ಬಳ್ಳಾರಿ/ ಹೊಸಪೇಟೆ: ತಾಲೂಕಿನ ಕೆರೆತಾಂಡಾದಲ್ಲಿ ನಿರ್ಮಾಣಗೊಂಡಿದ್ದ ನೀರಿನ ಹೊಂಡವನ್ನು ದುಷ್ಕರ್ಮಿಗಳು ಒಡೆದು ಉರುಳಿಸಿದ್ದಾರೆ. ಬೆಳೆಗಾಗಿ
ಸಂಗ್ರಹಿಸಿದ್ದ ಸಾಕಷ್ಟುಪ್ರಮಾಣದ ನೀರು ಹರಿದು ಹೋಗಿದೆ. ಬಿಲಿಯಾ ನಾಯ್ಕ ಎಂಬ ರೈತ ಸಾವಿರಾರುರೂಪಾಯಿ ವ್ಯಯಿಸಿ ಕಳೆದ 9 ವರ್ಷದ ಹಿಂದೆ 30 ಅಡಿ ಉದ್ದ 20 ಅಡಿ ಅಗಲ ಹಾಗುಐಡು ಅಡಿ
ಎತ್ತರದ ಹೊಂಡವನ್ನು ನಿರ್ಮಿಸಿದ್ದರು. ತಮ್ಮ ಐದು ಎಕರೆ ಜಮೀನಿನ ಬೆಳೆಗೆ ಸಹಕಾರಿಯಾಗಲು ಈ ಹೊಂಡ ನಿರ್ಮಿಸಿದ್ದರು. ಇದೀಗ ಕಬ್ಬಿನ ಬೆಳೆ ಬೆಳೆದುನಿಂತಿದೆ. ಇದೇ ಹೊಂಡದ ನೀರು ಕಬ್ಬಿನ ಬೆಳೆಗೆ ಆಸರೆಯಾಗಿತ್ತು. ಇದೀಗ ಹೊಂಡವನ್ನು ದುಷ್ಕರ್ಮಿಗಳು ಒಡೆದಿದ್ದರಿಂದ ನೀರಿನ ಕೊರತೆ ಎದುರಿಸಬೇಕಾಗಿದೆ.ನೀರಿಲ್ಲದೇ ಬೆಳೆದು ನಿಂತ ಕಬ್ಬಿನ ಬೆಳೆ ಒಣಗುವ ಭಯ ರೈತನಲ್ಲಿ ಆವರಿಸಿದೆ. ಈ ಹೊಂಡದ ಪುನರ್ನಿರ್ಮಾಣಕ್ಕೆ ಸಾವಿರಾರು ರೂಪಾಯಿ ಖರ್ಚು ಮಾಡಬೇಕಾಗಿದೆ.ಲಕ್ಷಾಂತರ ರೂಪಾಯಿ ಸಾಲ ಮಾಡಿ ಕೃಷಿ ಮಾಡುತ್ತಿದ್ದ ರೈತ ಬಿಲಿಯಾ ನಾಯಕನಿಗೆ ಇದೀಗ ಗಾಯದ ಮೇಲೆ ಬರೆ ಎಳೆದಂತಾಗಿದೆ. ಸರ್ಕಾರ ಈ ರೈತನ ಬೆಳೆ ಉಳಿಸಲುಕೂಡಲೇ ನೆರವು ನೀಡಬೇಕಾದ ಅಗತ್ಯವಿದೆ. ಜಿಲ್ಲಾಡಳಿತ ಕೂಡಲೇ ಇಂತಹ ರೈತರ ನೆರವಿಗೆ ಧಾವಿಸುವ ಮೂಲಕ ರೈತರ ಜೀವನ ಸುಧಾರಣೆಗೆ ಕ್ರಮಕೈಗೊಳ್ಳಬೇಕಾಗಿದೆ.