110 ಹಳ್ಳಿಗಳಿಗೆ ಕಾವೇರಿ ಭಾಗ್ಯ

462

ಬೆಂಗಳೂರು/ಕೆ.ಆರ್.ಪುರ:-
ಬೆಂಗಳೂರಿನ 110 ಹಳ್ಳಿಗಳಿಗೆ ಕಾವೇರಿ ನೀರು ಪೂರೈಸುವ ಯೋಜನೆಗೆ ಇಂದು ಸಿಎಂ ಸಿದ್ದರಾಮಯ್ಯ ಶಂಕುಸ್ಥಾಪನೆ ನೆರವೇರಿಸಿದ್ದಾರೆ. ೧೮೮೬ ಕೋಟಿ ವೆಚ್ಚ ದ ಕಾಮಗಾರಿಗೆ ಕೆ.ಆರ್.ಪುರ ಕ್ಷೇತ್ರದ ಹೊರಮಾವು ಅಗರದಲ್ಲಿ ಶಂಕುಸ್ಥಾಪನೆ ನೆರವೇರಿಸಿ, ಪಾಲಿಕೆ ಗೆ ಹೊಸದಾಗಿ ಸೇರ್ಪಡೆಯಾದ 110 ಹಳ್ಳಿಗಳಿಗೆ ಕಾವೇರಿ ನೀರು ಪೂರೈಸಲು ಮುಂದಾಗಿದ್ದು ಕುಡಿಯುಚ ನೀರಿನ ಸಮಸ್ಯೆ ಗೆ ಶಾಶ್ವತ ಪರಿಹಾರಕ್ಕೆ ಸರ್ಕಾರ ಮುಂದಾಗಿದೆ. ಕೆ.ಆರ್.ಪುರ ಶಾಸಕ ಬಿ.ಎ.ಬಸವರಾಜ ಅವರ ನೇತೃತ್ವದಲ್ಲಿ ಕಾರ್ಯಕ್ರಮಕ್ಕೆ ಬರುವ ಕಾರ್ಯಕರ್ತರಿಗೆ 30 ಸಾವಿರ ಅಸನ ವ್ಯವಸ್ಥೆ, ಊಟ ಸೇರಿದಂತೆ ಎಲ್ಲಾ ಸಿದ್ದತೆ ಕೈಗೊಂಡಿದ್ದು,
ಸಚಿವ ಕೆ.ಜೆ.ಜಾಜ್೯ ಸೇರಿದಂತೆ ಹಲವು ನಾಯಕರುಗಳು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು,   ಬಿಬಿಎಂಪಿ 5 ವಲಯಗಳ 110 ಹಳ್ಳಿಗಳ 12 ಲಕ್ಷ ನಿವಾಸಿಗಳು ಇದರ ಪ್ರಯೋಜನ ಪಡೆಯಲಿದ್ದಾರೆ. 775 ದಶಲಕ್ಷ ಲೀಟರ್ ಕುಡಿಯುವ ನೀರಿನ ಯೋಜನೆ ಇದಾಗಿದ್ದು 24 ತಿಂಗಳ ಅವಧಿಯಲ್ಲಿ ಯೋಜನೆ ಪೂರ್ಣಗೊಳ್ಳಲಿದೆ.