ಕುಡಿಯೋ ನೀರಿಗೆ ದೊಣ್ಣೆ ನಾಯಕನ ಅಪ್ಪಣೆ?

163

ಕೋಲಾರ/ಕೆಜಿಎಫ್ :ಮಾರಿಕುಪ್ಪ ಗ್ರಾಮ ಪಂಚಯತ್ ಕೇಂದ್ರದಲ್ಲಿ ಸುಮಾರು ಎಂಟು ತಿಂಗಳಿಂದ ಶುದ್ಧ ಕುಡಿಯುವ ನೀರಿನ ಘಟಕ ರಾಜಕೀಯ ವಿವಾದಗಳಿಂದ ಸ್ಥಗಿತಗೊಂಡು,ಗ್ರಾಮಸ್ಥರು ನೀರಿಲ್ಲದೆ ರೋಚ್ಚಿ ಗೆದ್ದರಿಂದ ಪ್ರತಿಭಟನೆ ಸ್ವರೂಪ ಪಡೆಯಿತು

ಏನಿದು ವಿವಾದ : ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷ ಕೃಷ್ಣಪ್ಪ ನಾನು ಸೂಚಿಸಿದ ಸ್ಥಳದಲ್ಲಿ ಘಟಕವನ್ನು ಸ್ಥಾಪಿಸ ಬೇಕೆಂದು ಒತ್ತಾಯಿಸಿದಾಗ ಗ್ರಾಮಸ್ಥರು ಇದಕ್ಕೆ ಒಪ್ಪದೇ ಎಲ್ಲರಿಗೂ ಅನುಕೂಲವಾಗುವ ಸ್ಥಳದಲ್ಲಿ ಸ್ಟಾಪಿಸಬೇಂದು ಮನವಿ ಮಾಡಿದರು ,ಗ್ರಾಮದ ಜನರ ಮಾತಿಗೆ ಬೆಲೆ ಕೊಡದೆ ಕೃಷ್ಣಪ್ಪ ಪ್ರತಿಷ್ಟೆಗೆ ಬಿದ್ದು ಕುಡಯುವ ನೀರಿನಲ್ಲೂ ರಾಜಕೀಯ ಮಾಡಲಾಗುತಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ರು. ಶುದ್ಧ ನೀರಿನ ಘಟಕ್ಕಕೆ ಪತ್ರಿಕಾ ವರದಿಗಾರ ಶಿವಶಂಕರ್ ತಮಗೆ ಸೇರಿದ ಭೂಮಿಯನ್ನು ಧಾನವಾಗಿ ನೀಡಿದರಿಂದ ಹಾಲಿ ಗ್ರಾಮ ಪಂಚಾಯತ್ ಸದಸ್ಯ ವಿಜಯ ಕುಮಾರ್ ಕಾಮಗಾರಿಯನ್ನು ಮಾಡಿಸಲು ಮುಂದಾದಾಗ , ಈ ವಿವಾದ ಜಿಲ್ಲಾ ಪಂಚಯತ್ ಅಂಗಳಕ್ಕೆ ತಲಪಿತು .

ಕೊನೆಗೂ ತಂಡ ಸ್ಥಳಕೆ ಭೇಟಿ ನೀಡಿ ನೀರಿನ ಘಟಕಕ್ಕೆ ಧಾನ ನೀಡಿದ ಭೂಮಿಯ ದಾಖಲೆಗಳನ್ನು ಪರಶೀಲನೆ ಮಾಡಿ ,ಗ್ರಾಮಸ್ತರ ಹೇಳಿಕೆಯನ್ನು ಪಡೆದಿದ್ದಾರೆ. ಅಂತೂ ಗ್ರಾಮಸ್ಥರು ನಿಟ್ಟುಸಿರು ಬಿಟ್ಟರು ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯೆ ಅಶ್ವಿನಿ ಸಂಪಂಗಿ , ಅಧ್ಯಕ್ಷರಾದ ಜಯರಾಮರೆಡ್ಡಿ , ಪಂಚಾಯತ್ ಕಾವಲು ಸಮಿತಿ ತಂಡ ಹಾಜರಿದ್ದರು