ಅಸಭ್ಯ ಶಾಸಕನ ದುಂಡಾವರ್ತನೆ…?

1003

ಬಳ್ಳಾರಿ: ಸರ್ಕಾರಿ ಅಧಿಕಾರಿಗಳ ಮೇಲೆ ಹಗರಿಬೊಮ್ಮನಹಳ್ಳಿ ಶಾಸಕ ಬೀಮಾನಾಯ್ಕನ ದೌರ್ಜನ್ಯ. ಹಗರಿಬೊಮ್ಮನಹಳ್ಳಿ ಯ ಸಿಡಿಪಿಓಗೆ ಸಭ್ಯತೆಯನ್ನು ಮರೆತು ಕೀಳು ಪದಗಳನ್ನ ಬಳಸಿಹೀನಾ ಮಾನವಾಗಿ ಬಯ್ದು ದಮ್ಕಿ ಹಾಕಿದ ಶಾಸಕ.

ಶಾಸಕನ ಅವಾಜ್ ಗೆ ಜಗ್ಗದೆ ಪ್ರತಿ ಸವಾಲ್ ಹಾಕಿ ಬೇಕಾಗಿದ್ದನ್ನ ಮಾಡಿಕೊಳ್ಳಿ ಅಂತಾ ಜಾಡಿಸಿದ ಅಧಿಕಾರಿ. ಶಾಸಕರ ದುಂಡಾವರ್ತನೆಗೆ ಸಾರ್ವಜನಿಕ ವಲಯದಲ್ಲಿ ಆಕ್ರೋಶ. ಶಾಸಕ ಭೀಮನಾಯ್ಕ್ ಮತ್ತು ಹೊಸಪೇಟೆ ಸಿಡಿಪಿಒರ ನಡುವೆ ನಡೆದ ಸಂಭಾಷಣೆಯ ಹಿನ್ನೆಲೆ. ಮರಿಯಮ್ಮನಹಳ್ಳಿ ಸಮೀಪದ ಜಿ.ನಾಗಲಾಪುರ ಗ್ರಾಮದ ಒಂದನೇ ಅಂಗನವಾಡಿ ಕೇಂದ್ರದಲ್ಲಿ 2012ರಲ್ಲಿ ತೆರವಾದ ಅಂಗನವಾಡಿ ಕಾರ್ಯಕರ್ತೆಯ ಸ್ಥಾನಕ್ಕೆ ನಡೆದ ಪೈಪೋಟಿ ಮುಖ್ಯ ಕಾರಣವಾಗಿತ್ತು.

ಆಗ ತೆರವಾದ ಸ್ಥಾನ ತುಂಬಲು ಇಲಾಖೆಯಿಂದ ಅರ್ಜಿ ಆಹ್ವಾನಿಸಲಾಗಿತ್ತು. ಸುಮಾರು ನಾಲ್ಕು ಅರ್ಜಿಗಳು ಬಂದಿದ್ದವು. ಅದರಲ್ಲಿ ಹೆಚ್.ಸೋಮವ್ವ ಎನ್ನುವಾಕೆ ಅಂಗವಿಕಲೆಯಾಗಿದ್ದರು. ಈ ಕಾರಣದಿಂದ ಗ್ರಾಮದಲ್ಲಿ ಅಂಗವಿಕಲರಿಗೆ ಪ್ರಿಪ್ರೆನ್ಸ್ ನೀಡುವ ಸಲುವಾಗಿ ಅವರಿಗೆ ಮಾಡಬೇಕೆನ್ನುವ ಮಾತುಗಳು ಕೇಳಿ ಬಂದಿದ್ದವು. ಆದರೆ ಆ ಸಮಯದಲ್ಲಿ ಮಾಜಿ ಶಾಸಕ ಕೆ.ನೇಮಿರಾಜ್ ಶಾಸಕರಾಗಿದ್ದು ,ಅವರ ಅರ್ಜಿಯನ್ನು ತಿರಸ್ಕಾರ ಮಾಡಲಾಗಿತ್ತು.

