ಸಿಡಿಲು ಬಡಿದು ಎತ್ತುಗಳು ಬಲಿ

321

ಬಳ್ಳಾರಿ /ಕೂಡ್ಲಿಗಿ :ಎತ್ತುಗಳು ಸಾವು ಗುಡುಗು ಸಹಿತ ಇಂದು ಮಳೆಯಾಗಿದ್ದು, ಸಿಡಿಲಿಗೆ ಎರಡು ಎತ್ತುಗಳು ಮೃತಪಟ್ಟಿವೆ. ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಕೈವಲ್ಯಾಪುರ ಗ್ರಾಮದಲ್ಲಿ ಘಟನೆ ನಡೆದಿದ್ದು, ರೈತ ಹನುಮಂತಪ್ಪ ಎಂಬುವರಿಗೆ ಸೇರಿದ ಎತ್ತುಗಳು ಮೃತಪಟ್ಟಿವೆ. ಅಂದಾಜು ೮೦ ಸಾವಿರ ಮೌಲ್ಯ ರೈತನಿಗೆ ಹಾನಿಯಾಗಿದ್ದು, ರೈತನಿಗೆ ನಷ್ಟ ಎದುರಾಗಿದೆ. ಇಂದು ಮಧ್ಯಾನ್ಹ ಗುಡುಗು ಸಹಿತ ಮಳೆಯಾಗಿದ್ದು, ಆ ಸಮಯದಲ್ಲಿ ಸಿಡಿಲು ಬಡಿದು ಎರಡು ಎತ್ತುಗಳು ಸ್ಥಳದಲ್ಲೇ ಮೃತಪಟ್ಟಿವೆ.ಕೂಡ್ಲಿಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಸ್ಥಳಕ್ಕೆ ಪಶು ಸಂಗೋಪನಾ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.