ಸಚಿವರ ಪ್ರತಿಕೃತಿ ದಹನ

219

ಕೊಪ್ಪಳ/ಯಲಬುರ್ಗಾ: ತಾಲ್ಲೂಕಿನ ಶಾಸಕರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ರಾಯರಡ್ಡಿವರು ನಿನ್ನೆ ಕೊಪ್ಪಳ ಬರ ನಿರ್ವಹಣೆ ಕುರಿತು ಸಭೆಗೆ ಆಗಮಿಸುವ ಮುನ್ನ ಭೇಟಿಯಾದ ಮಾಧ್ಯಮ ಪ್ರತಿನಿಧಿಗಳೊಂಧಿಗೆ ಮಾತನಾಡಿದ ಅವರು ಪ್ರಧಾನಿ ಮಂತ್ರಿ ನರೇಂದ್ರ ಮೋದಿ ವಿವಿಐಪಿಗಳ ಕಾರುಗಳಗೆ ಕೆಂಪು ದೀಪವನ್ನ ಬಳಸುವ ಬಗ್ಗೆ ನಿರ್ಬಂಧ ಹಾಕಿದ್ದು ಅದನ್ನು ತಾವು ಪಾಲಿಸಿದ್ದೀರಿ ಎಂಬ ಪ್ರಶ್ನೆಗೆ ,ಮೋದಿ ಮೊದಲು ಶೋ ಆಫ್ ಬ್ಯುಸಿನೆಸ್ ಬಿಟ್ಟು ತಮ್ಮ ಸೆಕ್ಯುರಿಟಿ ತೆಗೆಯಲಿ ಬೇಕಿದ್ದರೆ ನನಗೆ ಸೆಕ್ಯುರಿಟಿ ಬೇಡ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಾಧ್ಯಮ ಪ್ರತಿನಿಧಿಗಳ ಮೋದಿಗೆ ಉಗ್ರರ ಬೆದರಿಕೆ ಇದೆಯಲ್ಲ ಎಂಬ ಪ್ರಶ್ನೆಗೆ ಅಧಿಕಾರ ಬೇಕಿದ್ದರೆ ಸಾಯಲಿ ಎಂದು ಉಡಾಫೆಯಾಗಿ. ಹೇಳಿದರು. ಇದನ್ನು ಖಂಡಿಸಿ ತಾಲ್ಲೂಕಿನ ಬಿಜೆಪಿ ಪ್ರತಿಭಟನೆ ನಡೆಸಿದರು ಬಸವರಾಜ ರಾಯರಡ್ಡಿವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ರಾಯರಡ್ಡಿವರ ಪ್ರತಿಕೃತಿ ದಹನ ಮಾಡಿದರು.