ರಾಜ್ಯ ಹಿಂದುಳಿದ ವರ್ಗಗಳ ಜೆಡಿಎಸ್ ಉಪಾಧ್ಯಕ್ಷರ ಆಯ್ಕೆ

205

ಬೆಂಗಳೂರು/ಕೆ.ಆರ್ ಪುರ: ಹಿಂದುಳಿದ ವರ್ಗಗಳ ರಾಜ್ಯದ ಜೆ.ಡಿ.ಎಸ್ ಉಪಾಧ್ಯಕ್ಷರಾಗಿ ಡಿ ಎ ಸುರೇಷ್, ಬೆಂ.ನ.ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಸೋಮಶೇಖರನ್ನು ನೇಮಕ ಮಾಡಿದ್ದಾರೆ. ಮುಂದಿನ ವಿಧಾನ ಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಬೂತ್ ಮಟ್ಟದಿಂದ ಪಕ್ಷವನ್ನು ಮೇಲೆತ್ತಲು ಜೆಡಿಎಸ್ ಪಕ್ಷ ಶ್ರಮ ಪಡುತ್ತಿದ್ದು, ಅದರಂತೆಯೇ ನೂತನವಾಗಿ ಉತ್ತಮ ಕಾರ್ಯಕರ್ತರನ್ನು ಗುರುತಿಸಿ ಅವರಿಗೆ ಹೊಸ ಜವಾಬ್ದಾರಿಗಳನ್ನು ನೀಡಲಾಗಿಗೆ..೨೦೧೮ ರಲ್ಲಿ ಬರುವ ಚುನಾವಣೆಗೆ ತಳಮಟ್ಟದಿಂದ ಶ್ರಮವಹಿಸಿ ಜೆಡಿಎಸ್ ಪಕ್ಷದ ಬೆಳವಳಿಗೆಗೆ ಶ್ರಮಿಸುವುದಾಗಿ ಅಧಿಕಾರ ಸ್ವೀಕರಿಸಿ ತಿಳಿಸಿದರು. ಕೆ.ಆರ್ ಪುರ ಕ್ಷೇತ್ರದ ಅಧ್ಯಕ್ಷ ಪ್ರಕಾಶ್ ರೆಡ್ಡಿ, ಸಂಪಗಿರಾಮಯ್ಯ, ವಿ ಶಂಕರ್, ರಾಜೇಷ್, ಎಂ.ನಾಗೇಶ್ ಮತ್ತಿತರರು ನೂತನವಾಗಿ ಆಯ್ಕೆಯಾದವರನ್ನು ಅಭಿನಂದಿಸಿದರು.