ಶಿಕ್ಷಕರ ಪ್ರತಿಭಟನೆ (ಕೆಆರ್ ಪುರ)

259

ಬೆಂಗಳೂರು/ಕೆಆರ್.ಪುರ: 2006ರಲ್ಲಿ ಜಾರಿಗೆ ತಂದಿರುವ ಹೊಸ ಪಿಂಚಣಿ ಯೋಜನೆಯನ್ನು ರದ್ದುಗೊಳಿಸಿ ಹಳೇ ಪಿಂಚಣಿ ಯೋಜನೆಯನ್ನೆ ಮುಂದುವರಿಸುವಂತೆ  ಹಾಗೂ 7ನೇ ವೇತನ ಅಯೋಗ ಕೂಡಲೇ ಜಾರಿಗೆ ತರುವಂತೆ ಒತ್ತಾಯಿಸಿ  ಬೆಂಗಳೂರು ಪೂರ್ವ ತಾಲ್ಲೂಕು ಶಿಕ್ಷಕರ ಸಂಘದ ವತಿಯಿಂದ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಮುಂದೆ  ಪ್ರತಿಭಟಿಸಿದರು.

ಪ್ರತಿಭಟನೆಯನ್ನುದ್ದೇಶಿ ಮಾತನಾಡಿದ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಪ್ರಸನ್ನಕುಮಾರ್ 2006 ಏ. 1ರಂದು ಸರ್ಕಾರಿ ನೌಕರರಿಗೆ  ರಾಷ್ಟ್ರವ್ಯಾಪಿ ಜಾರಿಗೆ ತಂದಿರುವ ಹೊಸ ಪಿಂಚಣಿ ಯೋಜನೆ ನಿವೃತ್ತಿ ಸಮಯದಲ್ಲಿ   ಭದ್ರತೆ ಮತ್ತು ಸುರಕ್ಷತೆ ದೃಷ್ಟಿಯಿಂದ ಈ ಹೊಸ ಯೋಜನೆ ಜಾರಿಗೆ ತಂದಿಲ್ಲ, ಇದೊಂದು ಅಭದ್ರತೆಯ ಯೊಜನೆಯಾಗಿದ್ದು ನಿವೃತ್ತಿ ನಂತರ ನಮ್ಮ ಜೀವನವನ್ನು ಅಂಧಕಾರದಲ್ಲಿ ಮುಳಗಿಸಿಸುವ ಯೋಜನೆ ಇದಾಗಿದೆ ಎಂದು ಕಿಡಿಕಾರಿದರು.

ಈ ಯೋಜನೆ ಬಗ್ಗೆ ಸರ್ಕಾರ ಸರಿಯಾದ ಮಾಹಿತಿ ಕೂಡ ಒದಗಿಸಿಲ್ಲ,  ಅಭದ್ರತೆಯಿಂದ ಕೂಡಿರುವ ಹೊಸ ಪಿಂಚಣಿ ವ್ಯವಸ್ಥೆಯಿಂದ    ವೃದ್ಧಾಪ್ಯ ಸಮಯದಲ್ಲಿ ಗೌರಯುತವಾದ ಜ ಜೀವನ ಸಾಗಿಸಲು ಕಷ್ಟಕರವಾಗುತ್ತದೆ, ನಿವೃತ್ತಿ ಸಮಯದಲ್ಲಿ ಸುಂದರ ಬದುಕು ನಡೆಸಲು  ಕೂಡಲೇ ಹೊಸ ಪಿಂಚಣಿ ಯೋಜನೆಯನ್ನು ಹಿಂಪಡೆದು  2006 ರ ಹಿಂದೆಯಿದ್ದ  ಹಳೇ ಪಿಂಚಣಿ ಯೋಜನೆಯನ್ನು ಮರು ಜಾರಿಗೆ ತರಬೇಕೆಂದು ಸರ್ಕಾರಕ್ಕೆ ಮನವಿ ಮಾಡಿದರು.

ರಾಜ್ಯ ಸರ್ಕಾರ ಕಳೆದ ಬಜೆಟ್ನಲ್ಲಿ ಸರ್ಕಾರಿ ನೌಕರರಿಗೆ  ಘೋಷಿಸಿರುವ 7ನೇ ವೇತನ ಅಯೋಗ ಅದಷ್ಟೂ ಬೇಗ ಅನುಷ್ಠಾನಕ್ಕೆ ತರುವ ಈ ನಿಟ್ಟಿನಲ್ಲಿ ಕೂಡಲೇ ಕ್ರಮಕೈಗೊಳ್ಳಬೇಕು ಹಾಗೂ ಪ್ರಾಥಮಿಕ ಶಿಕ್ಷಣಕ್ಕೆ ವಿಶೇಷ ಮಂಡಳಿ ರಚನೆ ಮಾಡುವಂತೆ  ಸಕರ್ಾರಕ್ಕೆ ಒತ್ತಾಯಿಸಿದರು.

ಈ ಸಂಧರ್ಭದಲ್ಲಿ ಗೌರವಾಧ್ಯಕ್ಷ ನಾರಾಯಣಸ್ವಾಮಿ,ಉ,ಅಧ್ಯಕ್ಷರಾದ ಕೃಷ್ಣರೆಡ್ಡಿ,ಜಲಜಾಕ್ಷಿ, ಪ್ರ.ಕಾರ್ಯಧಶರ್ಿ ಮದುಕುಮಾರ್,ಜಿಲ್ಲಾ ಸಹ ಕಾರ್ಯಧಶರ್ಿ ನಾಗರತ್ನಮ್ಮ, ಮಂಜುನಾಥ ಸೇರಿದಂತೆ ಶಿಕ್ಷಕರು ಪ್ರತಿಭಟನೆಯಲ್ಲಿ ಭಾಗವಹಿಸಿದರು.