ಪ್ರಸಿದ್ಧ ಸ್ಮಾರಕ ಒಂದು ಪ್ರವಾಸಿ ತಾಣ.

371

ಬಳ್ಳಾರಿ /ಹೊಸಪೇಟೆ:ವಿಶ್ವವಿಖ್ಯಾತ ಹಂಪಿ ಎಂದೊಡನೆ ತಟ್ಟನೇ ನೆನಪಾಗುವುದು, ಇಲ್ಲಿನ ಪ್ರಸಿದ್ಧ ಸ್ಮಾರಕಗಳು, ಇವುಗಳಿಂದಲೇ ಹಂಪಿ ಜಗತ್ತು ಪ್ರಸಿದ್ಧಿ ಎನ್ನಿಸಿರುವುದು. ಐತಿಹಾಸಿಕ ಹಿನ್ನಲ್ಲೆಯ ಹಂಪಿಯ ಪ್ರಸಿದ್ಧ ಸ್ಮಾರಕ ಒಂದು ಪ್ರವಾಸಿ ತಾಣವಾಗಿ ಪರಿವರ್ತನೆಯಾಗಿದೆ ಎಂದರೆ ನಿಮಗೆ ನಂಬಲು ಅಸಾಧ್ಯ ಎಂದ ಎನ್ದುನಬಹುದು. .ಆದರೂ ನೀವು ನಂಬಲೇಬೇಕು.ಏಕಂದರೆ, ಈ ಸ್ಮಾರಕ ಇಂದಿಗೂ ಐಬಿಯಾಗಿ ಉಳಿದಿದೆ.

ಹೌದು! ತಾಲ್ಲೂಕಿನ ಕಮಲಾಪುರದಲ್ಲಿರುವ ಪ್ರವಾಸಿ ಮಂದಿರವೇ, ವಿಜಯನಗರ ಕಾಲದ ವೈಷ್ಣವ ಸುಂದರ ದೇವಾಲಯ. ಈ ದೇವಾಲಯದ ಗರ್ಭಗೃಹಗಳು ಇಂದು ಹತ್ತಾರು ಜನರು ಮಲಗಿ ವಿಶ್ರಾಂತಿ ಪಡೆಯುವ ಬೆಡ್‌ರೂಂಗಳು. ಇನ್ನೂ ಐಬಿಗಳಲ್ಲಿ ಹೆಚ್ಚಾಗಿ ಎನ್ನಲ್ಲ ಚಟುವಟಿಕೆಗಳು ನಡೆಯಬಹುದು ಎನ್ನುವುದು ನಿಮ್ಮ ಕಲ್ಪನೆಗೆ ಬಿಟ್ಟದ್ದು.

ಬ್ರಿಟೀಷರು, ಈ ಹಿಂದೆ ಈ ದೇವಾಲಯವನ್ನು ಪ್ರವಾಸಿ ಮಂದಿರವನ್ನಾಗಿ ಪರಿವರ್ತನೆ ಮಾಡಿದ್ದು, ಇಲ್ಲಿನ ಮೂರು ಗರ್ಭಗೃಹಗಳು, ವಿಶ್ರಾಂತಿ ಕೊಠಡಿಗನ್ನಾಗಿ ರೂಪಿಸಲಾಗಿದ್ದು, ಬೆಡ್‌ರೂಂಗೆ ಅಂಟಿಕೊಂಡು ಅಕ್ಕ-ಪಕ್ಕದಲ್ಲಿ ಶೌಚಗೃಹಗಳನ್ನು ಮಾಡಲಾಗಿದೆ. ಗರ್ಭಗೃಹದ ಮುಂದಿನ ಸಭಾ ಮಂಟಪವನ್ನು ಹಾಲ್ ಮಾಡಿಕೊಂಡಿದ್ದು, ಇದರಲ್ಲಿ ಕುಳಿತುಕೊಳ್ಳಲು ಆಸನದ ವ್ಯವಸ್ಥೆ ಮಾಡಲಾಗಿದೆ.

