ಜನ್ಮದಿನಾಚರಣೆ, ಹಣ್ಣು ಹಂಪಲು ವಿತರಣೆ

536

ಬೆಂಗಳೂರು/ಕೃಷ್ಣರಾಜಪುರ: ಗಣ್ಯ ವ್ಯಕ್ತಿಗಳು ತಮ್ಮ ಜನ್ಮದಿನವನ್ನು ಆಡಂಬರದ ಸಂಭ್ರಮವನ್ನಾಗಿ ಆಚರಿಸದೆ, ಅಶಕ್ತರಿಗೆ ಸಹಾಯ ಹಸ್ತ ಚಾಚುವ ಮೂಲಕ ಉತ್ತಮ ಸಂದೇಶದೊಂದಿಗೆ ಹುಟ್ಟುಹಬ್ಬ ಆಚಸಿಕೊಳ್ಳಲಿ ಎಂದು ಜಯ ಕರ್ನಾಟಕ ಸಂಘಟನೆಯ ಬೆಂಗಳೂರು ಜಿಲ್ಲಾ ಉಪಾಧ್ಯಕ್ಷ ಶಂಕರ ಗೌಡ ಅಭಿಪ್ರಾಯಪಟ್ಟರು. ಇಲ್ಲಿನ ಕೆಆರ್ ಪುರ ಸಾರ್ವಜನಿಕ ಆಸ್ಪತ್ರೆಯಲ್ಲಿ ಜಯ ಕರ್ನಾಟಕ ಸಂಘಟನೆಯ ಸಂಸ್ಥಾಪಕ ಮುತ್ತಪ್ಪ ರೈರ ಜನ್ಮ ದಿನದ ಅಂಗವಾಗಿ ಕಾರ್ಯಕರ್ತರು ರೋಗಿಗಳಿಗೆ ಹಣ್ಣ ಹಂಪಲು ಮತ್ತು ಹೊದಿಕೆಗಳನ್ನು ವಿತರಿಸಿದ ಕಾರ್ಯಕ್ರಮದಲ್ಲಿ ಭಾಗವಹಸಿ ಮಾತನಾಡಿದ ಅವರು, ಸಮಾಜದಲ್ಲಿ ಜನ, ಹಣ ಮತ್ತು ಅಧಿಕಾರ ಬೆಂಬಲದಿಂದ ಮೆರೆಯುತ್ತಿರುವ ಗಣ್ಯರೆಂದೆನಿಸಿರುವ ಕೆಲ ವ್ಯಕ್ತಿಗಳು ತಮ್ಮ ಜನ್ಮದಿನವನ್ನು ಆಡಂಬರದ ಜಾತ್ರೆಯನ್ನಾಗಿಸಿ ಹಣ ಮತ್ತು ಸಮಯ ವ್ಯರ್ಥ ಮಾಡುತ್ತಿದ್ದಾರೆ, ಸಮಾಜದಲ್ಲಿ ಹಲವು ಮಂದಿ ಅಶಕ್ತರು, ಕಾಯಿಲೆ, ಬಡತನ, ನಿರುದ್ಯೋಗ ಸೇರಿದಂತೆ ಇನ್ನಿತರೇ ಪಿಡುಗುಗಳಿಂದ ಬಳಲುತ್ತಿದ್ದು, ಆಥರ್ಿಕವಾಗಿ ಪ್ರಬಲರಾಗಿರುವ ವ್ಯಕ್ತಿಗಳು ಇಂತಹ ಅಶಕ್ತರಿಗೆ ಸಹಾಯ ಹಸ್ತ ಚಾಚುವ ಮೂಲಕ ತಮ್ಮ ಘನತೆಯನ್ನು ಮತ್ತಷ್ಟು ಹೆಚ್ಚಿಸಿಕೊಳ್ಳುವರೆಂದು ತಿಳಿಸಿದರು. ಜಯ ಕನರ್ಾಟಕ ಸಂಘಟನೆಯ ಸಂಸ್ಥಾಪಕ ಮುತ್ತಪ್ಪ ರೈರ ಜನ್ಮದಿನವಾದ ಇಂದು ಸಂಘಟನೆಯ ಕಾರ್ಯಕರ್ತರು ತಾಲ್ಲೂಕು ಕೇಂದ್ರಗಳ ಮಟ್ಟದಲ್ಲಿ ವಿವಿಧ ಸಮಾಜ ಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಹುಟ್ಟು ಹಬ್ಬವನ್ನು ಮಾದರಿಯಾಗಿ ಮಾಡುತ್ತಿದ್ದಾರೆ, ಬೆಂಗಳೂರು ಪೂರ್ವ ತಾಲ್ಲೂಕಿನ ಕಿತ್ತಗನೂರಿನಲ್ಲಿ ಸಾಯಿ ವೃದ್ಧಾಶ್ರಮದಲ್ಲಿ ಅನ್ನದಾನ ಸೇರಿದಂತೆ ಸಾರ್ವಜನಿಕ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಹಣ್ಣು ಹಂಪಲು, ಹೊದಿಕೆ ವಿತರಿಸಲಾಯಿತು. ಸಂಘಟನೆ ಈ ಹಿಂದೆಯೂ ಸಹ 100 ದಿನಗಳ ಸ್ವಚ್ಚತಾ ಅಭಿಯಾನ ಕೈಗೊಳ್ಲುವ ಮೂಲಕ ನಗರವನ್ನು ಕಸ ಮುಕ್ತವನ್ನಾಗಿಸುವ ಧ್ಯೇಯದೊಂದಿಗೆ ಹೆಜ್ಜೆ ಇಟ್ಟಿತ್ತು, ಈ ರೀತಿಯ ಸಮಾಜ ಮುಖಿ ಕಾರ್ಯಗಳು ಮತ್ತಷ್ಟು ಬರಲಿವೆ ಎಂದರು. ಈ ಸಂದರ್ಭದಲ್ಲಿ ಮಹದೇವಪುರ ಕ್ಷೇತ್ರಧ್ಯಕ್ಷ ವೆಂಕಟೇಶ್ ಮೂತರ್ಿ, ಬೆಂ.ಜಿ.ಕಾರ್ಯಕಾರಿ ಸಮಿತಿ ಸದಸ್ಯ ಕನ್ನಡ ರಾಜು, ರಾಜ್ಯ ಪ್ರ.ಸಂ.ವಿನೋದ್. ಆರ್ ಶೆಟ್ಟಿ, ಬೆಂ.ಜಿ.ಉಪಾಧ್ಯಕ್ಷ ಎನ್.ಶ್ರೀನಿವಾಸ್, ಅನುಷ್, ಚೀಮಸಂದ್ರ ನಿಖಿಲ್ ಸೇರಿದಂತೆ ಮತ್ತಿತರರಿದ್ದರು.