ಮುಖ್ಯಮಂತ್ರಿಗಳಿಂದ ಅಭಿವೃದ್ಧಿ ಯೋಜನೆಗಳ ಶಂಕುಸ್ಥಾಪನೆ

210
  1. .ಮಂಡ್ಯ/ಮಳವಳ್ಳಿ: ಮಳವಳ್ಳಿ ಗೆ ಸ್ಮರಣೀಯ ದಿನ. ಇತಿಹಾಸ ದಲ್ಲಿ ದೊಡ್ಡ ಮೊತ್ತದ ಯೋಜನೆಗಳ ಶಂಕುಸ್ಥಾಪನೆ ಆಗಿಲ್ಲ. ೧೧೦೦ ಕೋಟಿ ರೂಪಾಯಿಗಳ ಯೋಜನೆಯ ಶಂಕುಸ್ಥಾಪನೆ. ನಮ್ಮ ಸರ್ಕಾರ ನೀರಾವರಿ ಗೆ ಹೆಚ್ಚಿನ ಒತ್ತು ನೀಡಿದ್ದೇವೆ. ಕೆರೆಗಳ ಮರು ಭರ್ತಿ, ನಾಲೆಗಳ ಆಧುನೀಕರಣ ಮಾಡುತ್ತಿದ್ದೇವೆ. ನರೇಂದ್ರ ಸ್ವಾಮಿಯನ್ನು ಮಂತ್ರಿ ಮಾಡಬೇಕಿತ್ತು ಆದರೆ ಸಾಧ್ಯ ಆಗಲಿಲ್ಲ. ಮಂತ್ರಿಗಿಂತ ಹೆಚ್ಚು ಕೆಲಸ ಮಾಡಿದ್ದಾರೆ. ನೀರಾವರಿ ನಮ್ಮ ಮೊದಲ ಆದ್ಯತೆ. ಕೂಡಲ ಸಂಗಮ ಪಾದಯಾತ್ರೆ ಸಂದರ್ಭದಲ್ಲಿ ಹೇಳಿದಂತೆ ನೀರಾವರಿಗೆ ಹೆಚ್ಚಿನ ಹಣ ವೆಚ್ಚ.

ಸುಳ್ಳು ಹೇಳುವವರಿಗೆ, ಮೋಸ ಮಾಡುವವರಿಗೆ, ಭ್ರಷ್ಟರಿಗೆ ಮಣೆ ಹಾಕಬೇಡಿ. ನಮ್ಮದು ನುಡಿದಂತೆ ನಡೆದ ಸರ್ಕಾರ. ಇದ್ನ ಹೆಮ್ಮೆಯಿಂದ ಹೇಳಿಕೊಳ್ಳುತ್ತೇವೆ. ಬಡವರಿಗೆ ಅಕ್ಕಿ ಕೊಡುತ್ತಿದ್ದೇವೆ, ಮಕ್ಕಳಿಗೆ ಹಾಲು, ಮೊಟ್ಟೆ ನೀಡುತ್ತಿದ್ದೇವೆ. ಹಾಲು ಉತ್ಪಾದಕರಿಗೆ ಸರ್ಕಾರದಿಂದ ಪ್ರೋತ್ಸಾಹ. ಏಪ್ರಿಲ್ ಮೊದಲ ವಾರದಿಂದ ಮಕ್ಕಳಿಗೆ ೫ ದಿನ ಹಾಲು ವಿತರಣೆ. ೧ ಲಕ್ಷ ೨೫ ಸಾವಿರ ಕೃಷಿ ಹೊಂಡಾ ನಿರ್ಮಾಣ. ಈ ವರ್ಷ ೮೦೦ ಕೋಟಿ. ರೈತರ ಸಾಲ ಮನ್ನ ಮಾಡಲು ಯಾವುದೇ ಅಭ್ಯಂತರ ಇಲ್ಲ. ಕೇಂದ್ರ ಮನ್ನಮಾಡಲಿ ಅಂತ ಎರಡು ಬಾರಿ ಪಿಎಂ ಗೆ ಮನವಿ ಮಾಡಿದೆ. ಆರು ಬಾರಿ ನಿಯೋಗ ಕರೆದುಕೊಂಡು ಹೋಗಿ ಒತ್ತಾಯ ಮಾಡಿದೆ. ಆದರೆ ಬಿಜೆಪಿಯ ರಾಜ್ಯ ನಾಯಕರು ಮೋದಿ ಜೊತೆ ಮಾತನಾಡಲೇ ಇಲ್ಲ. ರೈತರ ಸಾಲ ಮನ್ನ ಮಾಡಲು ಈಗಲು ನಾನು ಸಿದ್ಧ. ಕೇಂದ್ರ ಮೊದಲು ಮಾಡಿದರೆ ಹೆಚ್ಚಿನ ಅನುಕೂಲ. ಯಡಿಯೂರಪ್ಪ ರಿಂದ ಕೇವಲ ಮಾತಿನ ಬಡಬಡಿಕ. ಬಿಜೆಪಿ ಅಧಿಕಾದಲ್ಲಿ ಇದ್ದಾಗ ಕೇವಲ ೨೪ ಸಾವಿರ ಕೋಟಿಯನ್ನು ದಲಿತರಿಗೆ ವೆಚ್ಚ ಮಾಡಲಾಗಿದೆ. ನಾವು ೮೪ ಸಾವಿರ ಕೋಟಿ ವೆಚ್ಚ ಮಾಡಿದ್ದೇವೆ. ಯಡಿಯೂರಪ್ಪ ಹೇಳೋದೆಲ್ಲ ನೂರಕ್ಕೆ ನೂರು ಸುಳ್ಳು. ಬಿಜೆಪಿಯವರು ಗೊಬೆಲ್ಸ್. ನಂಜನಗೂಡಿನಲ್ಲಿ ಯಡಿಯೂರಪ್ಪ ಆಟ ನಡೆಯಲಿಲ್ಲ. ಯಡಿಯೂರಪ್ಪ ಗೆ ಮೂಡ ನಂಬಿಕೆಯಲ್ಲಿ ನಂಬಿಕೆ ಜಾಸ್ತಿ. ಹಾಗಾಗಿ ಚಾಮರಾಜನಗರಕ್ಕೆ ಹೋಗಲಿಲ್ಲ. ಯಡಿಯೂರಪ್ಪ ಉಪಚುನಾವಣೆ ಮುಂದಿನ ದಿಕ್ಸೂಚಿ ಅಂತ ಹೇಳ್ತಿದ್ರು. ಆದರೆ ನಾನು ಹೇಳ್ತಾ ಇದ್ದೆ ನೀವು ಗೆಲ್ಲಲ್ಲ ಅಂತ.
ರೈತರ ಬಗ್ಗೆ ಆತನಾಡಲು ಬಿಜೆಪಿಯವರಿಗೆ ಯಾವ ನೈತಿಕ ಹಕ್ಕು ಇದೆ. ಬೆಳೆ ಬರೋವರೆಗೂ ಸಾಲ ವಸೂಲತಿಗೆ ಬ್ಯಾಂಕ್ ಅಧಿಕಾರಿಗಳು ಹೋಗೋ ಹಾಗಿಲ್ಲ. ರಾಜ್ಯ ಸರ್ಕಾರದಿಂದ ಎಚ್ಚರಿಕೆ ನೀಡಲಾಗಿದೆ. ನಮ್ಮ ಬಿಟ್ಟು ಹೋದ ಎಸ್.ಎಂ.ಕೆ ಹೇಳಿದ್ರು. ಆದರೆ ಮುಂದಿನ ಚುನಾವಣೆಯಲ್ಲೂ ನಮ್ಮದೆ ಅಧಿಕಾರ. ಕೆರೆ ತುಂಬಿಸಲು ೫ ಸಾವಿರ ಕೋಟಿಯ ಯೋಜನೆ. ಮಳೆ ಬರೋ ನಿರೀಕ್ಷೆ ಇದೆ, ಮಳೆ ಗಾಗಿ ಮುಖ್ಯಮಂತ್ರಿ ಪ್ರಾರ್ಥನೆ ಸಲ್ಲಿಸಿದ ರು
ಶಾಸಕ ನರೇಂದ್ರ ಸ್ವಾಮಿ . ಮಾತನಾಡಿ . ನನಗೆ ಶಕ್ತಿ ನೀಡಿದ ನನ್ನ ಕೃತಜ್ಞತೆ ಗಾಗಿ ಕ್ಷೇತ್ರದ ಅಭಿವೃದ್ಧಿ ಮಾಡುತ್ತೇನೆ. ಎಂದರು ಕಾಯ೯ಕ್ರಮ ದಲ್ಲಿ ಇಂಧನ ಸಚಿವ ಡಿ.ಕೆ ಶಿವಕುಮಾರ್, ನೀರಾವರಿಸಚಿವ ಎಂ.ಬಿ ಪಾಟೀಲ್, ಸಚಿವರಾದ ಡಿ.ಬಿ ಜಯಚಂದ್ರ, ಈಶ್ವರ್ ಖಂಡ್ರೆ, ಮಾಜಿ ಶಾಸಕ‌ಚಂದ್ರಶೇಖರ. ತಾ.ಪಂ ಅಧ್ಯಕ್ಷ ಆರ್. ಎನ್ ವಿಶ್ವಾಸ್. ಪುರಸಭಾಧ್ಯಕ್ಷ ರಿಯಾಜಿನ್, ಜಿ.ಪಂ ಸಿಇಒ ಶರತ್. ಹಾಗೂ ಜಿ.ಫಂ ಸದಸ್ಯರು, ತಾ.ಪಂ ಸದಸ್ಯ,ರು. ವಿವಿದ ಇಲಾಖೆ ಅಧಿಕಾರಿಗಳು ಸೇರಿದಂತೆ ಮತ್ತಿತ್ತರರು ಇದ್ದರು