ವಾರ್ಷಿಕೋತ್ಸವ ಸಮಾರಂಭ

374

ಬೆಂಗಳೂರು/ಕೃಷ್ಣರಾಜಪುರ: ಪ್ರತಿಯೊಬ್ಬರು ತಮ್ಮಲ್ಲಿ ಅಡಗಿರುವ ಪ್ರತಿಭೆ ಪ್ರದರ್ಶಿಸುವ ಮೂಲಕ ತಮ್ಮ ಆತ್ಮಸ್ಥೈರ್ಯ ಹಿಗ್ಗಿಸಿಕೊಂಡು ಉನ್ನತ ಸ್ಥಾನಕ್ಕೆ ತಲುಪಿದರೆ ಜೀವನ ಸಾರ್ಥಕಮಯವಾಗಲಿದೆ ಎಂದು ಸಿಲಿಕಾನ್ ಸಿಟಿ ಕಾಲೇಜಿನ ಅಧ್ಯಕ್ಷ ಡಾ.ಹೆಚ್.ಎಂ.ಚಂದ್ರಶೇಖರ್ ತಿಳಿಸಿದರು.

ಇಲ್ಲಿನ ಸಿಲಿಕಾನ್ ಸಿಟಿ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗಿದ್ದ 10ನೇ ವಾರ್ಷಿಕೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ಪರಂಪರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು ಅವರು. ಪ್ರತಿಯೊಂದು ಜೀವಿಗೂ ತನ್ನದೇ ಆದ ಪ್ರತಿಭೆಯಿದ್ದು, ಅಗಾದವಾದ ಬುದ್ಧಿವಂತಿಕೆ ಮಾನವನನ್ನು ಉನ್ನತ ಮಟ್ಟದಲ್ಲಿ ಕೂರಿಸಿದೆ, ತಮ್ಮಲ್ಲಿ ಅಡಗಿರುವ ಪ್ರತಿಭೆಯನ್ನು ವೇದಿಕೆ ದೊರತಾಗ ಜಗತ್ತಿಗೆ ಪರಿಚಯಿಸಿಕೊಂಡು ಆತ್ಮಸ್ಥೈರ್ಯ ಹೆಚ್ಚಿಸಿಕೊಳ್ಳಬೇಕು ಇದು ಬೇರೆಡೆಯೂ ಸಹ ತಮ್ಮ ತನವನ್ನು ವಿಶ್ವಾಸದಿಂದ ಪರಿಚಯಿಸಿಕೊಳ್ಳಲು ಪ್ರೇರಣೆ ನೀಡುತ್ತದೆ, ಈ ರೀತಿಯ ಬೆಳವಣ ಗೆ ಮನುಷ್ಯನನ್ನು ಉನ್ನತ ಸ್ಥಾನಕ್ಕೆ ಕೊಂಡೊಯ್ಯತ್ತದೆ ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.

ರಾಜ್ಯದ ವಿದ್ಯಾರ್ಥಿಗಳು ಐಎಎಸ್ ಮತ್ತು ಐಪಿಎಸ್‍ನಂತಹ ರಾಷ್ಟ್ರೀಯ ಸೇವಾ ಉದ್ಯೋಗಗಳಿಗೆ ಸ್ಪರ್ಧಿಸಲು ಮುಂದೆ ಬಾರದಿರುವುದು ವಿಷಾದಕರ ಸಂಗತಿ ವಿದ್ಯಾರ್ಥಿಗಳು ರಾಷ್ಟ್ರೀಯ ಮಟ್ಟದ ಸೇವಾ ಉದ್ಯೋಗಗಳಿಗೆ ಸ್ಪರ್ಧಿಸುವ ಮೂಲಕ ರಾಷ್ಟ್ರದ ಜನತೆಗೆ ತಾವು ಪಡೆದ ಜ್ಞಾನ ಮತ್ತು ತಮ್ಮ ಸಾಮಥ್ರ್ಯ ಬಳಸಿ ರಾಷ್ಟ್ರದ ಅಭಿವೃದ್ಧಿಗೆ ಶ್ರಮಿಸಬೇಕೆಂದು ತಿಳಿಸಿದರು.

ಸಿಲಿಕಾನ್ ಸಿಟಿ ಕಾಲೇಜು ತನ್ನ 10 ವಸಂತಗಳನ್ನು ಪೂರೈಸಿದ್ದು, ಪ್ರಾಧ್ಯಾಪಕರು, ನಿರ್ದೇಶಕರು ಸೇರಿದಂತೆ ಎಲ್ಲಾ ಸಿಬ್ಬಂದಿಗಳ ಸಹಕಾರ ಮತ್ತು ಶ್ರಮದಿಂದ ವಿದ್ಯಾರ್ಥಿಗಳಿಗೆ ಉತ್ತಮ ಸೌಲಭ್ಯದೊಂದಿಗೆ ಶಿಕ್ಷಣ ನೀಡುವಲ್ಲಿ ಸಹಕಾರಿಯಾಗಿದೆ ಎಂದು ಸಿಬ್ಬಂದಿಗಳಿಗೆ ಕೃತಜ್ಞತೆ ತಿಳಿಸಿದರು. ಇದೇ ಸಂದರ್ಭದಲ್ಲಿ ಕಾಲೇಜಿನ ವಾರ್ಷಿಕ ಸಂಚಿಕೆ ಬಿಡುಗಡೆ ಮಾಡಲಾಯಿತು.ವಿದ್ಯಾರ್ಥಿಗಳು ಸಾಂಸ್ಕøತಿಕ ನೃತ್ಯಗಳು, ಸಂಗೀತ ಕಾರ್ಯಕ್ರಮ, ಆಧುನಿಕ ಶೈಲಿಯ ನೃತ್ಯ ಪ್ರದರ್ಶಿಸಿದ್ದು, ನೆರೆದಿದ್ದ ಜನರ ಮನರಂಜಿಸಿತು.

ಈ ಸಂದರ್ಭದಲ್ಲಿ ಕಂದಾಯ ಮತ್ತು ತೆರಿಗೆ ಇಲಾಖೆ ಆಯುಕ್ತ ಶಿವಪ್ರಕಾಶ್, ಉಪ ಆಯುಕ್ತ ಗುರುಪ್ರಸಾದ್, ಚಲನಚಿತ್ರ ನಿರ್ದೇಶಕ ಶ್ರೀ, ಚಿತ್ರ ನಟ ಆರ್ಯ, ಕಾಲೇಜಿನ ಸಂಸ್ಥಾಪಕರಾದ ಮುನಿತಾಯಪ್ಪ, ಅವರ ಪತ್ನಿ ಜಯಮ್ಮ, ನಿರ್ದೇಶಕ ಹೆಚ್.ಎಂ.ಮುಕುಂದ, ಪ್ರೊ.ಜಿ.ಎಸ್.ಮೂರ್ತಿ, ಶಿಕ್ಷಕ ವೃಂದ ಸೇರಿದಂತೆ ವಿದ್ಯಾರ್ಥಿಗಳು, ಪೋಷಕರು, ಸಿಬ್ಬಂದಿ ಉಪಸ್ಥಿತರಿದ್ದರು.