ಸ್ಯಾಂಸಂಗ್ ಎಸ್ ೮ ತಟಿ ತಾಪ್ಸಿ ಮಾರುಕಟ್ಟೆಗೆ

239

ಬೆಂಗಳೂರು/ಕೆ.ಆರ್.ಪುರ: ಮೊಬೈಲ್ ಪೋನ್ ಗಳ ತಯಾರಿಕೆಯಲ್ಲಿ ಮುಂಚೂಣಿಯಲ್ಲಿರುವ ಸ್ಯಾಂಸಂಗ್ ಕಂಪನಿಯ ಎಸ್ ೮ ಮೊಬೈಲ್ ತಟಿ ತಾಪ್ಸಿ ಬಿಡುಗಡೆಗೊಳಿಸಿದ್ದಾರೆ. ಬೆಂಗಳೂರಿನ ಮಹದೇವಪುರದ ಫಿನಿಕ್ಸ್ ಮಾರ್ಕೆಟ್ ಸಿಟಿಯಲ್ಲಿನ ರಿಲಯನ್ಸ್ ಮಾರ್ಟ್ ನಲ್ಲಿ ದಕ್ಷಿಣ ಭಾರತದ ಖ್ಯಾತ ನಟಿ ತಾಪ್ಸಿ ಪನ್ನು ಮೊಬೈಲ್ ಬಿಡುಗಡೆಗೊಳಿಸಿದ್ದು, ಮೊದಲು ಫೋನ್ ಕೊಂಡ ಹತ್ತು ಗ್ರಾಹಕರಿಗೆ ತಾಪ್ಸಿ ಪೋನ್ ಗಳನ್ನು ವಿತರಿಸಿದರು. ಈ ಮಧ್ಯೆ ಅಭಿಮಾನಿಗಳು ತಮ್ಮ ನೆಚ್ಚಿನ ನಟಿಯನ್ನು ನೋಡಿ ಹರ್ಷ ವ್ಯಕ್ತ ಪಡಿಸಿದರು. ಅಲ್ಲದೆ ಮೊದಲು ಹತ್ತು ಪೊನ್ ಪಡೆದ ಗ್ರಾಹಕರು ಮತ್ತು ತಮ್ಮ ಕುಟುಂಬದ ಸದಸ್ಯರು ನಮ್ಮ ನಟಿಯೊಂದಿಗೆ ಪೊಟೋ ತೆಗೆಸಿಕೊಂಡು ಖುಷಿ ಪಟ್ಟರು. ತಪ್ಸಿ ಬರುವ ಹಿನ್ನೆಲೆಯಲ್ಲಿ ತಮ್ಮ ಖ್ಯಾತ ನಟಿಯನ್ನು ನೊಡಲು ನೂರಾರು ಮಂದಿ ಅಭಿಮಾನಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿ ಸಂತಸ ಪಟ್ಟರು.