ಈ ಸುಂದರ ವಿಶಾಲ ದೇಗುಲವನ್ನು ವೈಷ್ಣವ ತ್ರಿಕೂಟ ದೇವಾಲಯ ಎಂದು ಹೇಳಲಾಗುತ್ತಿದೆ. ಇದು ಉಗ್ರನರಸಿಂಹ ದೇವಾಲಯ ಎಂದು ಇತಿಹಾಸಕಾರರು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ಈ ಹಿಂದೆ ಇಲ್ಲಿನ ಪ್ರತಿಮೆಗಳನ್ನು ದೇವಾಲಯದ ಪಕ್ಕದಲ್ಲಿರುವ ಬಾವಿಯಲ್ಲಿ ಹಾಕಿರಬಹುದು ಎಂದು ಕೆಲವರು ಅಭಿಪ್ರಾಯ ಹೇಳಿದರೆ, ಇತಿಹಾಸಕಾರರು ಹೇಳುವ ಪ್ರಕಾರ ಹಂಪಿಯ ಅಳಿದುಳಿದ ಅನೇಕ ದೇವರ ಪ್ರತಿಮಗಳು ಕಮಲಾಪುರದ ವಸ್ತು ಸಂಗ್ರಹಾಲಯದಲ್ಲಿ ಇರಿಸಲಾಗಿದೆ. ಇನ್ನೂ ಕೆಲವನ್ನು ಕಮಲಾಪುರ ಕೆಲ ದೇವಾಲಯದಲ್ಲಿ ಇರಿಸಿ ಪೂಜೆ ಮಾಡಲಾಗುತ್ತಿದೆ ಎಂದು ಇತಿಹಾಸಕಾರರು ಹೇಳುತ್ತಾರೆ. ಲೋಕೋಪಯೋಗಿ ಇಲಾಖೆಯ ಆಧೀನದಲ್ಲಿರುವ ಐಬಿಯನ್ನು (ದೇವಾಲಯ)ದಲ್ಲಿ ಉತ್ಖನನ ನಡೆಸಿದರೆ, ಮಹತ್ತರವಾದ ಪುರಾವೆಗಳು, ಅವಶೇಷಗಳು ಕೈಗೆ ಸಿಗಬಹುದು. ಈ ಹಿಂದೆ ನಾಲ್ಕಾರು ವರ್ಷಗಳ ಹಿಂದೆ, ಭಾರತೀಯ ಪುರಾತತ್ವ ಸಂರ್ವೇಕ್ಷಣಾ ಇಲಾಖೆ, ಹಂಪಿ ಪ್ರದೇಶಾಭಿವೃದ್ಧಿ ಸಂರಕ್ಷಣಾ ಪ್ರಾಧಿಕಾರ ಈ ಪ್ರದೇಶದಲ್ಲಿ ಉತ್ಖನನ ನಡೆಸಿತ್ತು. ಇಲ್ಲಿ ಮಾನವರ ತಲೆ ಬುರಡೆ, ಅನೆ. ಹಾಗೂ ಕುದರೆಗಳ ಆಸ್ತಿ ಪಂಜರ ಸಿಕ್ಕಿವೆ. ಈ ಪ್ರದೇಶದಲ್ಲಿ ನೀರಿನ ಸಲೆ ಆಧಿಕವಾಗಿರುವುದರಿಂದ ಉತ್ಖನನ ಕಾರ್ಯಕ್ಕೆ ಅಡ್ಡಿಯಾಗಿ ಅರ್ಧಕ್ಕೆ ನಿಂತು ಹೋಯಿತು.ಈಗಲೂ ಉತ್ಖನನ ನಡೆಸಿದರೆ ಈ ಪ್ರದೇಶದಲ್ಲಿ ಪ್ರಾಚೀನ ಕುರುಹು ಇಲ್ಲಿನ ದೇವಸ್ಥಾನಕ್ಕೆ ಸಂಬಂಧಪಟ್ಟಂತೆ ಕುರಿತು ಪುರಾವೆಗಳು ಸಿಗಬಹುದು ಎಂದು ಹಂಪಿ ಕನ್ನಡ ವಿವಿ ಹಿರಿಯ ಪ್ರಾಧ್ಯಾಪಕ ವಾಸದೇವನ್ ಹೇಳುತ್ತಾರೆ.

