ಅಂಗನವಾಡಿ ಕಾರ್ಯಕರ್ತೆಯ ಪ್ರತಿಭಟನೆ

257

ಕೋಲಾರ : ತಾಲ್ಲೂಕು ಪಂಚಾಯಿತಿ ಎದುರು ದಲಿತ ಅಂಗನವಾಡಿ ಕಾರ್ಯಕರ್ತೆ ಮತ್ತು ಮಕ್ಕಳು ಪ್ರತಿಭಟನೆ ನಡೆಸಿದರು. ನರಸಾಪುರ ವ್ಯಾಪ್ತಿಯ ಸೊಣ್ಣೇನಹಳ್ಳಿ ಗ್ರಾಮದ ಶೈಲಾ ಎಂಬ ಅಂಗನವಾಡಿ ಕಾರ್ಯಕರ್ತೆ ದಲಿತ ಸಮುದಾಯದವರು ಎಂಬ ಕಾರಣಕ್ಕಾಗಿ ಸುಮಾರು ಮೂರು ತಿಂಗಳಿಂದ ಅಂಗನವಾಡಿ ಕೇಂದ್ರಕ್ಕೆ ಬೀಗ ಹಾಕಲಾಗಿದೆ.ಈಕೆ ೨೦೦೧ ರಿಂದ ಕಾರ್ಯ ನಿರ್ವಹಿಸುತ್ತಿದ್ದು,ಕಾರ್ಯಕ್ಕೆ ಸೇರುವ ಸಂಧರ್ಭದಲ್ಲಿ ಸಹ ಜಾತಿ ಅಡ್ಡಿ ಆಗಿದ್ದು,ಗ್ರಾಮಸ್ಥರ ಸಹಕಾರ ದಿಂದ ಕಾರ್ಯ ನಿರ್ವಹಿಸುವಂತಾಗಿತ್ತು.ಆದರೆ ಮತ್ತೆ ಈಗ ದಲಿತರು ಎಂಬ ಕಾರಣದಿಂದ ಕಟ್ಟಡದ ನೆಪವೊಡ್ಡಿ ಒಬ್ಬ ಕಾರ್ಯಕರ್ತೆ ಬೀದಿ ಪಾಲಾಗಿದ್ದಾರೆ. ಇದರ ಬಗ್ಗೆ ಅನೇಕ ಭಾರಿ ಸಿ.ಡಿ.ಪಿ.ಓ.ರವರ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ,ಇದರಲ್ಲಿ ಸಿ.ಡಿ.ಪಿ.ಓ.ರವರು ಶಾಮೀಲಾಗಿದ್ದಾರೆ ಎಂದು ಆರೋಪಿಸಿದರು. ಇದರಬಗ್ಗೆ ಪ್ರತಿಕ್ರಿಯಿಸಿದ ಅಧಿಕಾರಿಗಳು ಶುಕ್ರವಾರದೊಳಗೆ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದ ನಂತರ ಪ್ರತಿಭಟನೆ ಕೈಬಿಟ್ಟರು. ಈ ಸಂಧರ್ಭದಲ್ಲಿ ನೊಂದ ಕಾರ್ಯಕರ್ತೆ ಶೈಲಾ,ಮಂಜಮ್ಮ,ನಾಗವೇಣಿ,ವಿದ್ಯಾರ್ಥಿಗಳಾದ ಸ್ನೇಹ ,ಅನುಷಾ,ಗೋವಿಂದ್ ಮತ್ತಿತರು ಹಾಜರಿದ್ದರು.