ಶ್ಯಾಮನೂರು.. ಕೋರ್ಟಿಗೆ ಹಾಜರು.

259

ಬಳ್ಳಾರಿ/ಹೊಸಪೇಟೆ. ವ್ಯಾಪ್ತಿ ಮೀರಿ ಕಬ್ಬು ಖರೀದಿಸಿದ ಆರೋಪದ ಮೇಲೆ ಶಾಮನೂರ್ ಶುಗರ್ಸ ಮಾಲಿಕ ಮತ್ತು ಮಾಜಿ ಸಚಿವ ಶಿವಶಂಕ್ರಪ್ಪ ಇಂದು ಹೊಸಪೇಟೆ ನ್ಯಾಯಾಲಯದ ಮುಂದೆ ಹಾಜರಾದ್ರು.ಹೊಸಪೇಟೆ ಮೂರನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಹೊಸಪೇಟೆಯ ಐ.ಎಸ್.ಆರ್.ಸಕ್ಕರೆ ಕಾರ್ಖಾನೆಯ ಮಾಲಿಕ ಸಿದ್ದಾರ್ಥ ಮುರಾರ್ಕ ತಮ್ಮ ವ್ಯಾಪ್ತಿಯ ರೈತರು ಬೆಳೆದ ಕಬ್ಬನ್ನ ಶಾಮನೂರು ಶಿವಶಂಕರಪ್ಪ ಖರೀದಿಸಿರುವುದು ಕಾನೂನು ಬಾಹೀರ ಎಂದು ಐದು ವರ್ಷಗಳ ಹಿಂದೆ ನ್ಯಾಲಯದಲ್ಲಿ ಮುಖದ್ದಮೆ ಹೂಡಿದ್ರು. ಈ ಹಿನ್ನೆಲೆಯಲ್ಲಿ ಶಿವಶಂಕರಪ್ಪ ಖುದ್ದು ಹಾಜರಾಗುವಂತೆ ನ್ಯಾಯಾಲಯ ನೋಟಿಸ್ ನೀಡಿದ ಹಿನ್ನೆಲೆಯಲ್ಲಿ ಹಾಜರಾಗಿದ್ದಾರೆ.ಕಳೆದ ಐದುವರ್ಷಗಳಿಂದ ನ್ಯಾಯಾಲಯದಲ್ಲಿ ಈ ವ್ಯಾಜ್ಯ ನಡೆಯುತಿದ್ದು ನಾಲ್ಕನೇ ಬಾರಿಗೆ ಶಾಮನೂರು ಹಾಜರಾಗಿದ್ದಾರೆ.ಇನ್ನು ಎಂ.ಎಲ್.ಸಿ.ಕೆ.ಸಿ.ಕೊಂಡಯ್ಯ ಅವರು ಕೋರ್ಟ ಆವರಣದಲ್ಲಿ ಶ್ಯಾಮನೂರು ಶಿವಶಂಕರಪ್ಪ ಅವರನ್ನ ಬೇಟಿಯಾಗಿ ಯೋಗಕ್ಷೇಮ ವಿಚಾರಿಸಿದ್ರು.