ಈ ದೇವಾಲಯ ಐಬಿಯಾಗಿ ಪರಿವರ್ತನೆಯಾಗಿ ನೂರಾರು ವರ್ಷಗಳೇ ಉರುಳಿದ್ದರೂ, ಸಂಬಂಧಪಟ್ಟ ಇಲಾಖೆ ಹಾಗೂ ಸರ್ಕಾರದ ಗಮನಕ್ಕೆ ಬರಲ್ಲಿಲ್ಲವೇ ಎನ್ನುವ ಪ್ರಶ್ನೆ ಜನರು ಕಾಡುತ್ತೆದೆ

ಭಾರತೀಯ ಪುರಾತತ್ವ ಸಂರ್ವೇಕ್ಷಣಾ ಇಲಾಖೆ 3600ಕ್ಕೂ ಹೆಚ್ಚು ಸ್ಮಾರಕಗಳನ್ನು ಸಂರಕ್ಷಣೆ ಹಾಗೂ ನಿರ್ವಹಣೆ ಮಾಡುತ್ತಿದೆ. ಕಮಲಾಪುರ ಪ್ರವಾಸಿ ಮಂದಿರದಲ್ಲಿರುವ ಸ್ಮಾರಕ ಕುರಿತು ಇತಿಹಾಸಕಾರರು, ಅಧ್ಯಯನಕಾರರು, ರಾಜ್ಯ ಸರ್ಕಾರಕ್ಕೆ ಮನವರಿಕೆ ಮಾಡಿಕೊಡಬಹುದಾಗಿದೆ. ಸರ್ಕಾರದಿಂದ ಇಲಾಖೆಗೆ ಆದೇಶ ನೀಡಿದರೆ, ಐಬಿಯಾಗಿ ಪರಿವರ್ತನೆಯಾಗಿರುವ ದೇವಾಲಯವನ್ನು ಪ್ರದೇಶದಲ್ಲಿ ಉತ್ಖನನ ನಡೆಸಬಹುದಾಗಿದೆ.

ತೇಜಸ್ವಿ
ಭಾರತೀಯ ಪುರಾತತ್ವ ಸಂರ್ವೇಕ್ಷಣಾ ಇಲಾಖೆ ಅಧಿಕಾರಿ

ಹಂಪಿ.
ಬ್ರಿಟೀಷರ ಕಾಲದಲ್ಲಿ ವೈಷ್ಣವ ದೇವಾಲಯ ಐಬಿಯಾಗಿ ಮಾರ್ಪಾಡಾಗಿದೆ. ಆದರೆ, ಐಬಿಯಲ್ಲಾಗಲಿ ಹಾಗೂ ಅವರಣದಲ್ಲಾಗಲಿ ಯಾವುದೇ ದುರಸ್ತಿ ಅಥಾವ ಅಭಿವೃದ್ಧಿ ಕೆಲಸಗಳನ್ನು ಕೈಗೊಳ್ಳುವಂತಿಲ್ಲ. ಹೀಗಾಗಿ ಇಲಾಖೆ ಸಿಬ್ಬಂದಿ ಐಬಿ ಆವರಣದಲ್ಲಿ ಹಗಲು ರಾತ್ರಿ ಕಾವುಲು ಇರುತ್ತಾರೆ.

ಶಶಿಧರಯ್ಯ
ಎಇಇ
ಲೋಪೋಪಯೋಗಿ ಇಲಾಖೆ
ಹೊಸಪೇಟಿ