ಖುಷಿ ಮೂಡಿಸಿದ ಕಪಿಚೇಷ್ಟೆ..

399

ಬಳ್ಳಾರಿ/ಹೊಸಪೇಟೆ:ವಿಶ್ವ ವಿಖ್ಯಾತ ಹಂಪಿಯ ರಾಜಗೋಪುರದ ಬಳಿ ನಾಯಿ ಮರಿಯೊಂದಿಗೆ ಕೋತಿಯೊಂದು ಕಪಿಚೇಷ್ಟೆ ನಡೆಸುವ ಮೂಲಕ ಪ್ರವಾಸಿಗರಲ್ಲಿ ಖುಷಿ ಮೂಡಿಸಿತು. ನಾಗರಾಜನೆಂಬ ಯುವಕ ಬಿಷ್ಟಪ್ಪಯ್ಯ ಗೋಪುರದ ಬಳಿ ತೆರಳುವಾಗ ಈ ಕಪಿಚೇಷ್ಟೆಯನ್ನು ತನ್ನ ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾನೆ.

ಅತ್ತ ಬೆಳಗಾವಿ ಯ ಝಂಜರವಾಡ ಗ್ರಾಮದಲ್ಲಿ ನ ಕೊಳವೆ ಬಾವಿಗೆ ಕಾವೇರಿ ಎಂಬ ಮಗು ಬಿದ್ದು ನಾಡಿಗೆ ನಾಡೇ ದುಃಖದಲ್ಲಿ ಮುಳುಗಿದೆ. ಕೊಳವೆ ಬಾವಿಯಿಂದ ಮಗುವನ್ನು ಮೇಲೆತ್ತುವ ಕಾರ್ಯಾಚರಣೆ ನೋಡಿದ ಎಂಥವರಿಗೂ ಕಾವೇರಿಯ ದಾರುಣ ಸ್ಥಿತಿ ಕಂಡು ಮಮ್ಮಲ ಮರುಗುತ್ತಿದ್ದಾರೆ. ಕಾವೇರಿ ಸುರಕ್ಷಿತವಾಗಿ ಬದುಕಿ ಬರಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತಿದ್ದಾರೆ.