ವಜ್ರಾಭರಣ ಕಳುವು ಪ್ರಕರಣ

311

ಬಳ್ಳಾರಿ: ಕೆಎಎಸ್ ಅಧಿಕಾರಿ ಭೀಮಾ ನಾಯ್ಕ್ ಗೆ ಸೇರಿದ ವಜ್ರಾಭರಣ ಕಳುವು ಪ್ರಕರಣ, ಬಳ್ಳಾರಿಯ ಡಿಸಿಬಿ ಪೊಲೀಸರಿಂದ ಕಾರ್ಯಾಚರಣೆ, 15.90 ಲಕ್ಷ ಮೌಲ್ಯದ ವಜ್ರ ಹಾಗೂ ಚಿನ್ನಾಭರಣ ಜಪ್ತಿ, ಆರೋಪಿ ಖೀರು ನಾಯ್ಕ್ ಬಂಧನ, ಜನವರಿ 3, 2017 ರಂದು ವಜ್ರಾಭರಣ ಕಳುವು ಆಗಿದ್ದವು, ಸಂಡೂರು ತಾಲೂಕಿನ ಸುಶೀಲಾ ನಗರದ ಜ್ಯೋತಿ ಬಾಯಿ ಮನೆಯಲ್ಲಿ ಕಳ್ಳತನ ಆಗಿತ್ತು, ಈ ವಜ್ರಾಭರಣ ಕೆಎಎಸ್ ಅಧಿಕಾರಿ ಭೀಮಾ ನಾಯ್ಕ್ ತಮ್ಮ ವಜ್ರಾಭರಣವನ್ನ ಜ್ಯೋತಿಬಾಯಿ ಮನೆಯಲ್ಲಿಟ್ಟಿದ್ದರು, ಎಸಿಬಿ ಅಧಿಕಾರಿಗಳಿಂದ ತನಿಖೆ ವೇಳೆ ತನಿಖಾಧಿಕಾರಿಗಳಿಗೆ ವಜ್ರಾಭರಣ ಸಿಗಬಾರದೆಂದು ಜ್ಯೋತಿ ಬಾಯಿ ಮನೆಯಲ್ಲಿಟ್ಟಿದ್ದರು, ಜ್ಯೋತಿ ಬಾಯಿ ಭೀಮಾ ನಾಯ್ಕ್ ಸಂಬಂಧಿ, ಪ್ರಕರಣಕ್ಕೆ ಸಂಬಂಧಿಸಿ ಹಲವರು ನಾಪತ್ತೆ, ನಾಪತ್ತೆಯಾದವರಿಗಾಗಿ ಪೊಲೀಸರಿಂದ ಬಲೆ.