ಬದಲಿಗೆ ಅವರ ಬೆಂಬಲಿಗರ ಮಹಿಳೆ ವಾಣಿಶ್ರೀ ಅವರಿಗೆ ಅಂಗನವಾಡಿ ಕಾರ್ಯಕರ್ತೆಯನ್ನು ಮಾಡಬೇಕು ಎನ್ನುವ ಮಹಾಂನ್ ಕನಸು ಆಗಿನ ಶಾಸಕ ಕೆ.ನೇಮಿರಾಜ್ ನಾಯ್ಕ್ ರದ್ದಾಗಿತ್ತು. ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಈ ಬಗ್ಗೆ ಸಾಕಷ್ಟು ಅಗ್ಗ ಜಗ್ಗಾಟ ನಡೆದವು. ಇದು ಸಂಪೂರ್ಣ ರಾಜಕೀಯವಾಗುತ್ತಿದ್ದಂತೆ.

ಕೆಲ ಗ್ರಾಮಸ್ಥರ ಮೇರೆಗೆ ಅಂಗವಿಕಲೆ ಹೆಚ್.ಸೋಮವ್ವ ಕೋರ್ಟ್ ಮೆಟ್ಟಿಲೇರಬೇಕಾಯಿತು. ಅಲ್ಲಿಂದ ಇಲ್ಲಿಯವರೆಗೂ ಗ್ರಾಮದಲ್ಲಿನ ಇನ್ನೊದು ಕೇಂದ್ರದ ಕಾರ್ಯಕರ್ತೆಯನ್ನು ಹೆಚ್ಚುವರಿಯಾಗಿ ನೇಮಿಸಿದ್ದರು. ಇದರಿಂದ ಹೇಗೋ ಅಂಗನವಾಡಿ ಕೇಂದ್ರ ಸಾಗುತ್ತಿತ್ತು. ಆದರೆ ಕಳೆದ ತಿಂಗಳು ಹಿಂದೆ ತಾಲೂಕಿನಲ್ಲಿ ಖಾಲಿಯಾದ ಅಂಗನವಾಡಿ ಕೇಂದ್ರಗಳಿಗೆ ಅರ್ಜಿ ಆಹ್ವಾನಿಸಗಾಗಿತ್ತು.

ಈ ನಿಮಿತ್ತ ಮತ್ತೆ ಆ ಕೇಂದ್ರಕ್ಕೆ ಕೆಲ ಅರ್ಜಿಗಳು ಬಂದಿದ್ದು, ಅಧಿಕಾರಿಗಳ ಮತ್ತು ಸ್ಥಳೀಯ ಗ್ರಾಪಂ ಜನ ಪ್ರತಿನಿಧಿಗಳ ಮಧ್ಯೆ ಜಗಳ ತಾರಕ್ಕೇರಿದೆ. ಈ ಜಗಳ ಹಬೋಹಳ್ಳಿ ಕ್ಷೇತ್ರದ ಹಾಲಿ ಶಾಸಕ ಭೀಮನಾಯ್ಕ್ ಅಂಗಳಕ್ಕೆ ತಲುಪಿದ್ದು,ಮತ್ತೆ ರಾಜಕೀಯ ನಡೆಯುತ್ತಿದೆ.

ಆಗ ಬಿಜೆಪಿ ಶಾಸಕ ನೇಮಿರಾಜ್ ನಾಯ್ಕ್ ಒಂದು ರೀತಿ ರಾಜಕೀಯ ಮಾಡಿದರೆ, ಈಗ ಅತಂತ್ರ ಪಕ್ಷದಲ್ಲಿರುವ ಶಾಸಕ ಭೀಮನಾಯ್ಕ್ ರದ್ದು ಒಂದು ರೀತಿಯಾ ರಾಜಕೀಯವಾಗಿದೆ. ಇವರ ಮಧ್ಯೆ ನಿಷ್ಠೆಯಿಂದ ಸರ್ಕಾರಿ ಸೇವೆಯಲ್ಲಿ ಸೇವೆ ಸಲ್ಲಿಸುತ್ತಿರುವ ಅಧಿಕಾರಿಗಳಿಗೆ ಬೆಲೆ ಇಲ್ಲದಂತಾಗಿದೆ. ಕಳೆದ ಏ.26ರಂದು ಶಾಸಕ ಭೀಮನಾಯ್ಕ್ ಮತ್ತು ಹೊಸಪೇಟೆ ಸಿಡಿಪಿಒ ಪ್ರಭಾಕರ್ ನಡುವೆ ನಡೆದ ಸಂಭಾಷಣೆ ಸಾಕ್ಷಿ.